UP Election Result 2022: ಬಿಜೆಪಿಗೆ 2ನೇ ಬಾರಿ ಅಧಿಕಾರ ಗದ್ದುಗೆ
ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಯುಪಿಯ 403 ವಿಧಾನಸಭೆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202. ಇದರಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದಿದೆ. ಸಮಾಜವಾದಿ ಪಕ್ಷ ಒಟ್ಟು 111 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಕಂಡಿದೆ. ಇನ್ನೂ ಬಿಎಸ್‌ಪಿ ಕೂಡ ಒಂದೇ ಒಂದು ಸ್ಥಾನ ಪಡೆದುಕೊಂಡಿದ್ದು ಭಾರೀ ಮುಖಭಂಗವನ್ನು ಎದುರಿಸಿದೆ. ಇನ್ನೂ ಇತರೆ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳನ್ನು ಮಾತ್ರ ಸೆಳೆದಿದೆ. ಈ ಬಾರಿ ಎಸ್‌ಪಿಗೆ ಕಾಂಗ್ರೆಸ್ ಹಾಗೂ ಬಿಎಸ್‌ಪಿ ಮತಗಳು ಸಿಕ್ಕಿವೆ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಇನ್ನೂ ಮೊದಲಬಾರಿಗೆ ಸ್ಪರ್ಧಿಸಿದೆ ಗೋರಖ್‌ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಹಾಗೂ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್ ಬಹುಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ. ಹಾಗಾದ್ರೆ ಉತ್ತರಪ್ರದೇಶದ ಪ್ರಮುಖ ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿದ ಪಕ್ಷಗಳು ಹಾಗೂ ಅಭ್ಯರ್ಥಿಗಳ ವಿವರವನ್ನು ನೋಡೋಣ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತದಾನದಲ್ಲಿ ಗೋರಖ್‌ಪುರ ಕ್ಷೇತ್ರವೂ ಒಂದು. ಈ ಕ್ಷೇತ್ರದಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಹುಮತದೊಂದಿಗೆ ಕೇಸರಿ ಕಮಾಲ್ ಮಾಡಿದೆ. ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಪ್ರಭವತಿ ಶುಕ್ಲಾ ಅವರು ಸೋತಿದ್ದಾರೆ.
ಇನ್ನೂ ಮೂರನೇ ಹಂತದ ಮತದಾನದಲ್ಲಿ ಕರ್ಹಾಲ್ ಕ್ಷೇತ್ರ ಮತದಾರರ ಗಮನ ಸೆಳೆದಿದೆ. ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್ ಬಹುಮತ ಪಡೆದು ಮುನ್ನಡ ಸಾಧಿಸಿದ್ದು ಬಿಜೆಪಿ ಅಭ್ಯರ್ಥಿ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಎಸ್.ಪಿ.ಸಿಂಗ್ ಬಘೇಲ್ ಅವರನ್ನು ಸೋಲಿಸಿದ್ದಾರೆ. ಇತರ ಪ್ರಮುಖ ಕ್ಷೇತ್ರಗಳಲ್ಲಿ ಯಾವ ಪಕ್ಷ ಯಾವ ಅಭ್ಯರ್ಥಿ ಜಯ ಸಾಧಿಸಿದ್ದಾರೆಂದು ನೋಡುವುದಾದರೆ-

ಕ್ಷೇತ್ರಗಳು- ಪಕ್ಷಗಳು- ಅಭ್ಯರ್ಥಿಗಳು
ಉನ್ನಾವೋ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪಂಕಜ್ ಗುಪ್ತಾಗೆ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಆಶಾ ಸಿಂಗ್‌ಗೆ- ಸೋಲು
ವಾರಣಾಸಿ ದಕ್ಷಿಣ- ಎಸ್‌ಪಿ ಅಭ್ಯರ್ಥಿ ಕಾಮೇಶ್ವರನಾಥ್ ದೀಕ್ಷಿತ್ ಗೆಲುವು- ಬಿಜೆಪಿ ನೀಲಕಂಠ ತಿವಾರಿಗೆ- ಸೋಲು
