ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಅಖಿಲೇಶ್ ಯಾದವ್ ಪ್ರತಿಭಟನಾ ಮೆರವಣಿಗೆ ನಿಲ್ಲಿಸಿದ ಪೊಲೀಸರು: ಯೋಗಿ ಆದಿತ್ಯನಾಥ್ ಹೇಳಿದ್ದೇನು?

|
Google Oneindia Kannada News

ಲಕ್ನೋ ಸೆಪ್ಟೆಂಬರ್ 19: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಜನತೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿಧಾನ ಭವನಕ್ಕೆ ಮೆರವಣಿಗೆ ಹೊರಟಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಪಕ್ಷದ ಸದಸ್ಯರನ್ನು ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ. ಮೆರವಣಿಗೆಯನ್ನು ಮುನ್ನಡೆಸುತ್ತಿದ್ದ ಸಮಾಜವಾದಿ ಪಕ್ಷದ ನಾಯಕ ಪೊಲೀಸ್ ಬ್ಯಾರಿಕೇಡ್ ದಾಟಿ 100 ಮೀಟರ್ ಕ್ರಮಿಸುವಲ್ಲಿ ಯಶಸ್ವಿಯಾದರು. ಆದರೆ ತಮ್ಮ ಉದ್ದೇಶಿತ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಪಕ್ಷಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ಅವರನ್ನು ತಡೆಹಿಡಿದಿದ್ದಾರೆ. ಪೊಲೀಸರು ತಡೆದ ಬಳಿಕ ಅಖಿಲೇಶ್ ಯಾದವ್ ಮೆಗಾ ಪ್ರತಿಭಟನಾ ಮೆರವಣಿಗೆ ನಿಲ್ಲಿಸಿದ್ದಾರೆ.

ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಯಾವುದೇ ಪಕ್ಷವು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದರೆ ಯಾವುದೇ ಹಾನಿಯಾಗುವುದಿಲ್ಲ. ಯಾರಿಗೂ ತೊಂದರೆಯಾಗದ ಯಾವುದೇ ಮೆರವಣಿಗೆಗೆ ಸಮಾಜವಾದಿ ಪಕ್ಷವು ಅನುಮತಿಯನ್ನು ತೆಗೆದುಕೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಅನುಸರಿಸುವುದು ಸಮಾಜವಾದಿ ಪಕ್ಷದ ನಾಯಕರಿಂದ ನಾವು ನಿರೀಕ್ಷಿಸುತ್ತಿದ್ದೇವೆ' ಎಂದು ಅವರು ಹೇಳಿದರು.

ಎಸ್‌ಪಿ ಕಚೇರಿಯಿಂದ ಆರಂಭಗೊಂಡು ರಾಜಭವನ ಮತ್ತು ಜನರಲ್ ಪೋಸ್ಟ್ ಆಫೀಸ್ ಬಳಿ ಇರುವ ಗಾಂಧಿ ಪ್ರತಿಮೆ ಮೂಲಕ ಹಾದುಹೋಗುವ ಮಾರ್ಗವನ್ನು ಬದಲಾಯಿಸುವುದಿಲ್ಲ ಎಂದು ಪಕ್ಷ ಹೇಳಿತ್ತು. ಆದರೆ ಅವರ ಮೆರವಣಿಗೆಯನ್ನು ಪೊಲೀಸರು ತಡೆದ ನಂತರ ಅಖಿಲೇಶ್ ಯಾದವ್ ಮತ್ತು ಅವರ ಪಕ್ಷದ ನಾಯಕರು ಧರಣಿ ಕುಳಿತಿದ್ದ ಸ್ಥಳವನ್ನು ತೊರೆದರು. ಇದೀಗ ಮತ್ತೆ ಪಕ್ಷದ ಕಚೇರಿಗೆ ತೆರಳಿದ್ದಾರೆ.

UP: Akhilesh Yadav protest march stopped by police: What did Yogi Adityanath say?

ಪಾದಯಾತ್ರೆಯ ದೃಶ್ಯಗಳೊಂದಿಗೆ ಟ್ವೀಟ್ ಮಾಡಿರುವ ಪಕ್ಷ, ಬಿಜೆಪಿ ಸರ್ಕಾರ "ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ" ಎಂದು ಹೇಳಿದೆ.

"ಎಎಪಿ ಅವರು ಅನುಮತಿಯನ್ನು ತೆಗೆದುಕೊಂಡಿರಲಿಲ್ಲ. ಆದರೂ, ಅವರಿಗೆ ಮಾರ್ಗವನ್ನು ನಿಗದಿಪಡಿಸಲಾಗಿತ್ತು. ಅದು ಸಂಚಾರ ದಟ್ಟಣೆಗೆ ಅನುವು ಮಾಡಿಕೊಡುತ್ತಿರಲಿಲ್ಲ. ಆದರೆ ಅವರು ಆಮಾರ್ಗವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಅವರನ್ನು ಇಲ್ಲಿ ನಿಲ್ಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿರಲಿಲ್ಲ. ನಾವು ಗೊತ್ತುಪಡಿಸಿದ ಮಾರ್ಗವನ್ನು ತೆಗೆದುಕೊಂಡರೆ, ಅಲ್ಲಿ ಸಮಸ್ಯೆಯಾಗುವುದಿಲ್ಲ" ಎಂದು ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಪಿಯೂಷ್ ಮೊರ್ಡಿಯಾ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಶಾಸಕರು ಮತ್ತು ಎಂಎಲ್‌ಸಿಗಳು ಮೆರವಣಿಗೆಯಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಮಹಿಳೆಯರ ಮೇಲಿನ ಅಪರಾಧ ಮತ್ತು ರಾಜ್ಯದಲ್ಲಿನ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಪ್ರಸ್ತಾಪಿಸಲು ಯೋಜಿಸಿದ್ದರು. ಬಿಜೆಪಿ ಸರಕಾರ 'ಸೇಡಿನ ಮನಸ್ಥಿತಿ'ಯಿಂದ ಕೆಲಸ ಮಾಡುತ್ತಿರುವುದರಿಂದ ಸಾಮಾಜಿಕ ಸಾಮರಸ್ಯ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಮನೋಭಾವಕ್ಕೆ ವಿರುದ್ಧವಾಗಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಎಸ್‌ಪಿಯ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ದೂರಿದ್ದಾರೆ.

English summary
A massive march by Samajwadi Party president Akhilesh Yadav and his party members today, raising various issues related to the people, was stopped after the Uttar Pradesh Police stopped it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X