UP Election Result 2022: ಯುಪಿಯಲ್ಲಿ ಬಿಜೆಪಿ ಮುನ್ನಡೆಗೆ ಕಾರಣವೇನು?

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಈವರೆಗೆ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಯುಪಿಯ ಎಲ್ಲಾ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಅಧಿಕ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಲಕ್ಷಣಗಳು ದಟ್ಟವಾಗಿವೆ. ಯುಪಿ ಮತದಾರರನ್ನು ಆಕರ್ಷಿಸಲು ಬಿಜೆಪಿ ಹರಸಾಹಸವೇ ಪಟ್ಟಿದೆ. ಚುನಾವಣೆ ಪ್ರಚಾರದ ವೇಳೆ ವಿಪಕ್ಷಗಳು ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದವು. ಯುಪಿಯಲ್ಲಿ ಬಿಜೆಪಿ ನಿರುದ್ಯೋಗ ಸಮಸ್ಯೆಗಳು ಮತ್ತು ರೈತರ ಪರ ಯೋಜನೆಗಳ ಬಗ್ಗೆ ಗಮನ ಹರಿಸಿಲ್ಲ ಎನ್ನುವ ಬಲವಾದ ಆರೋಪಗಳನ್ನು ವಿರೋಧ ಪಕ್ಷಗಳು ಮಾಡಿದ್ದವು.

ಮಾತ್ರವಲ್ಲದೆ ಕಳೆದ ಅಕ್ಟೋಬರ್‌ನಲ್ಲಿ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಬಿಜೆಪಿ ಕಾರ್ಯಕರ್ತರಿದ್ದ ಕಾರು ವೇಗವಾಗಿ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಹರಿದಿತ್ತು. ಬಳಿಕ ರೈತರ ಮೇಲೆ ಹಲ್ಲೆ ನಡೆಸಿದ ಆರೋಪಗಳು ಕೇಳಿಬಂದಿದ್ದವು. ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ನನ್ನು ಪೊಲೀಸರು ಬಂಧಿಸಿದ್ದು, ಕಳೆದ ತಿಂಗಳು ಅವರು ಜಾಮೀನು ಪಡೆದಿದ್ದರು. ಈ ಘಟನೆಯ ಬಳಿಕ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ರೈತ ವಿರೋಧಿ ನಿರ್ಧಾರಗಳ ಬಗ್ಗೆ ವಿಪಕ್ಷಗಳು ಪ್ರಸ್ತಾಪಿಸಿವೆ. ಬಿಜೆಪಿಯನ್ನು ಮೂಲೆಗುಂಪು ಮಾಡುವ ಯಾವುದೇ ಅವಕಾಶವನ್ನು ವಿರೋಧ ಪಕ್ಷಗಳು ಕಳೆದುಕೊಂಡಿಲ್ಲ. ಇದೆಲ್ಲದರ ನಡುವೆ ಯುಪಿಯಲ್ಲಿ ಕಮಲ ಅರಳಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಹಲವಾರು ಕಾರಣಗಳಿವೆ.

ಕಾರಣ 1: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಐದು ವರ್ಷಗಳ ಆಡಳಿತದ ನಂತರವೂ ಅವರ ವಿರುದ್ಧ ಯಾವುದೇ ಗೋಚರ ವಿರೋಧಿ ಆಡಳಿತವಿಲ್ಲ. ಮೂರು ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆದ ನಂತರ ಗ್ರಾಮೀಣ ಪ್ರದೇಶಗಳಿರಲಿ ಅಥವಾ ನಗರಗಳಿರಲಿ, ಬಡವರಿಂದ ಹಿಡಿದು ಮಧ್ಯಮ ವರ್ಗದವರವರೆಗೆ ಸಿಎಂ ವಿರುದ್ಧ ಬಲವಾದ ಟೀಕೆಯ ಧ್ವನಿಯೂ ಕೇಳಿ ಬರಲಿಲ್ಲ. ಉತ್ತರ ಪ್ರದೇಶದ ಜನರು ಅವರನ್ನು ಅಪ್ಪಿಕೊಂಡಿದ್ದಾರೆ ಮತ್ತು ಅವರಿಗೆ ಎರಡನೇ ಅವಕಾಶ ನೀಡಲು ಸಿದ್ಧರಿದ್ದಾರೆ ಎನ್ನಲಾಗುತ್ತಿದೆ.

