ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಬರೇಲಿ ಸದರ್ ಕ್ಷೇತ್ರದಿಂದ ಬಿಜೆಪಿಗೆ ಗೆಲುವು ತಂದುಕೊಡ್ತಾರಾ ಅದಿತಿ ಸಿಂಗ್ ರಾಯ್?

|
Google Oneindia Kannada News

ಲಕ್ನೋ ಜನವರಿ 22: ಭಾರತೀಯ ಜನತಾ ಪಕ್ಷ ಶುಕ್ರವಾರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ ಶಾಸಕಿ ಅದಿತಿ ಸಿಂಗ್ ಅವರಿಗೆ ರಾಯ್ ಬರೇಲಿ ಸದರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ರಾಯ್ ಬರೇಲಿಯ ಸದರ್ ವಿಧಾನಸಭಾ ಕ್ಷೇತ್ರದಿಂದ ಅದಿತಿ ಸಿಂಗ್ ಮತ್ತೆ ಸ್ಪರ್ಧಿಸಲಿದ್ದಾರೆ. ಹೀಗಿರುವಾಗ ತಮ್ಮ ಮೇಲೆ ಬಿಜೆಪಿ ಇಟ್ಟಿರುವ ನಂಬಿಕೆಯನ್ನು ಅದಿತಿ ಸಿಂಗ್ ಉಳಿಸಿಕೊಳ್ಳುವರೇ? ಬಿಜೆಪಿಗೆ ಗೆಲುವು ತಂದುಕೊಡುವರೇ ಎಂಬ ಪ್ರಶ್ನೆ ಏಳುತ್ತಿದೆ. 2017ರ ಚುನಾವಣೆಯಲ್ಲಿ ಸಿಕ್ಕ ಜನಮನ್ನಣೆಯನ್ನು ಪಕ್ಷ ಬದಲಿಸಿದ ಮೇಲೂ ಅದಿತಿ ಸಿಂಗ್ ಪಡೆಯುತ್ತಾರಾ? ಎನ್ನುವ ಅನುಮಾನ ಮೂಡಿದೆ.

ಅದಿತಿ ಸಿಂಗ್ ರಾಜಕೀಯ ಸ್ಥಾನಮಾನವನ್ನು ಹೆಚ್ಚಿಸಿದ ಬಿಜೆಪಿ

ಅದಿತಿ ಸಿಂಗ್ ರಾಜಕೀಯ ಸ್ಥಾನಮಾನವನ್ನು ಹೆಚ್ಚಿಸಿದ ಬಿಜೆಪಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರಕೋಟೆಯಾಗಿದ್ದ ರಾಯ್ ಬರೇಲಿಯಲ್ಲಿ ಬಿಜೆಪಿ ಬಂಡಾಯದ ಪ್ರತಿಫಲವನ್ನು ಅದಿತಿ ಸಿಂಗ್ ಮತ್ತು ರಾಕೇಶ್ ಸಿಂಗ್ ಅವರಿಗೆ ಟಿಕೆಟ್ ರೂಪದಲ್ಲಿ ನೀಡಿರುವುದು ಗಮನಾರ್ಹ. ಕಾಂಗ್ರೆಸ್ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಯ್ ಬರೇಲಿ ಸದರ್‌ನಿಂದ ಶಾಸಕರಾಗಿದ್ದ ಅದಿತಿ ಸಿಂಗ್ ಅವರಿಗೆ ಟಿಕೆಟ್ ಅಂತಿಮಗೊಳಿಸುವ ಮೂಲಕ ಬಿಜೆಪಿ ಅದಿತಿ ಸಿಂಗ್ ಅವರ ರಾಜಕೀಯ ಸ್ಥಾನವನ್ನು ಹೆಚ್ಚಿಸಿದೆ. ಕಳೆದ ಚುನಾವಣೆಯಲ್ಲಿ ಅದಿತಿ ಮತ್ತು ರಾಕೇಶ್ ಕುಟುಂಬ ಕಾಂಗ್ರೆಸ್‌ನಲ್ಲಿದ್ದು, ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದು ಸದನಕ್ಕೆ ಬಂದಿದ್ದರು. ಐದು ವರ್ಷಗಳ ಹಿಂದೆ ಎರಡೂ ಕುಟುಂಬಗಳು ಕಾಂಗ್ರೆಸ್‌ನಲ್ಲಿದ್ದವು ಮತ್ತು ಈಗ ಎರಡೂ ಕುಟುಂಬಗಳು ಬಿಜೆಪಿಯಲ್ಲಿವೆ.

