ಯುಪಿ: ಎಸ್ ಪಿ ಅಭ್ಯರ್ಥಿ ಅಭಯ್ ಸಿಂಗ್ ಬೆಂಗಾವಲು ವಾಹನದ ಮೇಲೆ ದಾಳಿ
ಲಕ್ನೋ, ಫೆಬ್ರವರಿ 18: ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ಶುಕ್ರವಾರ ಸಮಾಜವಾದಿ ಪಕ್ಷದ ಅಭ್ಯರ್ಥಿ ಆಗಿರುವ ಅಭಯ್ ಸಿಂಗ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಲಾಗಿದೆ.
ಮಾಜಿ ಶಾಸಕರಾದ ಅಭಯ್ ಸಿಂಗ್ ಅಯೋಧ್ಯೆಯ ಗೋಶೈಂಗಂಜ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಉತ್ತರ ಪ್ರದೇಶದ ಮೂರನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಇಂದ್ರ ಪ್ರತಾಪ್ ತಿವಾರಿ ಪತ್ನಿ ಆರತಿ ತಿವಾರಿ ವಿರುದ್ಧ ಅಭಯ್ ಸಿಂಗ್ ಅಖಾಡದಲ್ಲಿದ್ದಾರೆ.
ಸಮಾಜವಾದಿ ಪಕ್ಷದ ಅಭಯ್ ಸಿಂಗ್ ಅವರ ಬೆಂಗಾವಲು ಪಡೆ ವಾಹನವು ಯುನಿಯಾರ್‌ನಿಂದ ಜಾಹ್ನಾ ಮಾರುಕಟ್ಟೆಗೆ ತೆರಳುತ್ತಿದ್ದಾಗ ಮಹಾರಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಯೋಪುರ್ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದಾಳಿಯಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ, ಆದರೆ ಅಭಯ್ ಸಿಂಗ್ ಬೆಂಗಾವಲು ವಾಹನದಲ್ಲಿ ಒಂದು ಕಾರು ಜಖಂಗೊಂಡಿದೆ.

ಘಟನೆ ಕುರಿತು ಅಭಯ್ ಸಿಂಗ್ ಫೇಸ್ ಬುಕ್ ಬರಹ:
"ಪೊಲೀಸರು ವಿರೋಧಿಗಳೊಂದಿಗೆ ಶಾಮೀಲಾಗಿದ್ದಾರೆ, ಚುನಾವಣಾ ಆಯೋಗಕ್ಕೆ ಯಾವುದೇ ನಿಲುವು ಇಲ್ಲ, ನಾನು ಪ್ರಚಾರದಿಂದ ಹಿಂತಿರುಗುತ್ತಿದ್ದಾಗ, ನೆವ್ ಕಬೀರ್‌ಪುರದಲ್ಲಿ ನನ್ನ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ. ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುವಂತೆ ನನ್ನ ಕಾರ್ಯಕರ್ತರಲ್ಲಿ ವಿನಂತಿಸುತ್ತೇನೆ. ತಾವು ಸೋಲುತ್ತಾರೆ ಎಂಬುದು ನಮ್ಮ ಎದುರಾಳಿಗಳಿಗೆ ಗೊತ್ತಿದೆ. ಆದ್ದರಿಂದಲೇ ಅವರು ಚುನಾವಣೆ ನಡೆಸುವುದನ್ನು ಬಯಸುವುದಿಲ್ಲ ಎಂದು ಅಭಯ್ ಸಿಂಗ್ ಬರೆದುಕೊಂಡಿದ್ದಾರೆ.












Click it and Unblock the Notifications