ಯುಪಿಯಲ್ಲಿ 'Rally' ರೇಸ್: 2017 ಕ್ಕಿಂತ ಹೆಚ್ಚು ರ್‍ಯಾಲಿಗಳಲ್ಲಿ ಪಿಎಂ ಭಾಗಿ
ಲಕ್ನೋ ಮಾರ್ಚ್ 9: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಪಣತೊಟ್ಟಿರುವ ರಾಜಕೀಯ ಪಕ್ಷಗಳು ಹಲವಾರು ರಣತಂತ್ರವನ್ನು ಹೂಡಿವೆ. ಇದರಲ್ಲಿ ಪ್ರಮುಖವಾಗಿ ಮತದಾರರನ್ನು ಸೆಳೆಯಲು ಮಾಡಿದ ಬಹುದೊಡ್ಡ ತಂತ್ರವೆಂದರೆ ಪ್ರಚಾರ. ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಗಳನ್ನು ದೊಡ್ಡ ರಾಜಕೀಯ ಪಕ್ಷಗಳು ಮಾಡಿವೆ. ಇದರಲ್ಲೂ ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆದಿದೆ. ಯುಪಿಯ ರ್‍ಯಾಲಿ ರೇಸ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಈ ಬಾರಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಪ್ರಚಾರವನ್ನು ಬಿಜೆಪಿ ಮಾಡಿದೆ ಎಂದು ತಿಳಿದು ಬಂದಿದೆ. ಆಯಾ ಪಕ್ಷಗಳು ನೀಡಿದ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 200 ಕ್ಕೂ ಹೆಚ್ಚು ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. 147 ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಎರಡನೇ ಸ್ಥಾನದಲ್ಲಿದ್ದರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು 117 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ
ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ ಚುನಾವಣಾ ಆಯೋಗವು (EC) ಈ ವರ್ಷದ ಜನವರಿ 15 ರವರೆಗೆ ಚುನಾವಣಾ ರ್‍ಯಾಲಿಗಳು ಮತ್ತು ರೋಡ್‌ಶೋಗಳನ್ನು ನಿಷೇಧಿಸಿದೆ. ಹೆಚ್ಚಾಗಿ ಓಮಿಕ್ರಾನ್ ರೂಪಾಂತರದಿಂದಾಗಿ ಚುನಾವಣಾ ರ್‍ಯಾಲಿಗಳನ್ನು ನಿಷೇಧಿಸಿತ್ತು. ನಿಷೇಧವನ್ನು ಎರಡು ಬಾರಿ ವಿಸ್ತರಿಸಲಾಯಿತು. ಮೊದಲು ಜನವರಿ 22 ರವರೆಗೆ ಮತ್ತು ನಂತರ ಜನವರಿ 31ರವರೆಗೆ ವಿಸ್ತರಿಸಲಾಯಿತು. ಇದರ ಪರಿಣಾಮವಾಗಿ ವರ್ಚುವಲ್ ರ್‍ಯಾಲಿಗಳನ್ನು ಪಕ್ಷಗಳು ಪ್ರಾರಂಭವಾದವು ಮತ್ತು ನಿರ್ಬಂಧಗಳು ಸರಾಗವಾಗುತ್ತಿದ್ದಂತೆ ಬೃಹತ್ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಪ್ರಾರಂಭಿಸಿದವು.

ಕೋವಿಡ್ ನಿರ್ಬಂಧಗಳ ನಡುವೆ 'ರ್‍ಯಾಲಿ' ರೇಸ್
ಮಾತ್ರವಲ್ಲದೆ ಪಿಎಂ ಮೋದಿ ಅವರು ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ರಾಜ್ಯದಲ್ಲಿ 24 ಸಾರ್ವಜನಿಕ ರ್ಯಾಲಿಗಳು ಮತ್ತು ಐದು ವರ್ಚುವಲ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ಬಿಜೆಪಿ ಮುಖ್ಯಮಂತ್ರಿ ಮತ್ತು ಅವರ ಕಾರ್ಯಗಳನ್ನು ಪ್ರದರ್ಶಿಸಲು ಪ್ರಯತ್ನಿಸಿದೆ. ಮೋದಿ ಅವರ ಮೂಲಕ ಇದಿನ್ನೂ ತೀವ್ರತೆ ಪಡೆದುಕೊಂಡಿತು. ಬಿಜೆಪಿ ಸರ್ಕಾರದ ವಿರುದ್ಧ ವಿಶೇಷವಾಗಿ ನಿರುದ್ಯೋಗ ಮತ್ತು ಬಿಡಾಡಿ ದನಗಳಂತಹ ವಿಷಯಗಳಲ್ಲಿ ಆಡಳಿತ ವಿರೋಧಿ ಭಾವನೆಗಳಿದ್ದರೂ, ಪ್ರಧಾನಿಯವರ ಜನಪ್ರಿಯತೆ ಹಾಗೇ ಉಳಿದಿದೆ ಎಂದು ಸಮೀಕ್ಷಾ ವರದಿಗಳು ಈ ಹಿಂದೆ ಸೂಚಿಸಿದ್ದವು.
