UP Election Result 2022: ಸೈಕಲ್ ಪಂಚರ್ ಮಾಡಿದ ಬುಲ್ಡೋಜರ್
ಲಕ್ನೋ ಮಾರ್ಚ್ 10: 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ 3 ರಾಜ್ಯಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರ ಹಿಡಿಯುವ ಲಕ್ಷಣ ಗೋಚರಿಸಿದೆ. ಈ ಸಮಯದಲ್ಲಿ 1985 ರಿಂದ ಯಾವುದೇ ಪಕ್ಷವು ಸತತ ಎರಡನೇ ಬಾರಿಗೆ ಗೆಲುವು ಸಾಧಿಸದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಸರ್ಕಾರ ರಚನೆ ಮಾಡುತ್ತಿದೆ. ಕೊನೆಯ ಹಂತದ ಚುನಾವಣೆಯ ನಂತರ, ಎಕ್ಸಿಟ್ ಪೋಲ್‌ಗಳಲ್ಲಿ ತೋರುತ್ತಿರುವ ಫಲಿತಾಂಶಗಳ ಪ್ರಕಾರ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಮತ್ತು ಯೋಗಿ ಆದಿತ್ಯನಾಥ್ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಯುಪಿಯ 2017 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 312 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ 2022 ರ ವಿಧಾನಸಭಾ ಚುನಾವಣೆಯಲ್ಲಿ ಅದು 260-70 ಕ್ಕೆ ಇಳಿಯಲಿದೆ ಎಂಬುದು ಗಮನಾರ್ಹ. ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ತಂಡ ಕಳೆದ ಬಾರಿ ಪಡೆದ ಸ್ಥಾನಗಳನ್ನೇ ಪಡೆಯುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ನಿರೀಕ್ಷೆಯಂತೆ ಸ್ಥಾನಗಳನ್ನು ಪಡೆಯದೇ ಹೋದರು ಯುಪಿಯಲ್ಲಿ ಜಯ ಸಾಧಿಸಿದೆ. ಎರಡನೇ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷದ ಸಂಖ್ಯೆ 130-140 ರ ನಡುವೆ ಚಲಿಸುತ್ತಿದೆ.
ರ್‍ಯಾಲಿಯಲ್ಲಿ ನೆರೆದಿದ್ದ ಜನಸಂದಣಿ ಫಲಿತಾಂಶದಲ್ಲಿಲ್ಲ
ಈ ಬಾರಿಯ ಚುನಾವಣಾ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಂಪೂರ್ಣ ಆತ್ಮವಿಶ್ವಾಸದಿಂದ ರ್ಯಾಲಿಗಳನ್ನು ನಡೆಸಿರುವುದು ಗಮನಾರ್ಹವಾಗಿದೆ. ಈ ವೇಳೆ ಅವರು ಈ ಬಾರಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಒಂದಲ್ಲ ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ಸಮಯದಲ್ಲಿ ಸಮಾಜವಾದಿ ಪಕ್ಷದ ಪ್ರಣಾಳಿಕೆಯ ಬಗ್ಗೆಯೂ ಹೆಚ್ಚು ಚರ್ಚೆಯಲ್ಲಿತ್ತು.

ಚುನಾವಣಾ ಪ್ರಚಾರದಲ್ಲಿ ಗೂಂಡಾಗಿರಿ ಮತ್ತು ಅಸ್ವಸ್ಥತೆಯನ್ನು ಕೊನೆಗೊಳಿಸುವ ಸಂಕೇತವೆಂದು ಯೋಗಿ ಆದಿತ್ಯನಾಥ್‌ಗೆ ಬುಲ್ಡೋಜರ್ ಬಾಬಾ ಹೆಸರನ್ನು ಬಳಸಲಾಯಿತು. ಜೊತೆಗೆ ಸೈಕಲ್ ಅನ್ನು ಹೊಸ ಅಭಿವೃದ್ಧಿಯ ಸಂಕೇತವೆಂದು ಬಣ್ಣಿಸಲಾಯಿತು. ಹೀಗಿರುವಾಗ ರ್ಯಾಲಿಯಲ್ಲಿ ಜನಸಾಗರವೇ ನೆರೆದಿದ್ದರೂ ಸಮಾಜವಾದಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ಹುರುಪು ತೋರದೇ ಇರುವುದಕ್ಕೆ ಕಾರಣವೇನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಬಿಜೆಪಿ ಬುಲ್ಡೋಜರ್ ಸೈಕಲ್ ಮೇಲೆಯೇ ಹರಿದಂತಿದೆ.

ಮಹಿಳೆಯರ ಮತ ಬಿಜೆಪಿಗೆ ಹಿತ
ಈ ಬಾರಿಯ ಮಹಿಳಾ ಮತಗಳು ಭಾರತೀಯ ಜನತಾ ಪಕ್ಷದ ಗೆಲುವಿನಲ್ಲಿ ದೊಡ್ಡ ಪ್ರಭಾವ ಬೀರಿದೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಬಿಜೆಪಿಗೆ ಲಾಭ ತಂದಿದೆ. ಮಹಿಳೆಯರ ಸುರಕ್ಷತೆಗೆ ಯೋಗಿ ಕೈಗೊಂಡಿರುವ ಕ್ರಮಗಳನ್ನು ಮಹಿಳೆಯರು ಮೆಚ್ಚಿದ್ದಾರೆ ಮತ್ತು ಆ ಕಾರಣದಿಂದ ರಾಜ್ಯದಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತರಾಗಿದ್ದಾರೆ ಮತ್ತು ಅದರ ಲಾಭ ಬಿಜೆಪಿಗೆ ಮತ್ತೆ ಇತಿಹಾಸ ಸೃಷ್ಟಿಸಲು ಕಾರಣವಾಗಿದೆ ಎಂದು ಬಿಜೆಪಿಯ ದೊಡ್ಡ ನಾಯಕರು ಹೇಳುತ್ತಾರೆ.

ರಾಜವಂಶದ ರಾಜಕಾರಣ ಬಿಟ್ಟು ಅಭಿವೃದ್ಧಿ ನೀತಿಯತ್ತ ಜನ
ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನಿರುದ್ಯೋಗ, ರೈತರ ಚಳವಳಿ ಮತ್ತು ಅಭಿವೃದ್ಧಿಯ ಕೊರತೆಯ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಆದರೆ ಅದು ಯೋಗಿ ಸರ್ಕಾರದ ಮೇಲೆ ಪರಿಣಾಮ ಬೀರಲಿಲ್ಲ. ಈ ಕುರಿತು ಮಾತನಾಡಿದ ಬಿಜೆಪಿಯ ನಾಯಕರು, ವಂಶ ರಾಜಕಾರಣಕ್ಕಿಂತ ಅಭಿವೃದ್ಧಿ ನೀತಿಗೆ ಜನರು ಪ್ರಾಮುಖ್ಯತೆ ನೀಡಿದ್ದಾರೆ ಮತ್ತು ಯುವಕರ ಮತ್ತು ಹೊಸ ಯುಗದ ಪಕ್ಷ ಎಂದು ಹೇಳುತ್ತಿದ್ದ ಸಮಾಜವಾದಿ ಪಕ್ಷವನ್ನು ಬಿಟ್ಟು ನಮ್ಮ ಇಮೇಜ್ ಅನ್ನು ಬಿಟ್ಟುಕೊಡಲಿಲ್ಲ ಎಂದಿದ್ದಾರೆ.
ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?
ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.












Click it and Unblock the Notifications