ಕಾಂಗ್ರೆಸ್ ತೊರೆದರು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಅಖಿಲೇಶ್

ಕಾಂಗ್ರೆಸ್ ತೊರೆದರು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಅಖಿಲೇಶ್

ಅದಿತಿ ಕಳೆದ ಚುನಾವಣೆಯಲ್ಲಿ ತನ್ನ ತಂದೆ ಅಖಿಲೇಶ್ ಅವರ ಆಶ್ರಯದಲ್ಲಿ ಅದಿತಿ ಸಿಂಗ್ ಸ್ಪರ್ಧಿಸಿದ್ದರು. ಅದಿತಿ ಸಿಂಗ್ 2017 ರಲ್ಲಿ ತನ್ನ ತಂದೆ ದಿವಂಗತ ಅಖಿಲೇಶ್ ಸಿಂಗ್ ಅವರ ಛತ್ರಿಯಡಿಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸಾರ್ವಜನಿಕರಿಂದ ಅಪಾರ ಪ್ರೀತಿಯನ್ನು ಪಡೆದರು. ಈ ವೇಳೆ ಅದಿತಿ ಚುನಾವಣೆಯಲ್ಲಿ 90 ಸಾವಿರ ಅಂತರದಿಂದ ಗೆದ್ದಿದ್ದರು. ಅವರು ತಮ್ಮ ತಂದೆ ಅಖಿಲೇಶ್ ಸಿಂಗ್ ಅವರ ಸದರ್ ಸೀಟ್ ಮೇಲೆ ಆಸೆ ಹೊಂದಿದ್ದರು. ಆದರೆ ಅಖಿಲೇಶ್ ಎಂದಿಗೂ ಬಿಜೆಪಿಗೆ ಹತ್ತಿರವಾಗಿರಲಿಲ್ಲ. ಅವರು ಯಾವಾಗಲೂ ಕಾಂಗ್ರೆಸ್‌ಗೆ ಹತ್ತಿರವಾಗಿದ್ದರು ಮತ್ತು ಅಖಿಲೇಶ್ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಾಗಲೆಲ್ಲಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರು.

ಅದಿತಿ ಸಿಂಗ್ ಬರೇಲಿ ಗೆಲ್ತಾರಾ?

ಅದಿತಿ ಸಿಂಗ್ ಬರೇಲಿ ಗೆಲ್ತಾರಾ?

ಅಖಿಲೇಶ್ ಸಿಂಗ್ ಅವರು ಬದುಕಿದ್ದಾಗಲೇ ಅದಿತಿ ಅವರನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ಮಾಡಿದರು. ಅವರ ಮಗಳನ್ನು ತಮ್ಮ ಸದರ್ ಸೀಟಿನ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಇಲ್ಲಿಯವರೆಗೆ ರಾಯ್ ಬರೇಲಿ ಸದರ್ ಕ್ಷೇತ್ರವನ್ನು ಬಿಜೆಪಿ ಗೆದ್ದಿಲ್ಲ. ಅದಿತಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಈ ಕ್ಷೇತ್ರವು ಕೇಸರಿಮಯವಾಗಿದೆ. ಅದಿತಿ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದ್ದಾರೆ ಎಂದು ರಾಜಕೀಯ ತಜ್ಞರು ವಿವರಿದ್ದಾರೆ.