ಸಿರತು ಕ್ಷೇತ್ರ- ಎಸ್‌ಪಿ ಅಭ್ಯರ್ಥಿ ಡಾ.ಪಲ್ಲವಿ ಪಟೇಲ್‌ಗೆ ಗೆಲುವು- ಬಿಜೆಪಿ ಅಭ್ಯರ್ಥಿ ಕೇಶವ್ ಪ್ರಸಾದ್ ಮೌರ್ಯಗೆ ಮುಖಭಂಗ
ಅಯೋಧ್ಯೆ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ವೇದ್ ಪ್ರಕಾಶ್ ಗುಪ್ತಾಗೆ ಜಯ- ಎಸ್ಪಿ ಅಭ್ಯರ್ಥಿ ತೇಜ್ ನಾರಾಯಣ- ಸೋಲು
ಶಹಜಹಾನ್‌ಪುರ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಸರೇಶ್ ಖನ್ನಾ ಗೆಲುವು- ಕಾಂಗ್ರೆಸ್ ಅಭ್ಯರ್ಥಿ ಪೂನಂ ಪಾಂಡೆ ಸೋಲು
ಹರ್ದೋಯಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನಿತಿನ್ ಅಗರ್ವಾಲ್ -ಗೆಲುವು
ಘೋಸಿ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ದರ್ ಸಿಂಗ್ ಚೌಹಾಣ್ - ಗೆಲುವು
ಮೌ ಕ್ಷೇತ್ರದಿಂದ ಎಸ್‌ಬಿಎಸ್‌ಪಿ ಅಭ್ಯರ್ಥಿ ಅಬ್ಬಾಸ್ ಅನ್ಸಾರಿ - ಗೆಲುವು
ಅಲಹಾಬಾದ್ ಸೌತ್ ಬಿಜೆಪಿ ಅಭ್ಯರ್ಥಿ ನಂದ ಗೋಪಾಲ ಗುಪ್ತಾ ನಂದಿ- ಸೋಲು
ರಾಮ್‌ಪುರ ಖಾಸ್ ಐಎನ್‌ಸಿ ಅಭ್ಯರ್ಥಿ ಆರಾಧನಾ ಮಿಶ್ರಾ- ಗೆಲುವು
ಮಹಾರಾಜ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸತೀಶ್ ಮಹನ - ಗೆಲುವು
ಸರೋಜಿನಿ ನಗರದಿಂದ ಬಿಜೆಪಿ ಅಭ್ಯರ್ಥಿ ರಜೇಶ್ವರ್ ಸಿಂಗ್- ಗೆಲುವು
ಗಾಜಿಯಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅತುಲ್ ಗರ್ಗ- ಗೆಲುವು
ಆಗ್ರಾ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬೇಬಿ ರಾಣಿ ಮೌರ್ಯ- ಗೆಲುವು
ಶಾಹಜಾಹಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಖನ್ನಾ- ಗೆಲುವು
ಥಾಣ ಭವನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್- ಸೋಲು
ಜೇವರ್ ಕ್ಷೇತ್ರದಿಂದ ಆರ್‌ಎಲ್‌ಡಿ ಅಭ್ಯರ್ಥಿ ಅವತಾರ್ ಸಿಂಗ್ ಭದನ- ಸೋಲು
ನಕುರ್ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಡಾ. ಧರಂ ಸಿಂಗ್ ಸೈನಿ- ಗೆಲುವು
ಸೌರಾ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಮೊಹ್ಮದ್ ಅಬ್ದುಲ್ಲಾ ಅಜಮ್ ಖಾನ್ - ಗೆಲುವು
ನೋಯ್ಡಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಂಕಜ್ ಸಿಂಗ್- ಗೆಲುವು
ಮಥುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಶರ್ಮಾ- ಗೆಲುವು
ಸದಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಮ್‌ವೀರ್ ಉಪಾದ್ಯಾಯ- ಸೋಲು
ಕಿತೋರೆ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಶಾಹಿದ್ ಮಂಜೂರ್- ಗೆಲುವು
ಸರ್ದಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಂಗೀತ್ ಸಿಂಗ್ ಸೋಮ್- ಸೋಲು
ರಾಯ್ ಬರೇಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆದಿತಿ ಸಿಂಗ್ - ಗೆಲುವು
ಲಕ್ನೋ ಕೌಂಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಪಠಾಕ್ - ಗೆಲುವು
