ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Sitapur Hate Speech Case : ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕಿದ ಕೇಸರಿ ವಸ್ತ್ರಧಾರಿ ಅರೆಸ್ಟ್

|
Google Oneindia Kannada News

ಲಕ್ನೋ ಏಪ್ರಿಲ್ 14: ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಉತ್ತರ ಪ್ರದೇಶದ ಕೇಸರಿ ವಸ್ತ್ರಧಾರಿಯನ್ನು ಬಂಧಿಸಲಾಗಿದೆ. ರಾಜ್ಯದ ರಾಜಧಾನಿ ಲಕ್ನೋದಿಂದ 100 ಕಿಮೀ ದೂರದಲ್ಲಿರುವ ಸೀತಾಪುರದಿಂದ ಖೈರಾಬಾದ್‌ನಲ್ಲಿರುವ ಮಹರ್ಷಿ ಲಕ್ಷ್ಮಣ್ ದಾಸ್ ಉದಾಸಿನ್ ಆಶ್ರಮದ ಮುಖ್ಯಸ್ಥ ಭಜರಂಗ ಮುನಿ ದಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಎಪ್ರಿಲ್ 2ರಂದು ಪೊಲೀಸರ ಸಮ್ಮುಖದಲ್ಲಿ ಧಾರ್ಮಿಕ ಮೆರವಣಿಗೆಯಲ್ಲಿ ಆಘಾತಕಾರಿ ಬೆದರಿಕೆಗಳನ್ನು ಹಾಕಿದ ಭಜರಂಗ ಮುನಿ ದಾಸ್‌ನನ್ನು 11 ದಿನಗಳ ನಂತರ ಬಂಧಿಸಲಾಗಿದೆ. ಇವರು ಮಾಡಿದ ಭಾಷಣದ ಎರಡು ನಿಮಿಷಗಳ ವಿಡಿಯೊದಲ್ಲಿ ಅತ್ಯಾಚಾರ ಬೆದರಿಕೆಗಳನ್ನು ಹಾಕಿದ್ದಾರೆ. ಈ ವಿಡಿಯೋ ಕಳೆದ ಶುಕ್ರವಾರ ವೈರಲ್ ಆಗಿತ್ತು, ರಾಷ್ಟ್ರೀಯ ಮಹಿಳಾ ಆಯೋಗ ಕೂಡ ದಾಸ್ ನನ್ನು ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿತ್ತು. ಇಂತಹ ಕಾಮೆಂಟ್‌ಗಳಿಗೆ ಪೊಲೀಸರು ಮೂಕಪ್ರೇಕ್ಷಕರಾಗಲು ಸಾಧ್ಯವಿಲ್ಲ ಎಂದು ಹೇಳಿ ಅವರನ್ನು ಬಂಧಿಸುವಂತೆ ಆಯೋಗ ಕೋರಿತ್ತು.

ಅತ್ಯಾಚಾರದ ಬೆದರಿಕೆ: ಧಾರ್ಮಿಕ ಮುಖಂಡ ಭಜರಂಗ ಮುನಿ ವಿರುದ್ಧ ಕ್ರಮಕ್ಕೆ NCW ಒತ್ತಾಯಅತ್ಯಾಚಾರದ ಬೆದರಿಕೆ: ಧಾರ್ಮಿಕ ಮುಖಂಡ ಭಜರಂಗ ಮುನಿ ವಿರುದ್ಧ ಕ್ರಮಕ್ಕೆ NCW ಒತ್ತಾಯ

ನಂತರ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು. ಭಜರಂಗ ಮುನಿ ದಾಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದ್ವೇಷ ಭಾಷಣ, ಅವಹೇಳನಕಾರಿ ಹೇಳಿಕೆಗಳು ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಬಜರಂಗ ಮುನಿ ಕ್ಷಮೆ ಯಾಚಿಸುವ ವಿಡಿಯೋ ಕಾಣಿಸಿಕೊಂಡಿದೆ. "ನನ್ನ ಹೇಳಿಕೆಯನ್ನು ತಪ್ಪು ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಅದಕ್ಕಾಗಿ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ" ಎಂದು ಅವರು ಹೇಳಿದರು.

uttar apradesh: Bajrang Muni arrested for threatening rape

ಕಳೆದ ತಿಂಗಳುಗಳಲ್ಲಿ, ಹರಿದ್ವಾರದಲ್ಲಿ ಸೇರಿದಂತೆ ಅತಿರೇಕದ ದ್ವೇಷದ ಭಾಷಣಗಳ ಸರಣಿಗಳು ನಡೆದಿವೆ. ಅಲ್ಲಿ ಮುಸ್ಲಿಮರ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಮತ್ತು ನರಮೇಧ ಮಾಡಲು ಮುಕ್ತ ಕರೆಗಳನ್ನು ನೀಡಲಾಯಿತು. ಈ ಕರೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಐದು ಮಾಜಿ ಮುಖ್ಯಸ್ಥರು ಮತ್ತು ಅಧಿಕಾರಿಗಳು ಮತ್ತು ಪ್ರಮುಖ ನಾಗರಿಕರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ "ಭಾರತೀಯ ಮುಸ್ಲಿಮರ ನರಮೇಧದ ಬಹಿರಂಗ ಕರೆ" ಕುರಿತು ಪತ್ರ ಬರೆದಿದ್ದರು. ಆ ಬಳಿಕ ನಮ್ಮ ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ರಕ್ಷಿಸಲು ನರಮೇಧದ ಬಹಿರಂಗ ಕರೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಯತಿ ನರಸಿಂಹಾನಂದ್ ಬಂಧಿಸಲಾಗಿತ್ತು. ಆದರೆ ಇವರು ಒಂದು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಮಾತ್ರವಲ್ಲದೆ ಮೊನ್ನೆಯಷ್ಟೇ ದೆಹಲಿಯಲ್ಲಿ ಮತ್ತೊಂದು ದ್ವೇಷದ ಭಾಷಣವನ್ನು ಮಾಡಿದ್ದಾರೆ. ಅಲ್ಲಿ ಅವರು ಮತ್ತೆ ಮುಸ್ಲಿಮರ ವಿರುದ್ಧ ಶಸ್ತ್ರಾಸ್ತ್ರಗಳ ಬಳಕೆಗೆ ಕರೆ ನೀಡಿದ್ದಾರೆ.

uttar apradesh: Bajrang Muni arrested for threatening rape

ಜೊತೆಗೆ ದ್ವೇಷ ಭಾಷಣ ಪ್ರಕರಣಗಳ ತನಿಖೆ ಮತ್ತು ಕ್ರಮ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಏಪ್ರಿಲ್ 22 ರೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸೂಚಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಹರಿದ್ವಾರದಂತೆಯೇ ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 17ರಂದು ಇದೇ ರೀತಿಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

English summary
Religious Leader Bajrang Muni arrested for threatening to kidnap and rape muslim women in public while he was addressing a gathering in Sitapur district in Uttar Pradesh. NCW Insist on action. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X