'ಯುಪಿ ಜನರು ಗೂಂಡಾರಾಜ್ ಒಪ್ಪಿಕೊಳ್ಳುವುದಿಲ್ಲ' ಎಸ್‌ಪಿ ವಿರುದ್ಧ ಪ್ರಧಾನಿ ವಾಗ್ದಾಳಿ
ಕಾಸ್‌ಗಂಜ್ ಯುಪಿ ಫೆಬ್ರವರಿ 11: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಪೂರ್ಣಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿವೆ. ಎರಡನೇ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದ ಜನರು ಎಸ್‌ಪಿಯ 'ಗೂಂಡಾರಾಜ್' ಅನ್ನು ಸ್ವೀಕರಿಸುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಯುಪಿಯ ಕಾಸ್‌ಗಂಜ್‌ನಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಎಸ್‌ಪಿ ರಾಜವಂಶದ ರಾಜಕೀಯ ಎಂದು ಆರೋಪಿಸಿದರು ಮತ್ತು ಅದರ ನಾಯಕರನ್ನು 'ಪರಿವಾರವಾದಿ' ಗಳು ಎಂದು ಕರೆದಿದ್ದಾರೆ. ಪರಿವಾರವಾದಿ ಜನರು ತಮ್ಮ ದೋಣಿ ಮುಳುಗಿದೆ ಎಂದು ಅರಿತುಕೊಂಡಿದ್ದಾರೆ. ಆದ್ದರಿಂದ ಅವರು ಇವಿಎಂ ಮತ್ತು ಚುನಾವಣಾ ಆಯೋಗವನ್ನು ದೂಷಿಸಲು ಪ್ರಾರಂಭಿಸಿದ್ದಾರೆ. ಯುಪಿಯ ಜನರು ಅವರನ್ನು ಮತ್ತು ಅವರ 'ಗೂಂಡಾರಾಜ್' ಅನ್ನು ಸ್ವೀಕರಿಸಲು ಸಿದ್ಧರಿಲ್ಲ ಎಂಬುದು ಸತ್ಯ," ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿಯದ್ದು ಕುಟುಂಬ ರಾಜಕಾರಣ; ಸಿಎಂ ಯೋಗಿ
ಈ ವೇಳೆ ಇತ್ತೀಚೆಗೆ ನಿಧನರಾದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರಿನಲ್ಲಿ ಫಿಲ್ಮ್ ಸಿಟಿಯಲ್ಲಿ ಸಂಗೀತ ಅಕಾಡೆಮಿಯನ್ನು ಸ್ಥಾಪಿಸಿದ್ದಕ್ಕಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. "ಅಯೋಧ್ಯೆಯಲ್ಲಿ ಭಾರತ ರತ್ನ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರಿನ ಅಕಾಡೆಮಿ ಸ್ಥಾಪಿಸಲಾಗುತ್ತಿದೆ. ಚಲನಚಿತ್ರ ನಗರದಲ್ಲಿ ಸಂಗೀತಕ್ಕಾಗಿ ಲತಾ ಮಂಗೇಶ್ಕರ್ ಅಕಾಡೆಮಿಯನ್ನು ಸ್ಥಾಪಿಸಲು ನಾನು ಸಿಎಂ ಯೋಗಿಯನ್ನು ಅಭಿನಂದಿಸುತ್ತೇನೆ" ಎಂದು ಪ್ರಧಾನಿ ತಮ್ಮ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.

ಹಿಜಾಬ್ ವಿವಾದದ ನಡುವೆ ಮಹಿಳಾ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ
ಉತ್ತರ ಪ್ರದೇಶ ವಿಧಾನಸಭೆಗೆ ಎರಡನೇ ಹಂತದ ಮತದಾನ ಫೆಬ್ರವರಿ 14 ರಂದು ನಿಗದಿಯಾಗಿದೆ. ಎರಡನೇ ಹಂತದಲ್ಲಿ 55 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಒಂಬತ್ತು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದೆ. ಕಾಯ್ದಿರಿಸಿದ ಸ್ಥಾನಗಳಲ್ಲಿ ಸಹರಾನ್‌ಪುರ್, ಬಿಜ್ನೋರ್, ಅಮ್ರೋಹಾ (ಜೆಪಿ ನಗರ), ಮೊರಾದಾಬಾದ್, ಬರೇಲಿ, ರಾಂಪುರ, ಸಂಭಾಲ್ (ಭೀಮ್ ನಗರ), ಬುದೌನ್ ಮತ್ತು ಶಹಜಹಾನ್‌ಪುರ ಜಿಲ್ಲೆಗಳು ಸೇರಿವೆ.
ಇನ್ನೂ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ವಿಶ್ವವಿದ್ಯಾನಿಲಯ ನಿರ್ಮಾಣಕ್ಕಾಗಿ ಅಜಂಖಾನ್ ಜೈಲಿನಲ್ಲಿದ್ದಾಗ, ಕೇಂದ್ರ ಸಚಿವರ ಪುತ್ರ ರೈತರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದು ಬಿಜೆಪಿಯ ಹೊಸ ಭಾರತ ಎಂದು ಹೇಳಿದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಬಿಜೆಪಿಯನ್ನು ರಾಜ್ಯದಿಂದ ನಿರ್ನಾಮ ಮಾಡುವ ಸಾಕಷ್ಟು ಸೂಚನೆಗಳನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಅಲಹಾಬಾದ್ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.












Click it and Unblock the Notifications