ವೈರಲ್ ಆಯ್ತು, ತೆರೆದ ಟ್ರಕ್‌ನಲ್ಲಿ ಮೃತದೇಹದ ಜೊತೆ ವಲಸೆ ಕಾರ್ಮಿಕರ ಸಂಚಾರ

ಲಕ್ನೋ, ಮೇ 19: ವಲಸೆ ಕಾರ್ಮಿಕರ ಜೊತೆ ತೆರೆದ ಟ್ರಕ್‌ನಲ್ಲಿ ಮೃತದೇಹವನ್ನು ಕಳುಹಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗಾಯಗೊಂಡಿರುವ ಕಾರ್ಮಿಕರ ಜೊತೆ ಮೃತದೇಹವನ್ನು ಕಳುಹಿಸಿರುವುದು ಅಮಾನವೀಯ ನಡೆ ಎಂದು ಜಾರ್ಖಂಡ್ ಸಚಿವ ಹೇಮಂತ್ ಬೇಸರ ವ್ಯಕ್ತಪಡಿಸಿದ್ದಾರೆ.

ಲಕ್ನೋನಿಂದ 200 ಕಿ.ಮೀ ದೂರದಲ್ಲಿರುವ ಔರಯ್ಯಾದಲ್ಲಿ ಟ್ರಕ್‌ ಅಪಘಾತದಲ್ಲಿ ಕಾರ್ಮಿಕರು ಮೃತಪಟ್ಟಿದ್ದರು. ಆದರೆ ಮೃತದೇಹ ಹಾಗೂ ವಲಸೆ ಕಾರ್ಮಿಕರನ್ನು ತೆರೆದ ಟ್ರಕ್‌ನಲ್ಲಿ ಜೊತೆಗೆ ಕಳುಹಿಸಿರುವ ಫೋಟೊಗಳು ವೈರಲ್ ಆಗುತ್ತಿವೆ.

 UP Sends Dead Bodies With Migrants In Open Trucks

ಮೃತದೇಹ ಹಾಗೂ ಗಾಯಗೊಂಡವರನ್ನು ಸಾಗಿಸಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಶನಿವಾರ ಬೆಳಗಿನಜಾವ ಸುಮಾರು 3.30ಕ್ಕೆ ಸಂಭವಿಸಿದ ಟ್ರಕ್ ಅಪಘಾತದಲ್ಲಿ 26 ಮಂದಿ ಕಾರ್ಮಿಕರು ಮೃತಪಟ್ಟಿದ್ದರು. 30 ಮಂದಿ ಗಾಯಗೊಂಡಿದ್ದರು. ಪಂಜಾಬ್‌ನಿಂದ ಬರುತ್ತಿದ್ದ ಟ್ರಕ್ ರಾಜಸ್ಥಾನದಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು.

ಮೂರು ಟ್ರಕ್‌ಗಳಲ್ಲಿ ಶವ ಹಾಗೂ ಕಾರ್ಮಿಕರನ್ನು ಜಾರ್ಖಂಡ್‌ನ ಬೊಕಾರೊ ಹಾಗೂ ಪಶ್ಚಿಮ ಬಂಗಾಳದ ಪುರುಲಿಯಾಗೆ ಕಳುಹಿಸಿಕೊಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+