ಮೋದಿ ಜೊತೆ ಉನ್ನಾವೊ ಅತ್ಯಾಚಾರ ಆರೋಪಿ ಶಾಸಕನ ಜಾಹಿರಾತು
ಲಖನೌ, ಆಗಸ್ಟ್ 17: ಅತ್ಯಾಚಾರ ಮತ್ತು ಕೊಲೆ ಆರೋಪ ಹೊತ್ತಿರುವ ಶಾಸಕ, ಪ್ರಧಾನಿ ಮೋದಿ, ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರುಗಳಿರುವ ಪೂರ್ಣ ಪುಟದ ಪತ್ರಿಕೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾನೆ.
ಉನ್ನಾವೊ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ, ಶಾಸಕ ಕುಲ್ದೀಪ್ ಸಿಂಗ್ ಸೈಗರ್ ನ ಜಾಹೀರಾತೊಂದು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಪೂರ್ಣ ಪುಟದ ಈ ಜಾಹೀರಾತಿನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಇನ್ನೂ ಹಲವು ಪ್ರಮುಖರ ಚಿತ್ರಗಳಿವೆ.
ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾಬಂಧನದ ಪ್ರಯುಕ್ತವಾಗಿ ಅತ್ಯಾಚಾರ ಆರೋಪಿ ಶಾಸಕ ಕುಲ್ದೀಪ್ ಸಿಂಗ್ ಸೈಗರ್ ನೀಡಿರುವ ಜಾಹೀರಾತು ಇದಾಗಿದೆ.

ಆರೋಪಿ ಕುಲ್ದೀಪ್ ಸಿಂಗ್ ಸೈಗರ್, ಬಿಜೆಪಿ ಶಾಸಕರಾಗಿದ್ದರು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಆತನ ಹೆಸರು ಬಲವಾಗಿ ಕೇಳಿಬಂದ ನಂತರ ಆತನನ್ನು ಬಿಜೆಪಿಯು ಪಕ್ಷದಿಂದ ಉಚ್ಛಾಟಿಸಿತು. ಆದರೆ ಆತನ ಚಿತ್ರವನ್ನು ಬಿಜೆಪಿ ಪ್ರಮುಖರ ಜೊತೆ ಜಾಹೀರಾತಿನಲ್ಲಿ ಹಾಕಲಾಗಿದೆ.
ಈ ಜಾಹೀರಾತನ್ನು ಆಗಸ್ಟ್ 15 ರಂದು ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಸ್ಥಳೀಯ ಪತ್ರಿಕೆಗೆ ನೀಡಿದ್ದಾನೆ. ಅಪ್ರಾಪ್ತೆಯ ಅತ್ಯಾಚಾರ ಮತ್ತು ಆಕೆಯ ತಂದೆಯ ಕೊಲೆ ಪ್ರಕರಣದಲ್ಲಿ ಕುಲ್ದೀಪ್ ಸಿಂಗ್ ಸೈಗರ್ ಆರೋಪಿ ಆಗಿದ್ದಾನೆ.
ಜಾಹೀರಾತು ಪ್ರಕಟಿಸಿದ್ದನ್ನು ಸಮರ್ಥಿಸಿಕೊಂಡಿರುವ ಪತ್ರಿಕೆ ಸಂಪಾದಕ, 'ಕುಲ್ದೀಪ್ ಸಿಂಗ್ ಸೈಗರ್ ಆರೋಪಿ ಅಷ್ಟೆ ಅಪರಾಧಿ ಅಲ್ಲ. ಲಾಲೂ ಪ್ರಸಾದ್ ಯಾಧವ್ ಅಪರಾಧಿ ಎಂದು ಸಾಬೀತಾಗಿದ್ದರೂ ಅವರ ಜಾಹೀರಾತುಗಳು ಪ್ರಕಟವಾಗುತ್ತವೆ ಅವರನ್ನು ಏಕೆ ಪ್ರಶ್ನೆ ಮಾಡುವುದಿಲ್ಲ' ಎಂದು ಮರುಪ್ರಶ್ನೆ ಮಾಡಿದ್ದಾರೆ.












Click it and Unblock the Notifications