ಉತ್ತರ ಪ್ರದೇಶ ಚುನಾವಣೆ: ಬಿಜೆಪಿಯ ಪ್ರಣಾಳಿಕೆಯಲ್ಲಿ ಏನೇನಿದೆ?

ಲಕ್ನೋ, ಫೆಬ್ರವರಿ 8: ಕೆಲವೇ ದಿನಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗಾಗಿ ಬಿಜೆಪಿಯು ಮಂಗಳವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಹಿರಿಯ ನಾಯಕ ಅನುರಾಗ್ ಠಾಕೂರ್ ಅವರೊಂದಿಗೆ 2022 ರ ಉತ್ತರ ಪ್ರದೇಶ ಚುನಾವಣೆಯ ಬಿಜೆಪಿ ಪ್ರಣಾಳಿಕೆಯನ್ನು ಮಂಗಳವಾರ ಲಕ್ನೋದಲ್ಲಿ ಬಿಡುಗಡೆ ಮಾಡಿದರು.

ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಹಲವಾರು ವಾಗ್ದಾಳಿ ನಡೆಸಿದ ಅಮಿತ್ ಶಾ ಐದು ವರ್ಷಗಳ ಹಿಂದೆ ಯುಪಿಯನ್ನು ಗಲಭೆ ಪೀಡಿತ ರಾಜ್ಯವೆಂದು ಪರಿಗಣಿಸಲಾಗಿತ್ತು.

UP Election 2022: BJP Releases Manifesto Titled Lok Kapyan Sankalp Patra 2022

ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮತ್ತು ಅವಧ್ ಪ್ರದೇಶ ತಾಯಂದಿರು ಮತ್ತು ಸಹೋದರಿಯರು ಸುರಕ್ಷಿತವಾಗಿರಲಿಲ್ಲ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಅಮಿತ್ ಶಾ, ಪಕ್ಷವು ಈ ಪ್ರಣಾಳಿಕೆಗೆ ಲೋಕ ಕಲ್ಯಾಣ ಸಂಕಲ್ಪ ಪತ್ರ ಎಂದು ಹೆಸರಿಸಿದೆ. ನಾವು ಯುಪಿಯಲ್ಲಿ ವಿವಿಧ ವಿಭಾಗಗಳ ನಡುವೆ ಹೋಗಿ ಅವರ ಅಭಿಪ್ರಾಯವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತರು ಹಳ್ಳಿ ಹಳ್ಳಿ, ನಗರದಿಂದ ನಗರಕ್ಕೆ ತಿರುಗಾಡಿ ಜನರ ನಡುವೆ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಗೃಹ ಸಚಿವರು, ಐದು ವರ್ಷಗಳ ಹಿಂದಿನ ದೃಶ್ಯ ನೆನಪಿಸಿಕೊಂಡ ಅವರು, ಇಲ್ಲಿ 2017 ರಲ್ಲಿ, ನಾವು ಸಾರ್ವಜನಿಕರ ಮುಂದೆ ಉತ್ತರ ಪ್ರದೇಶ ಅಭಿವೃದ್ಧಿಗಾಗಿ ಸಂಕಲ್ಪ ಪತ್ರ ದಾಖಲೆಯನ್ನು ಇರಿಸಿದ್ದೆವು. 2014ರ ಚುನಾವಣೆಯಲ್ಲಿ 80ರಲ್ಲಿ 73 ಸ್ಥಾನ ನೀಡುವ ಮೂಲಕ ಜನತೆ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದರು. ಪ್ರಣಾಳಿಕೆ ಬದಲು ಸಂಕಲ್ಪ ಪತ್ರ ಎಂದು ಹೆಸರಿಟ್ಟಿದ್ದೆವು ಎಂದು ಹೇಳಿದರು.

ಸಣ್ಣ ರೈತರಿಗೆ ಡಬಲ್ ಕಿಸಾನ್ ಸಮ್ಮಾನ್ ನಿಧಿಯನ್ನು ನೀಡಲಾಗುವುದು ಎಂದು ತಿಳಿಸಿದರು. ಫೆಬ್ರವರಿ 10 ರಿಂದ ಪ್ರಾರಂಭವಾಗುವ ಏಳು ಹಂತದ ಮತದಾನದಲ್ಲಿ ಪಶ್ಚಿಮ ಯುಪಿಯಲ್ಲಿ ಮೊದಲು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ ಶೇ. 92 ರಷ್ಟು ನಿರ್ಣಯಗಳನ್ನು ಈಡೇರಿಸಿದ್ದೇವೆ, ನಾವು ಹೇಳಿದ್ದನ್ನು ಮಾಡುತ್ತೇವೆ ಎಂಬುದು ಬಿಜೆಪಿಯ ಸಂಸ್ಕೃತಿ.

ವಿದ್ಯಾರ್ಥಿನಿಯರಿಗೆ ಸ್ಕೂಟಿ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ. ಅಲ್ಲದೆ, ಉಜ್ವಲ ಯೋಜನೆಯಡಿ ಪ್ರತಿ ವರ್ಷ ಮೂರು ಉಚಿತ ಸಿಲಿಂಡರ್‌ಗಳನ್ನು ನೀಡಲಾಗುವುದು.

ಬಿಜೆಪಿಯ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು:
*ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್
*5 ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ನೀರಾವರಿ ಯೋಜನೆ
*ಸರ್ದಾರ್ ಪಟೇಲ್ ಅಗ್ರಿ-ಇನ್ಫ್ರಾಸ್ಟ್ರಕ್ಚರ್ ಮಿಷನ್ - 25 ಸಾವಿರ ಕೋಟಿ *ವೆಚ್ಚದಲ್ಲಿ ಆಲೂಗಡ್ಡೆ, ಟೊಮೆಟೊ, ಈರುಳ್ಳಿಯಂತಹ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು 1 ಸಾವಿರ ಕೋಟಿ
*ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಹಾಗೂ ವರ್ಕಿಂಗ್ ಮಹಿಳೆಯರಿಗೆ ಸ್ಕೂಟಿ ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
*ಪ್ರತಿ ವಿಧವೆ ಮತ್ತು ನಿರ್ಗತಿಕ ಮಹಿಳೆಗೆ ತಿಂಗಳಿಗೆ 1500 ರೂಪಾಯಿ ಪಿಂಚಣಿ
*ಕಬ್ಬು ರೈತರಿಗೆ 14 ದಿನಗಳಲ್ಲಿ ಪಾವತಿ, ವಿಳಂಬವಾದರೆ ಬಡ್ಡಿ
*6 ಮೆಗಾ ಫುಡ್ ಪಾರ್ಕ್- ನಿಶಾದ್ರಾಜ್ ಬೋಟ್ ಸಬ್ಸಿಡಿ ಯೋಜನೆ
*ಮಿಷನ್ ಪಿಂಕ್ ಟಾಯ್ಲೆಟ್‌ಗೆ 1000 ಕೋಟಿ ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+