ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಗಾಯತ್ರಿ ಪ್ರಜಾಪತಿ ಪತ್ನಿಗೆ ಎಸ್ಪಿ ಟಿಕೆಟ್- ಬಿಜೆಪಿ ವಾಗ್ದಾಳಿ

|
Google Oneindia Kannada News

ಲಕ್ನೋ ಜನವರಿ 27: 2022ರ ವಿಧಾನಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಮುಲಾಯಂಗೆ ನಿಕಟವಾಗಿದ್ದ ಮತ್ತು ಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಗಾಯತ್ರಿ ಪ್ರಜಾಪತಿ ಅವರ ಪತ್ನಿ ಮಹಾರಾಣಿ ದೇವಿಗೆ ಎಸ್‌ಪಿ ಟಿಕೆಟ್ ನೀಡಿದೆ. ಗಾಯತ್ರಿ ಅವರನ್ನು ಮುಲಾಯಂ ಸಿಂಗ್ ಯಾದವ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಈತ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅತ್ಯಾಚಾರ ಆರೋಪಿಯ ಪತ್ನಿಗೆ ಟಿಕೆಟ್ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತಿವೆ. ಇದಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸ್ಪಷ್ಟನೆ ನೀಡಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಗಾಯತ್ರಿ ಪ್ರಜಾಪತಿ ತಪ್ಪಿತಸ್ಥರು ಎಂದು ಅಖಿಲೇಶ್ ಹೇಳಿದ್ದಾರೆ. ಆತನ ವಿರುದ್ಧ ಪ್ರಕರಣಗಳಿವೆ. ಆದರೆ ಆತನ ಪತ್ನಿ ವಿರುದ್ಧ ಒಂದೇ ಒಂದು ಪ್ರಕರಣವೂ ಇಲ್ಲ. ಅವರು ನಿರಪರಾಧಿ ಎಂದು ಸಮರ್ಥಿಸಿಕೊಂಡಿದ್ದಾರೆ.

'ಎಸ್ಪಿ ಸಹೋದರಿ ಮತ್ತು ಪುತ್ರಿಯರನ್ನು ಅವಮಾನಿಸಿದ್ದಾರೆ'

'ಎಸ್ಪಿ ಸಹೋದರಿ ಮತ್ತು ಪುತ್ರಿಯರನ್ನು ಅವಮಾನಿಸಿದ್ದಾರೆ'

ಗಾಯತ್ರಿ ಪ್ರಜಾಪತಿ ಅವರ ಪತ್ನಿ ಮಹಾರಾಣಿ ದೇವಿಗೆ ಟಿಕೆಟ್‌ ನೀಡಿರುವ ಕುರಿತು ಉಪ ಮುಖ್ಯಮಂತ್ರಿ ಕೇಶವ್‌ ಮೌರ್ಯ ಅವರು, ಎಸ್‌ಪಿ ವರಿಷ್ಠ ಅಖಿಲೇಶ್‌ ಸಹೋದರಿ ಮತ್ತು ಪುತ್ರಿಯರನ್ನು ಅವಮಾನಿಸುವವರಿಗೆ ಟಿಕೆಟ್‌ ನೀಡುವ ಮೂಲಕ ಸಮಾಜ ವಿರೋಧಿ ಮುಖ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎಸ್‌ಪಿ ಅಭ್ಯರ್ಥಿಗಳ ವಿರುದ್ಧ ಸಂಬಿತ್ ಪಾತ್ರಾ ವಾಗ್ದಾಳಿ

ಎಸ್‌ಪಿ ಅಭ್ಯರ್ಥಿಗಳ ವಿರುದ್ಧ ಸಂಬಿತ್ ಪಾತ್ರಾ ವಾಗ್ದಾಳಿ

ಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಬಿಜೆಪಿ ನಿರಂತರ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ ನಾಯಕ ಸಂಬಿತ್ ಪಾತ್ರಾ, ಎಸ್‌ಪಿ ಪಟ್ಟಿಯನ್ನು ವ್ಯಂಗ್ಯವಾಡುತ್ತಾ, ಗೂಂಡಾಗಳು ಮತ್ತು ಕ್ರಿಮಿನಲ್‌ಗಳನ್ನು ಕಣಕ್ಕಿಳಿಸುವುದು ಸಮಾಜವಾದಿ ಪಕ್ಷದ ನಿಲುವಾಗಿದೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲ, ಯೋಗಿ ಸರ್ಕಾರದ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಕೂಡ ಸಮಾಜವಾದಿ ಪಕ್ಷ ಗೂಂಡಾಗಳ ಪಕ್ಷ ಎಂದು ಅಖಿಲೇಶ್ ಯಾದವ್ ಸಾಬೀತು ಮಾಡಿದ್ದಾರೆ ಎಂದು ದೂರಿದ್ದಾರೆ.

