ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: 'ಎಸ್‌ಪಿ ಅಧಿಕಾರಕ್ಕೆ ಬಂದರೆ ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಾರೆ'

|
Google Oneindia Kannada News

ಮೀರತ್, ಜನವರಿ 27: ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರ ರಂಗೇರುತ್ತಿವೆ. ಈ ನಡುವೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿಲ್ ಚೌಧರಿ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು "ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ. ನಾವು ಅವರನ್ನು ಬಿಡುವುದಿಲ್ಲ" ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋ ಎಸ್‌ಪಿಯನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿಯನ್ನು ಪ್ರೇರೇಪಿಸಿದೆ. ವೈರಲ್ ವೀಡಿಯೊದಲ್ಲಿ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದಾಗ ಒಬ್ಬ ವ್ಯಕ್ತಿಯನ್ನು ಸಹ ಬಿಡುವುದಿಲ್ಲ ಎಂದು ಚೌಧರಿ ಹೇಳುವುದನ್ನು ಕೇಳಬಹುದು.

"ನೀವೆಲ್ಲರೂ ಟೆನ್ಷನ್ ಫ್ರೀ ಆಗಿರಿ! ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತದೆ. ಇನ್ಶಾ ಅಲ್ಲಾ, ನಾವು ಅವರನ್ನು ಬಿಡುವುದಿಲ್ಲ. ಅವರು ನಮ್ಮ ವಿರುದ್ಧ ಅಪರಾಧಗಳನ್ನು ನಡೆಸುತ್ತಿರುವ ರೀತಿ.... ಈ ಎಲ್ಲಾ ನಡೆಗಳ ವಿರುದ್ಧ ನಾವು ಸೇಡು ತೀರಿಸಿಕೊಳ್ಳುತ್ತೇವೆ. ಅವರು ತಮ್ಮ ತಪ್ಪುಗಳನ್ನು ಅರಿತುಕೊಳ್ಳುತ್ತಾರೆ, ಅವರು ನಮಗೆ ಹಾನಿ ಮಾಡುವ ಮೊದಲು 100 ಬಾರಿ ಯೋಚಿಸುತ್ತಾರೆ. ಅವರು ತಮ್ಮ ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಾರೆ. ನನ್ನ ಸಹೋದರರೇ, ಅವರ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ"ಎಂದು ಅವರು ವೈರಲ್ ಕ್ಲಿಪ್‌ನಲ್ಲಿ ಹೇಳಿದ್ದಾರೆ. ಚೌಧರಿಯವರ ಮಾತುಗಳನ್ನು ಕೇಳಿದ ಜನರು ಅವರ ಮಾತುಗಳನ್ನು ಕೇಳಿ ಚಪ್ಪಾಳೆ ತಟ್ಟಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ತಮ್ಮ ಪೋಸ್ಟ್‌ನಲ್ಲಿ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಮೀರತ್ ದಕ್ಷಿಣದ ಎಸ್‌ಪಿ ಅಭ್ಯರ್ಥಿ ಆದಿಲ್ ಚೌಧರಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. 'ನಮ್ಮ ಸರ್ಕಾರ ಬಂದರೆ, ನಾವು ಅದನ್ನು ಬಿಡುವುದಿಲ್ಲ... ಸೆಲೆಕ್ಟಿವ್ ಆಗಿ ಸೇಡು ತೀರಿಸಿಕೊಳ್ಳುತ್ತೇವೆ' ಎಂದ ಹೇಳಿದ್ದಾರೆ. ಅಖಿಲೇಶ್ ಯಾದವ್ ಇಲ್ಲಿ ನಹಿದ್ ಹಸನ್, ಆದಿಲ್ ಚೌಧರಿ ಅವರಂತಹ ಹಿಂದೂ ವಿರೋಧಿ ಗೂಂಡಾಗಳಿಗೆ ಟಿಕೆಟ್ ನೀಡಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

UP: Threat to BJP From SP Candidate
ಈಗಾಗಲೇ ಬಿಜೆಪಿ ಸಮಾಜವಾದಿ ಪಕ್ಷಕ್ಕೆ ಉತ್ತರಪ್ರದೇಶ ಸಿಕ್ಕರೆ ಅದು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತದೆ ಎನ್ನುವ ಮೂಲಕ ಹರಿಹಾಯ್ದಿದೆ. ಜೊತೆಗೆ ಎಸ್‌ಪಿ ಗುಂಡಾಗಳಿಗೆ ಮುಂದಿನ ಚುನಾವಣೆಗೆ ಟಿಕೆಟ್ ನೀಡುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಎಸ್‌ಪಿ ಗೆದ್ದರೆ ಗೂಂಡಾ ಸಾಮಾಜ್ರ ನಿರ್ಮಾಣವಾಗುತ್ತದೆ ಎಂದು ಆರೋಪಿಸಿದೆ. ಮಾತ್ರವಲ್ಲದೇ 2022ರ ವಿಧಾನಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಮುಲಾಯಂಗೆ ನಿಕಟವಾಗಿದ್ದ ಮತ್ತು ಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಗಾಯತ್ರಿ ಪ್ರಜಾಪತಿ ಅವರ ಪತ್ನಿ ಮಹಾರಾಣಿ ದೇವಿಗೆ ಎಸ್‌ಪಿ ಟಿಕೆಟ್ ನೀಡಿದೆ. ಗಾಯತ್ರಿ ಅವರನ್ನು ಮುಲಾಯಂ ಸಿಂಗ್ ಯಾದವ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಈತ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅತ್ಯಾಚಾರ ಆರೋಪಿಯ ಪತ್ನಿಗೆ ಟಿಕೆಟ್ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತಿವೆ. ಇದರ ನಡುವೆ ಎಸ್‌ಪಿ ಅಭ್ಯರ್ಥಿಯ ಈ ಹೇಳಿಕೆ ಬಿಜೆಪಿಗೆ ಎಸ್‌ಪಿ ವಿರುದ್ಧ ಹರಿಹಾಯಲು ಮತ್ತೊಂದು ಕಾರಣ ಸಿಕ್ಕಂತಾಗಿದೆ.

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಉತ್ತರ ಪ್ರದೇಶ ಚುನಾವಣೆಯ ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, 5 ನೇ ಹಂತ ಫೆಬ್ರವರಿ 27 ರಂದು, ಮಾರ್ಚ್ 3 ಮತ್ತು 7 ರಂದು 6 ನೇ ಹಂತ ಮತ್ತು ಮಾರ್ಚ್ 7 ರಂದು ಕೊನೆಯ ಹಂತವನ್ನು ನಡೆಸಲಾಗುವುದು. ಉತ್ತರ ಪ್ರದೇಶದ 403, ಪಂಜಾಬ್‌ನ 117, ಉತ್ತರಾಖಂಡದ 70, ಮಣಿಪುರದ 60 ಮತ್ತು ಗೋವಾದ 40 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

English summary
A viral video of Samajwadi Party (SP) leader Adil Chaudhary surfaced on social media where he is allegedly heard issuing threats claiming, "Our government will be formed in Uttar Pradesh. We will not spare them
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X