ಮೋದಿ ಅವರು ಫೆಬ್ರವರಿ 10 ರಂದು ಸಹರಾನ್‌ಪುರದಲ್ಲಿ ತಮ್ಮ ಮೊದಲ ಸಾರ್ವಜನಿಕ ರ್‍ಯಾಲಿಯನ್ನು ನಡೆಸುವ ಮೂಲಕ ತಮ್ಮ ಆಫ್‌ಲೈನ್ ಪ್ರಚಾರವನ್ನು ಪ್ರಾರಂಭಿಸಿದರು. ಜೊತೆಗೆ ಮಾರ್ಚ್ 7 ರಂದು ರಾಜ್ಯ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನದಲ್ಲಿ ತಮ್ಮ ತವರು ಕ್ಷೇತ್ರ ವಾರಣಾಸಿಯಲ್ಲಿ ಪ್ರಚಾರ ಮುಕ್ತಾಯಗೊಳಿಸಿದರು. ಈ ಹಿಂದೆಯೂ ಅವರು ಇಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.
2017 ರ ಚುನಾವಣಾ ಪ್ರಚಾರದಲ್ಲಿ, ಮೋದಿ ಅವರು ಆರಂಭದಲ್ಲಿ 12 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ 24 ಕ್ಕೆ ಭಾಷಣವನ್ನು ಕೊನೆಗೊಳಿಸಿದರು. ಆದಾಗ್ಯೂ ಈ ವರ್ಷ ಕೋವಿಡ್ ನಿರ್ಬಂಧಗಳಿಂದಾಗಿ ಪ್ರಚಾರದ ಸ್ವರೂಪವು ಸ್ವಲ್ಪ ಬದಲಾವಣೆಗಳಿಗೆ ಒಳಗಾಗಬೇಕಾಯಿತು. ಜನವರಿ 31 ರಂದು ತಮ್ಮ ಮೊದಲ 'ಜನ್ ಚೌಪಾಲ್' ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಪ್ರಧಾನಿ ತಮ್ಮ ತಿಂಗಳ ಅವಧಿಯ ಪ್ರಚಾರವನ್ನು ಪ್ರಾರಂಭಿಸಿದರು. ಫೆಬ್ರವರಿ 10 ರಂದು ತನ್ನ ಮೊದಲ ವ್ಯಕ್ತಿಗತ ರ್ಯಾಲಿಯನ್ನು ನಡೆಸುವ ಮೊದಲು ಅವರು ಐದು ವರ್ಚುವಲ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಆದರೆ 2017 ರ ಚುನಾವಣೆಯ ಸಮಯದಲ್ಲಿ ಅವರ ಪ್ರಚಾರವು 30 ದಿನಗಳವರೆಗೆ ನಡೆಯಿತು.

200 ಕ್ಕೂ ಹೆಚ್ಚು ಸಾರ್ವಜನಿಕ ರ್‍ಯಾಲಿಯಲ್ಲಿ ಸಿಎಂ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಾರ್ವಜನಿಕ ರ್‍ಯಾಲಿಗಳ ಸಂಖ್ಯೆ "ಡಬಲ್-ಇಂಜಿನ್" ಸರ್ಕಾರದ ಪಾಲುದಾರರಾದ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನ ಮಂತ್ರಿಯ ಪ್ರಯತ್ನಗಳು ಗುಣಿಸಲ್ಪಟ್ಟಿವೆ. ಪಕ್ಷದ ಅಂದಾಜಿನ ಪ್ರಕಾರ 403 ಸ್ಥಾನಗಳ ವಿಧಾನಸಭೆಗೆ ಏಳು ಹಂತದ ಚುನಾವಣೆಯ ಸಂದರ್ಭದಲ್ಲಿ ಯೋಗಿ 200 ಕ್ಕೂ ಹೆಚ್ಚು ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಸುಮಾರು 60 ರ್‍ಯಾಲಿಗಳು ಮತ್ತು ರೋಡ್‌ಶೋಗಳನ್ನು ನಡೆಸಿದ್ದಾರೆ. ಆದರೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು 40 ಕ್ಕೂ ಹೆಚ್ಚು ಸಭೆಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ತವರು ರಾಜ್ಯದಲ್ಲಿ ಸುಮಾರು 40 ರ್‍ಯಾಲಿಗಳಲ್ಲಿ ಮಾತನಾಡಿದ್ದಾರೆ.