ವಾಸ್ತವವಾಗಿ ಗಾಯತ್ರಿಯನ್ನು ಮುಲಾಯಂ ಸಿಂಗ್ ಯಾದವ್‌ಗೆ ಹತ್ತಿರವೆಂದು ಪರಿಗಣಿಸಲಾಗಿದೆ. ಈತ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅದೇ ಸಮಯದಲ್ಲಿ ಅಜಂ ಖಾನ್ ಕೂಡ ಜೈಲಿನಲ್ಲಿದ್ದಾನೆ. ಇತ್ತೀಚೆಗಷ್ಟೇ ದರೋಡೆಕೋರರ ಪ್ರಕರಣದಲ್ಲಿ ನಹಿದ್ ಹಸನ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

'ವಿಧಾನಸಭಾ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ'

'ವಿಧಾನಸಭಾ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ'

ಗಾಯತ್ರಿ ಪ್ರಜಾಪತಿ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಮೋದಿ ಅಲೆಯ ನಂತರವೂ ಅವರು ಕಠಿಣ ಹೋರಾಟ ನೀಡಿದರು. ಈ ಚುನಾವಣೆಯಲ್ಲಿ ಬಿಜೆಪಿಯ ಗರಿಮಾ ಸಿಂಗ್ 64,226 ಮತಗಳನ್ನು ಪಡೆದಿದ್ದಾರೆ. ಇದೇ ವೇಳೆ ಗಾಯತ್ರಿ ಪ್ರಸಾದ್ ಪ್ರಜಾಪತಿ 59,161 ಸಾವಿರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಿಎಸ್‌ಪಿಯ ರಾಮ್ ಜಿ 30,175 ಮತಗಳನ್ನು ಮತ್ತು ಕಾಂಗ್ರೆಸ್‌ನ ಅಮಿತಾ ಸಿಂಗ್ 20,291 ಮತಗಳನ್ನು ಪಡೆದಿದ್ದರು. ಈ ಬಾರಿಯೂ ವಿಧಾನಸಭಾ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಆದರೆ, ಗಾಯತ್ರಿ ಪ್ರಜಾಪತಿ ಪತ್ನಿಗೆ ಟಿಕೆಟ್ ನೀಡುವ ಮೂಲಕ ಎಸ್ಪಿ ದೊಡ್ಡ ಪಣತೊಟ್ಟಿದೆ.

159 ಅಭ್ಯರ್ಥಿಗಳ ಪೈಕಿ 70 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು

159 ಅಭ್ಯರ್ಥಿಗಳ ಪೈಕಿ 70 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು

ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ ಪಕ್ಷಗಳು ಘೋಷಿಸಿದ ಅಭ್ಯರ್ಥಿಗಳ ಅಪರಾಧ ಜಾತಕ ಮುನ್ನೆಲೆಗೆ ಬರಲಾರಂಭಿಸಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ವೆಬ್‌ಸೈಟ್‌ಗಳಲ್ಲಿ ಮತ್ತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿವೆ. 159 ಎಸ್‌ಪಿ ಅಭ್ಯರ್ಥಿಗಳ ಪೈಕಿ 70 ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಆದರೆ, ಬಿಜೆಪಿ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿಯ 193 ಅಭ್ಯರ್ಥಿಗಳ ಪೈಕಿ 78 ಮಂದಿ ಕ್ರಿಮಿನಲ್ ಕೇಸ್ ಹೊಂದಿರುವವರು. ಕಾಂಗ್ರೆಸ್ನಲ್ಲಿ ಈ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಇದುವರೆಗೆ 166 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 35 ಮಂದಿ ಮಾತ್ರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.

English summary
Maharaji Prajapati, wife of former minister Gayatri Prasad Prajapati, who is serving a life sentence after being found guilty in the rape case of a minor, has been given ticket by the Samajwadi Party from Amethi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X