ಯುಪಿ ಚುನಾವಣೆ: ನಾವು ಭಗವಧಾರಿಗಳು ಎಂದ ಯೋಗಿ ಆದಿತ್ಯನಾಥ್

ಲಕ್ನೋ ಫೆಬ್ರವರಿ 28: ಕೇಸರಿ ನಿಲುವಂಗಿಯನ್ನು ತುಕ್ಕು ಬಣ್ಣಕ್ಕೆ ಹೋಲಿಸಿರುವ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ಡಿಂಪಲ್ ಯಾದವ್ ಅವರ ಹೇಳಿಕೆ ಸನಾತನ ಧರ್ಮ ಮತ್ತು ದಾರ್ಶನಿಕರಿಗೆ ಮಾಡಿದ ಅವಮಾನವಾಗಿದೆ ಎಂದು ಯೋಗಿ ಹೇಳಿದ್ದಾರೆ.

ಈ ಹಿಂದೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ತುಕ್ಕು ಹಿಡಿದಿದೆ ಮತ್ತು ಯೋಗಿ ಆದಿತ್ಯನಾಥ್ ಅವರು ತುಕ್ಕು ಬಣ್ಣವನ್ನು ಹೋಲುವ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಸಿರತುದಲ್ಲಿ ನಡೆದ ರ್ಯಾಲಿಯಲ್ಲಿ ಎಂಎಸ್ ಯಾದವ್ ಹೇಳಿದ್ದರು. ಈ ಹೇಳಿಕೆಯನ್ನು ಗುರಿಯಾಗಿಸಿಕೊಂಡ ಯೋಗಿ ಆದಿತ್ಯನಾಥ್ ಅವರು, "ನೀವು ಎಸ್ಪಿಯವರಿಂದ ಕೆಲವು ಜನರ ಹೇಳಿಕೆಯನ್ನು ಕೇಳಿದ್ದೀರಿ. ಈ ಹೇಳಿಕೆಯು ಸನಾತನ ಧರ್ಮ ಮತ್ತು ದಾರ್ಶನಿಕರಿಗೆ ಮಾಡಿದ ಅವಮಾನವಾಗಿದೆ. ಅವರು ಕೇಸರಿ ಬಣ್ಣವನ್ನು ತುಕ್ಕು ಬಣ್ಣದೊಂದಿಗೆ ಹೋಲಿಸಿದ್ದಾರೆ" ಎಂದು ಡಿಂಪಲ್ ಯಾದವ್ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ಮಾಡಿದರು.

"ಉತ್ತರ ಪ್ರದೇಶದ ಪ್ರತಿಯೊಬ್ಬ ನಿವಾಸಿಯೂ ನಾವು ಭಗವಧಾರಿ ಎಂದು ಹೇಳುತ್ತಾರೆ. ಏಕೆಂದರೆ ಕೇಸರಿ ಶಕ್ತಿಯ ಬಣ್ಣ ಎಂದು ಅವರು ನಂಬಿತ್ತಾರೆ. ಸೂರ್ಯೋದಯವಾದಾಗ ಸೂರ್ಯ ದೇವರ ಬಣ್ಣ ಕೇಸರಿ ಎಂದು ಸ್ವಾಮಿ ವಿವೇಕಾನಂದರು ಹೆಮ್ಮೆಯಿಂದ ಹೇಳಿದ್ದರು. ಅವರ ನಿಲುವಂಗಿ ಕೂಡ ಕೇಸರಿಯಾಗಿತ್ತು. ನಾವು ಭಗವಧಾರಿ. ಇದು ನಮ್ಮ ಗುರುತು" ಎಂದು ಅವರು ಹೇಳಿದರು.