ತನ್ನ ರ್‍ಯಾಲಿಗಳಲ್ಲಿ ಬಿಜೆಪಿಯು "ಡಬಲ್-ಎಂಜಿನ್" ಸರ್ಕಾರ, ಸಾಂಕ್ರಾಮಿಕದ ಮಧ್ಯೆ ಪ್ರಧಾನಿ ಪ್ರಾರಂಭಿಸಿದ ಕಲ್ಯಾಣ ಯೋಜನೆಗಳು, ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ, ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಮನಹರಿಸಿತು. ಸಾರ್ವಜನಿಕ ರ್‍ಯಾಲಿಗಳ ಮೂಲಕ ಹೆಚ್ಚಿನ ಸಂಖ್ಯೆಯ ಮತದಾರರನ್ನು ಗುರಿಯಾಗಿರಿಸಿಕೊಳ್ಳುವುದರ ಜೊತೆಗೆ ಜನರೊಂದಿಗೆ ಪಕ್ಷವು 'Prabhavi Matdata Samvad' ಮೂಲಕ ಪ್ರಚಾರವನ್ನು ನಡೆಸಿತು. ಜೊತೆಗೆ ಅದರ ಕಾರ್ಯಕರ್ತರು ಮನೆ-ಮನೆ ಪ್ರಚಾರವನ್ನು ನಡೆಸಿದರು. ಇದೆಲ್ಲವೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಗುತ್ತದೆ.

147 Rallyಲಿಗಳಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ
ವಿರೋಧ ಪಕ್ಷಗಳ ಮಟ್ಟಿಗೆ ಹೇಳುವುದಾದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಕೇವಲ ಮೂರು ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಹಿಂದೆ ಸರಿದಿದ್ದಾರೆ. ಆದಾಗ್ಯೂ ಅವರ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ 147 ರ್‍ಯಾಲಿಗಳನ್ನು ಆಯೋಜಿಸಿದ್ದರು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
ಪ್ರಿಯಾಂಕಾ ನೇತೃತ್ವದ ಕಾಂಗ್ರೆಸ್ ಪ್ರಚಾರವು ತನ್ನ ಪ್ರಮುಖ 'ಲಡ್ಕಿ ಹೂ, ಲಾಡ್ ಸಕ್ತಿ ಹೂ' ಅಭಿಯಾನದಿಂದ ಆರಂಭಿಕ ಗಮನ ಸೆಳೆಯಿತು. ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 40 ರಷ್ಟು ಟಿಕೆಟ್ ಮತ್ತು ರಾಜ್ಯದ ಮಹಿಳಾ ಮತದಾರರನ್ನು ಓಲೈಸಲು ದ್ವಿಚಕ್ರ ವಾಹನಗಳು ಮತ್ತು ಸ್ಮಾರ್ಟ್‌ಫೋನ್‌ಗಳಂತಹ ಇತರ ಭರವಸೆಗಳನ್ನೂ ನೀಡಿತ್ತು. ಪ್ರಚಾರದ ವೇಳೆ ಪ್ರಿಯಾಂಕಾ ಅವರು ಜಾತಿ ಮತ್ತು ಧರ್ಮದ ರಾಜಕೀಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರು.

117 Rallyಗಳಲ್ಲಿ ಅಖಿಲೇಶ್ ಭಾಗಿ
ಇನ್ನೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ 117 ರ್ಯಾಲಿಗಳನ್ನು ನಡೆಸಿದರೆ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಸಿಎಂ ಮಾಯಾವತಿ ಚುನಾವಣೆಯ ಸಮಯದಲ್ಲಿ ಕೇವಲ 18 ವೈಯಕ್ತಿಕ ರ್ಯಾಲಿಗಳನ್ನು ಮಾಡಿದ್ದಾರೆ.
ಅಖಿಲೇಶ್ ಅವರು 'ರಥಯಾತ್ರೆ', 'Nukkad Sabha' ಮತ್ತು 'ವಿಜಯ್ ಯಾತ್ರೆ'ಗಳನ್ನೂ ನಡೆಸಿದರು. ಹಣದುಬ್ಬರ, ನಿರುದ್ಯೋಗ, ಬಿಡಾಡಿ ದನಗಳು ಮತ್ತು ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನದಂತಹ ವಿಷಯಗಳ ಕುರಿತು ಅಖಿಲೇಶ್ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿದರು. ಅವರ ಭಾಷಣಗಳು ಸಿಎಂ ಯೋಗಿ ಆದಿತ್ಯನಾಥ್ ಅವರನ್ನೇ ಹೆಚ್ಚು ಗುರಿಯಾಗಿಸಿಕೊಂಡಿದ್ದವು.
ಅಖಿಲೇಶ್ ಅವರ ಮಿತ್ರಗಳು ಮತ್ತು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಅವರೊಂದಿಗೆ ವಾರಣಾಸಿಯಲ್ಲಿ ಜಂಟಿ ರ್‍ಯಾಲಿ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಂತಹ ಇತರ ರಾಜ್ಯಗಳ ರಾಜಕೀಯ ನಾಯಕರ ಭಾಗವಹಿಸುವಿಕೆಯೂ ಹೈ-ಆಕ್ಟೇನ್ ಪ್ರಚಾರವನ್ನು ಕಂಡಿತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications