ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆ: ರೈತರಿಗೆ ಎಚ್ಚರಿಕೆ ಸಂದೇಶ ನೀಡಿದ ಟಿಕಾಯತ್

|
Google Oneindia Kannada News

ಅಲಿಗಢ (ಯುಪಿ) ಜನವರಿ 24: ರೈತ ವಿರೋಧಿ ಮಸೂದೆಗಳ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಸಮಾಜವನ್ನು ಧ್ರುವೀಕರಿಸುವ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳಿಂದ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತರು ತಮ್ಮ ಆಯ್ಕೆಯ ನಿರ್ಣಾಯಕ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣ ಪ್ರಜ್ಞೆ ಹೊಂದಿದ್ದಾರೆ ಮತ್ತು ಯಾವುದೇ ಪ್ರೇರಣೆ ಅಗತ್ಯವಿಲ್ಲ ಎಂದು ಟಿಕಾಯತ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು. ಮುಂದಿನ ಕೆಲವು ವಾರಗಳಲ್ಲಿ ರಾಜಕೀಯ ಭಾಷಣದಲ್ಲಿ ಹಿಂದೂ-ಮುಸ್ಲಿಂ ಮತ್ತು ಜಿನ್ನಾ ಸಾಮಾನ್ಯ ವಿಷಯಗಳಾಗಲಿದ್ದು, ಇಂತಹ ಗೊಂದಲಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಅವರು ಹೇಳಿದರು.

ಮಾರ್ಚ್ 15 ರವರೆಗೆ ಯುಪಿಯಲ್ಲಿ ಹಿಂದೂ-ಮುಸ್ಲಿಂ ಮತ್ತು ಜಿನ್ನಾ ಅಧಿಕೃತ ಅತಿಥಿಗಳಾಗಿರಲಿದ್ದಾರೆ ಎಂದು ಅವರು ಹೇಳಿದರು. ಜೊತೆಗೆ ರೈತರ ಮತದಾನದ ಪ್ರಾಶಸ್ತ್ಯಗಳ ಬಗ್ಗೆ ಕೇಳಿದಾಗ, 'ರೈತರು ತಮ್ಮ ಉತ್ಪನ್ನವನ್ನು ತಮ್ಮ ವೆಚ್ಚದ ಅರ್ಧದಷ್ಟು ಬೆಲೆಗೆ ಮಾರಾಟ ಮಾಡಲು ಒತ್ತಾಯಿಸಿದಾಗ ಅವರು ಹೇಗೆ ಮತ ಚಲಾಯಿಸಬೇಕು ಎಂದು ಯಾರೂ ಅವರಿಗೆ ಹೇಳಬೇಕಾದ ಅಗತ್ಯವಿಲ್ಲ. ಮುಂಬರುವ ವಿಧಾನಸಭೆಯಲ್ಲಿ ರೈತರು ತಮ್ಮ ಆಯ್ಕೆಯ ನಿರ್ಣಾಯಕ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣ ಜಾಗೃತರಾಗಿದ್ದಾರೆ' ಎಂದು ಅವರು ಹೇಳಿದರು.

UP Elections: Tikait Cautions Farmers Against Attempts to ‘Polarise’ Society
ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರದ ಹಾದಿಯಲ್ಲಿ ರಾಜಕೀಯ ನಾಯಕರು ಹಿಂದೂ-ಮುಸ್ಲಿಂ ಮತ್ತು ಜಿನ್ನಾರ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುತ್ತಿದ್ದಾರೆ. ಯುಪಿಯಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಬಿಜೆಪಿ ತಮ್ಮದು ಹಿಂದೂಗಳ ಪಕ್ಷ ಆದರೆ ಎಸ್‌ಪಿ ಮುಸ್ಲಿಂರ ಪಕ್ಷ ಎಂಬಂತೆ ಗುರುತಿಸಿಕೊಳ್ಳುತ್ತಿದೆ. ಆದರೆ ಸಮಾಜವಾದಿ ಪಕ್ಷ(ಎಸ್‌ಪಿ) ಎಲ್ಲಾ ಸಣ್ಣ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮದು ಜಾತ್ಯಾತೀತ ಪಕ್ಷವೆಂದು ತೋರಿಸುತ್ತಿದೆ. ಜೊತೆಗೆ ಇತ್ತೀಚೆಗೆ ಭಾರತದ ನಿಜವಾದ ಶತ್ರು ಚೀನಾವೇ ಹೊರತು ಪಾಕಿಸ್ತಾನವಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹೇಳಿಕೆಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, 'ಜಿನ್ನಾರನ್ನು ಪ್ರೀತಿಸುವವರು ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ಹೇಗೆ ನಿರಾಕರಿಸುತ್ತಾರೆ (ಜೋ ಜಿನ್ನಾ ಸೇ ಕರೇ ಪ್ಯಾರ್, ವೋ ಪಾಕಿಸ್ತಾನ್ ಸೇ ಕೈಸೇ ಕರೇ ಇಂಕಾರ್). ತಮ್ಮ ಹೇಳಿಕೆಗೆ ಅಖಿಲೇಶ್ ಯಾದವ್ ಕ್ಷಮೆಯಾಚಿಸಬೇಕು. ಬಿಜೆಪಿ ಪಾಕಿಸ್ತಾನವನ್ನು ಶತ್ರು ಎಂದು ಪರಿಗಣಿಸಿದೆ. ಅಖಿಲೇಶ್ ಜಿನ್ನಾ ಜೊತೆ ಬಂದಿದ್ದಾರೆ. ಇದು ಮುಜುಗರದ ಸಂಗತಿ. ಅಖಿಲೇಶ್ ಯಾದವ್ ಹೇಳಿಕೆ ಸಮಾಧಾನದ ಪರಮಾವಧಿಯಾಗಿದೆ ಎಂದು ಅವರು ಹೇಳಿದ್ದಾರೆ.

ರೈತರು ಎಚ್ಚರಿಕೆಯಿಂದಿರಬೇಕು

ಈ ಬೆಳವಣಿಗೆಗಳ ಹಿನ್ನೆಲೆ ಇಟ್ಟುಕೊಂಡು ಟಿಕಾಯತ್ ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳಿಂದ ರೈತರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದ್ದಾರೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 11 ಜಿಲ್ಲೆಗಳಲ್ಲಿ ಒಟ್ಟು 58 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

English summary
Bharatiya Kisan Union leader Rakesh Tikait, who was leading the protests against now-repealed anti-farm bills, has warned farmers from attempts to "polarise" society and divert their attention by vested interests who will rake up "Hindu-Muslim" issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X