UP Election Result 2022: Why BJP is set to cross 267+ seats in UP

ಕಾರಣ 2: ಯುಪಿಯ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಗೋಚರ ಸುಧಾರಣೆಯಾಗಿದೆ. ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಬಿಜೆಪಿಯನ್ನು ವಿರೋಧಿಸುವವರೂ ಇದನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದು ಬಹುಮುಖ್ಯವಾದ ವಿಚಾರ.

ಕಾರಣ 3: ಉತ್ತರಪ್ರದೇಶದ ಮಹಿಳಾ ಮತದಾರರಿಗೆ (ಕಾರಣಗಳು ಹಲವು ಆಗಿರಬಹುದು: ಕಾನೂನು ಮತ್ತು ಸುವ್ಯವಸ್ಥೆ, ಕಲ್ಯಾಣ ಯೋಜನೆಗಳು, ಪ್ರಾಮಾಣಿಕತೆ) ಯುಪಿ ಸಿಎಂ ಪಿಎಂ ಮೋದಿಗಿಂತ ಹೆಚ್ಚು ಅಲ್ಲದಿದ್ದರೂ ಅಷ್ಟೇ ಜನಪ್ರಿಯರಾಗಿದ್ದಾರೆ. ಈ ಜನಪ್ರಿಯತೆಯು ತಲೆಮಾರುಗಳಿಂದ ಬೆಳೆಯುತ್ತಿದೆ. ಚುನಾವಣೆಯಲ್ಲಿ ಬಿಜೆಪಿ ಮಹಿಳಾ ಮತಗಳಲ್ಲಿ ಸಿಂಹಪಾಲು ಪಡೆಯಲಿದೆ. ಮಹಿಳಾ ಮತದಾರರಲ್ಲಿನ ಈ ಆಕರ್ಷಣೆಯಿಂದಾಗಿ ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿ ತನ್ನ ಮತಗಳನ್ನು 5% ಹೆಚ್ಚಿಸಲಿದೆ.

ಕಾರಣ 4: ಕೋವಿಡ್ ಪರೀಕ್ಷೆಯ ಸಮಯದಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳು ನಿರ್ಣಾಯಕ ಅಂಶವಾಗಿದ್ದವು. ಅದು ಉಚಿತ ಪಡಿತರ, ನಗದು ವರ್ಗಾವಣೆ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಬಡವರಿಗೆ ಮನೆಯಂತಹ ಜನಪರ ಯೋಜನೆಗಳು ಬಿಜೆಪಿ ಗೆಲುವಿಗೆ ಕಾರಣವಾಗಿವೆ. ಸರ್ಕಾರದ ಯೋಜನೆಗಳ ಈ ಉದ್ದೇಶಿತ ವಿತರಣೆಯು ಬಿಜೆಪಿಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತಿದೆ.

ಕಾರಣ 5: ಪಿಎಂ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಸಂಯೋಜನೆಯು ಯುಪಿಯಲ್ಲಿ ಮತದಾರರನ್ನು ಸೆಳೆಯುತ್ತಿದೆ. ಇದನ್ನು ಹಿಂದೆ 'ಹಿಂದುತ್ವ ಪ್ರಯೋಗಾಲಯ' ಎಂದು ಕರೆಯಲಾಗುತ್ತಿತ್ತು. ಈ ಬಾರಿ ರಾಮ ಮಂದಿರ ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ಮತದಾರರ ಮನವನ್ನು ಮುಟ್ಟಿದೆ. ಆದರೆ ಇದೊಂದೇ ವಿಷಯವಲ್ಲ. ಉತ್ತಮ ರಸ್ತೆಗಳು, ಉತ್ತಮ ವಿದ್ಯುತ್ ಪೂರೈಕೆ, ಉತ್ತಮ ಮೂಲಸೌಕರ್ಯ, ಉತ್ತಮ ಪೊಲೀಸ್ ವ್ಯವಸ್ಥೆ ಮತದಾರರಲ್ಲಿ ಚರ್ಚೆಯಾಗಿದೆ. ಇಂತೆಲ್ಲಾ ಕಾರಣಗಳಿಂದ ಯುಪಿಯಲ್ಲಿ ಬಹುಮತ ಪಡೆಯಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.

ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?

ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+