UP polls: We are bhagvadhari says Yogi Adityanath

ಮೊನ್ನೆಯಷ್ಟೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಂಪಲ್ ಯಾದವ್, ಈ ಬಾರಿ ನಿಮ್ಮ ಬಳಿಗೆ ಮೂವರು ಸೊಸೆಯಂದಿರು ಬಂದಿದ್ದಾರೆ. ಸಿರತ್ತು ಸೊಸೆ ಪಲ್ಲವಿ ಪಟೇಲ್. ಅಲಹಾಬಾದ್‌ನ ಸೊಸೆ ಜಯಾ ಬಚ್ಚನ್ ಮತ್ತು ಉತ್ತರ ಪ್ರದೇಶದ ಸೊಸೆ ಡಿಂಪಲ್ ಯಾದವ್. ಸಿರತ್ತು ಜನರು ಈಗಾಗಲೇ ಮೋಸ ಹೋಗಿದ್ದಾರೆ. ಸಿರತ್ತು ಈಗ ತನ್ನ ಸೊಸೆಗೆ ಅವಕಾಶ ನೀಡಲಿದೆ. ಕುಟುಂಬವನ್ನು ಹೇಗೆ ನಡೆಸಬೇಕು ಮತ್ತು ಅದರ ನೋವು ಮತ್ತು ಸಂಕಟ ಏನು ಎಂದು ಅವರು ಮಾತ್ರ ತಿಳಿದಿದ್ದಾರೆ. ಅವರು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಹೀಗಾಗಿ ಅವರಿಗೆ ಮತ ಹಾಕಲು ಮನವಿ ಮಾಡಿದರು.

ಈ ವೇಳೆ ಡಿಂಪಲ್ ಯಾದವ್ ಸಿಎಂ ಯೋಗಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಕಬ್ಬಿಣಕ್ಕೆ ತುಕ್ಕು ಹಿಡಿದ ಬಣ್ಣದ ಬಟ್ಟೆಯನ್ನು ಯೋಗಿ ಧರಿಸುತ್ತಾರೆ. ನಮ್ಮ ಮುಖ್ಯಮಂತ್ರಿಗಳು ಕಬ್ಬಿಣಕ್ಕೆ ಹಿಡಿದ ತುಕ್ಕು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ. ತುಕ್ಕು ಬಣ್ಣದ ಎಂಜಿನ್ ತೆಗೆಯುವುದು ಅಗತ್ಯ ಎಂದು ಡಿಂಪಲ್ ಹೇಳಿದ್ದಾರೆ. ತುಕ್ಕು ಹಿಡಿದಿರುವ ಎಂಜಿನ್ ಅನ್ನು ತೆಗೆದುಹಾಕಲು ಜನರು ಈ ಚುನಾವಣೆಯಲ್ಲಿ ಹೋರಾಡುತ್ತಿದ್ದಾರೆ. ಇನ್ನೂ ಪ್ರಧಾನಿ ಮೋದಿ ಹೇಳಿಕೆಗೆ ಡಿಂಪಲ್ ಯಾದವ್ ತಿರುಗೇಟು ನೀಡಿದ್ದಾರೆ.

ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತಿರುಗೇಟು ನೀಡಿದ ಡಿಂಪಲ್ ಯಾದವ್, "ಅವರು ಇವಿಎಂಗಳನ್ನು ದೂಷಿಸಲು ಪ್ರಾರಂಭಿಸಿದ ತಕ್ಷಣ, ಕುಟುಂಬ ಪಕ್ಷದ ಆಟ ಮುಗಿದಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ" ಎಂದು ಮೋದಿ ಅವರು ಹೇಳಿದ್ದರು. ಇದಕ್ಕೆ ಡಿಂಪಲ್ ತಿರುಗೇಟು ನೀಡಿದ್ದರು. ನಮ್ಮವರಿಗೆ ಮಾತನಾಡುವ ಹಕ್ಕಿಲ್ಲವೇ? ಇದು ಪ್ರಜಾಪ್ರಭುತ್ವ ಮತ್ತು ಇವಿಎಂಗಳಲ್ಲಿ ಏನಾದರೂ ಸಮಸ್ಯೆ ಇದೆ ಎಂದು ಅವರು ಭಾವಿಸಿದರೆ, ಅದನ್ನು ಹೇಳುವ ಹಕ್ಕು ಅವರಿಗೆ ಇದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+