ರಾಜಕೀಯ ತಜ್ಞರ ಲೆಕ್ಕಾಚಾರ

ರಾಜಕೀಯ ತಜ್ಞರ ಲೆಕ್ಕಾಚಾರ

ಈ ಬಗ್ಗೆ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ತಜ್ಞ ನಾವೇದ್ ಶಿಕೋ ಹೇಳಿದ್ದು, ಅದಿತಿ ಸಿಂಗ್ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಮುರಿದುಕೊಂಡ ಬೆನ್ನಲ್ಲೇ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ. ಅವರು ತಮ್ಮ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸುವ ಪ್ರಬಲ ಸಾಧ್ಯತೆಗೆ ಹಲವು ಕಾರಣಗಳಿವೆ. ಅದಿತಿಯ ತಂದೆ ಅಖಿಲೇಶ್ ಸಿಂಗ್ ಸುಮಾರು ಮೂರು ದಶಕಗಳಿಂದ ಸದರ್ ವಿಧಾನಸಭಾ ಕ್ಷೇತ್ರವನ್ನು ಆಳಿದ್ದಾರೆ. ಇಲ್ಲಿ ಐದು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲ್ಲುತ್ತಿದ್ದರೂ ಈ ಕ್ಷೇತ್ರದಲ್ಲಿ ಅವರಿಗೆ ಅಪಾರ ಬೆಂಬಲವಿದೆ ಎನ್ನಲಾಗಿತ್ತು. ಬಾಹುಬಲಿ ಎಂದು ಕರೆಸಿಕೊಳ್ಳುವ ದಿವಂಗತ ಅಖಿಲೇಶ್ ಜನಸಾಮಾನ್ಯರೊಂದಿಗೆ ತಳಮಟ್ಟದ ನಾಯಕರಾಗಿದ್ದರು. ಅನಾರೋಗ್ಯದ ಕಾರಣ ಅವರು 2017 ರಲ್ಲಿ ತಮ್ಮ ಮಗಳು ಅದಿತಿಯನ್ನು ತಮ್ಮ ಸ್ಥಾನದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದರು. ತಂದೆಯ ಆಸೆಯಂತೆ ಅದಿತಿ ಸಿಂಗ್ ಭಾರಿ ಮತಗಳಿಂದ ಗೆದ್ದು ಯಶಸ್ವಿಯಾದರು. ಇದಾದ ನಂತರ ಅದಿತಿಯ ತಂದೆ ಅಖಿಲೇಶ್ ಸಿಂಗ್ ನಿಧನರಾದರು. ದೇಶದಲ್ಲಿ ಮೋದಿ ಅಲೆಯ ನಂತರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಲೆ ಬೀಸಿದಾಗ ಮತ್ತು ಕಾಂಗ್ರೆಸ್ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಥಿಯಲ್ಲೂ ಕಾಂಗ್ರೆಸ್ ಅನ್ನು ತೆರವುಗೊಳಿಸಿದಾಗ, ಅದಿತಿ ತನ್ನ ತಂದೆಯ ರಾಜಕೀಯ ಪರಂಪರೆಯ ಪಾರಮ್ಯವನ್ನು ಉಳಿಸುವಲ್ಲಿ ಯಶಸ್ವಿಯಾದರು.

ಗೆಲ್ಲುವ ಸಾಧ್ಯತೆ ಹೆಚ್ಚು

ಗೆಲ್ಲುವ ಸಾಧ್ಯತೆ ಹೆಚ್ಚು

ಬಿಜೆಪಿಯ ಅಲೆಯಲ್ಲಿ ಸದರ್ ಶಾಸಕರು ಬಿಜೆಪಿಯೊಂದಿಗೆ ಅನೌಪಚಾರಿಕ ಸಂಬಂಧ ಹೊಂದಿದ್ದು, ಕಾಂಗ್ರೆಸ್‌ನಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಇದೀಗ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಯಿಂದ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದು ನವೇದ್ ಶಿಕೋಹ್ ಹೇಳುತ್ತಾರೆ. ಅವರ ಬಂಡಾಯ ಬಲವಾಗಿ ಕಾಣುತ್ತಿದೆ. ಹೀಗಾಗಿ ಅವರ ಸ್ವಂತ ಗುರುತು, ತಂದೆಯ ರಾಜಕೀಯ ಪರಂಪರೆ ಮತ್ತು ಬಿಜೆಪಿಯ ಬೆಂಬಲ ಮತ್ತು ಅತ್ಯುತ್ತಮ ಬೂತ್ ನಿರ್ವಹಣೆಯು ಅವರಿಗೆ ಗೆಲ್ಲಲು ಸಹಾಯಕವಾಗಿದೆ ಎನ್ನಲಾಗುತ್ತಿದೆ.

Recommended Video

ಇದಪ್ಪ ಕನ್ನಡಿಗನ ಅದೃಷ್ಟ ಅಂದ್ರೆ !! | Oneindia Kannada

English summary
The Bharatiya Janata Party on Friday released its second list of candidates for the Uttar Pradesh Assembly Elections 2022. In this list MLA Aditi Singh who joined BJP after rebelling against Congress has been given ticket by BJP from Rae Bareli Sadar seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X