ತಮ್‌ಕುಹಿ ರಾಜ್ ಕ್ಷೇತ್ರದಿಂದ ಐಎನ್‌ಸಿ ಅಭ್ಯರ್ಥಿ ಅಜಯ್ ಕುಮಾರ್ ಲಲ್ಲು- ಗೆಲುವು
ರಾಮ್‌ಪುರ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಮೊಹ್ಮದ್ ಅಜಾಮ್ ಖಾನ್ - ಗೆಲುವು
ಜಸ್ವಂತ್‌ನಗರ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಶಿವಪಾಲ್ ಸಿಂಗ್ ಯಾದವ್- ಗೆಲುವು
ಕನೌಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಶಿಮ್ ಅರುಣ್ - ಗೆಲುವು
ಕುಂದಾ ಕ್ಷೇತ್ರದಿಂದ ಜೆಡಿಎಲ್‌ಕೆ ಅಭ್ಯರ್ಥಿ ರಘುರಾಜ್ ಪ್ರತಾಪ್ ಸಿಂಗ್ - ಗೆಲುವು
ಫಾಝಿಲ್ ನಗರದಿಂದ ಎಸ್‌ಪಿ ಸ್ವಾಮಿ ಪ್ರಸಾದ್ ಮೌರ್ಯ- ಸೋಲು, ಬಿಜೆಪಿಯ ಸುರೇಶ್ ಕುಮಾರರ್ ಸಿಂಗ್ ಗೆಲುವು
ಪ್ರತಾಪ್‌ಗಢ್‌ದಲ್ಲಿ ಎಡಿ(ಕೆಡ್ಲ್ಯೂ) ಕೃಷ್ಣಾ ಪಟೇಲ್ - ಸೋಲು
ಜಹೂರಾಬಾದ್ ಕ್ಷೇತ್ರದಿಂದ ಎಸ್‌ಬಿಎಸ್‌ಪಿ ಅಭ್ಯರ್ಥಿ ಓಂ ಪ್ರಕಾಶ್ ರಾಜ್ಬರ್- ಗೆಲುವು
ಛಿಬ್ರಮೌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅರ್ಚನಾ ಪಾಂಡೆಗೆ ಗೆಲುವು
ಚಂದೌಸಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗುಲಾಬ್ ದೇವಿಗೆ ಗೆಲುವು
ಫರೂಕಾಬಾದ್‌ನಲ್ಲಿ ಬಿಜೆಪಿಯ ಸುನೀಲ್ ದತ್ ದ್ವಿವೇದಿ ಗೆಲುವು
ಫತೇಪುರ್ ಸಿಕ್ರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಾಬುಲಾಲ್ ಭಾರಿ ಅಂತರದಿಂದ ಗೆಲುವು
ಎಸ್‌ಪಿಯ ಅಭಯ್ ಸಿಂಗ್ ಗೋಶೈಗಂಜ್ ಕ್ಷೇತ್ರದಲ್ಲಿ ಗೆಲುವು
ಹುಸೇಂಗಂಜ್ ಕ್ಷೇತ್ರದಲ್ಲಿ ಎಸ್‌ಪಿಯ ಅಭ್ಯರ್ಥಿ ಉಷಾ ಮೌರ್ಯ ಗೆಲುವು
ಕಾಸ್ಗಂಜ್ ನಲ್ಲಿ ಬಿಜೆಪಿಯ ದೇವೇಂದ್ರ ಸಿಂಗ್ಗೆ ಗೆಲುವು
ಬಿಜೆಪಿ ಭರ್ಜರಿ ಗೆಲುವಿನಿಂದಾಗಿ ಕಾರ್ಯಕರ್ತರ ಸಂಭ್ರಮ ಉತ್ತರಪ್ರದೇಶದಲ್ಲಿ ಮುಗಿಲು ಮುಟ್ಟಿದೆ. ಸಿಹಿ ಹಂಚಿಕೊಂಡು ಕಾರ್ಯಕರ್ಯರು ಅಭ್ಯರ್ಥಿಗಳು ಕುಟುಂಬಸ್ಥರು ಸಂಭ್ರಮಿಸುತ್ತಿದ್ದಾರೆ. ಇನ್ನೂ ಎಸ್‌ಪಿ ಜಯ ಸಾಧಿಸಿದ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಿತು. ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಿತು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 20ರಂದು ಮೂರನೇ ಹಂತದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು. ಫೆಬ್ರವರಿ 23ರಂದು ನಾಲ್ಕನೇ ಹಂತದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ತದನಂತರ ಫೆಬ್ರವರಿ 27ರಂದು ಐದನೇ ಹಂತದಲ್ಲಿ 60 ಸ್ಥಾನಗಳಿಗೆ ಚುನಾವಣೆ ನಡೆಯಿತು. ಮಾರ್ಚ್ 3ರಂದು ಆರನೇ ಹಂತದಲ್ಲಿ 57 ಸ್ಥಾನಗಳಿಗೆ ಮತ್ತು ಮಾರ್ಚ್ 7ರಂದು ಅಂತಿಮವಾಗಿ ಏಳನೇ ಹಂತದಲ್ಲಿ 54 ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ.
2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications