ಉನ್ನಾವ್: ಮಹಿಳೆಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ ಪೊಲೀಸ್ ಪೇದೆ ಬಂಧನ
ಉನ್ನಾವೋ ಆಗಸ್ಟ್ 24: ಉತ್ತರಪ್ರದೇಶದ ಉನ್ನಾವೋದಲ್ಲಿ ಮಹಿಳೆಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಮಹಿಳೆಯೊಂದಿಗೆ ಅಶ್ಲೀಲ ಕೃತ್ಯ ಎಸಗಿರುವ ಪೊಲೀಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಿಕ ಆತನನ್ನು ಅಮಾನತು ಮಾಡಲಾಗಿತ್ತು. ವೈರಲ್ ಆದ ವಿಡಿಯೋವನ್ನು ಎಸ್‌ಪಿ ತನಿಖೆಗೆ ಒಳಪಡಿಸಿದ್ದಾರೆ.
ಇದಾದ ಬಳಿಕ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುಖ್ಯ ಪೇದೆಯನ್ನು ಬಂಧಿಸಲಾಗಿದೆ. ಪೊಲೀಸರಿಗೆ ಸೂಚನೆ ನೀಡಿದ ಐಜಿ, ಯಾವುದೇ ಪೊಲೀಸರಿಂದ ಇಂತಹ ಕೃತ್ಯವನ್ನು ಸಹಿಸುವುದಿಲ್ಲ. ಘಟನೆಯ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಐಜಿ ಲಕ್ಷ್ಮಿ ಸಿಂಗ್, 'ಉನ್ನಾವೋದ ಬಂಗಾರ್‌ಮೌ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಮಹಿಳೆಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ಕಂಡುಬಂದ ವಿಡಿಯೋ ವೈರಲ್ ಆಗಿದೆ. ವಿಡಿಯೋ ಗಮನಕ್ಕೆ ಬಂದ ತಕ್ಷಣ ಮುಖ್ಯ ಪೇದೆಯನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ. ಆ ನಂತರ ಎಸ್ಪಿ ವೈರಲ್ ವಿಡಿಯೋವನ್ನು ತನಿಖೆಗೆ ಪಡೆದರು. ವೈರಲ್ ಆಗಿರುವ ವಿಡಿಯೋವನ್ನು ತನಿಖೆಗೆ ಒಳಪಡಿಸಿದಾಗ, ಗಂಗಾಘಾಟ್ ಕೊತ್ವಾಲಿಯ ಮುಖ್ಯ ಪೇದೆ ಸಮವಸ್ತ್ರದಲ್ಲಿರುವ ಸಮಯದಲ್ಲಿ ವೈರಲ್ ವಿಡಿಯೊ ಕಂಡುಬಂದಿದೆ. ಇದರ ಬಗ್ಗೆ ತನಿಖೆ ನಡೆಸಲಾಗಿದೆ' ಎಂದು ಹೇಳಿದರು.

ಐಜಿ ಲಕ್ಷ್ಮಿ ಸಿಂಗ್ ಕ್ರಮದ ಭರವಸೆ
ಸಂತ್ರಸ್ತೆ ಕೆಲವು ದೂರು ನೀಡಲು ಹೋದಾಗ ಮುಖ್ಯ ಪೇದೆಯೊಂದಿಗೆ ಸಂಪರ್ಕಕ್ಕೆ ಬಂದರು. ನಂತರ ಮುಖ್ಯ ಕಾನ್‌ಸ್ಟೆಬಲ್ ಮಹಿಳೆಯನ್ನು ದೈಹಿಕವಾಗಿ ಶೋಷಿಸಲು ಪ್ರಯತ್ನಿಸಿತ್ತಾರೆ. ವೈರಲ್ ವಿಡಿಯೋದ ಆಧಾರದ ಮೇಲೆ ದೂರು ತೆಗೆದುಕೊಂಡು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಐಜಿ ಲಕ್ಷ್ಮಿ ಸಿಂಗ್ ಹೇಳಿದ್ದಾರೆ. ಮುಖ್ಯ ಪೇದೆಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಐಜಿ ಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಬಂಗಾರ್‌ಮೌ ಕೊತ್ವಾಲಿಯಲ್ಲಿ ಸಮವಸ್ತ್ರದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಮಹಿಳೆಯೊಂದಿಗೆ ಇದ್ದ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಹೊರಬಿದ್ದ ಬಳಿಕ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ. ಅಶ್ಲೀಲ ವಿಡಿಯೊದಲ್ಲಿ ಕಂಡುಬಂದಿದ್ದು ಬಂಗಾರ್‌ಮೌ ಕೊಟ್ವಾಲಿಯ ಮುಖ್ಯ ಕಾನ್‌ಸ್ಟೆಬಲ್ ದೀಪ್ ಸಿಂಗ್. ಕಾನ್‌ಸ್ಟೆಬಲ್ ದೀಪ್ ಸಿಂಗ್ ಸಮವಸ್ತ್ರದಲ್ಲಿದ್ದು, ಕೊಠಡಿಯೊಂದರಲ್ಲಿ ಸೀರೆ ಉಟ್ಟ ಮಹಿಳೆಯೊಂದಿಗೆ ಅಶ್ಲೀಲ ಕೃತ್ಯಗಳನ್ನು ನಡೆಸುತ್ತಿರುವುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯನ್ನು ಚುಂಬಿಸುತ್ತಾನೆ. ಜೊತೆಗೆ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಾನೆ. ಕಾನ್‌ಸ್ಟೆಬಲ್‌ನ ಈ ಅಶ್ಲೀಲ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪತ್ನಿಯೊಂದಿಗೆ ಹೆಡ್ ಕಾನ್‌ಸ್ಟೆಬಲ್ ವಿಡಿಯೋ ಮಾಡಿದ ಪತಿ
ಪತಿ-ಪತ್ನಿಯರ ನಡುವಿನ ಜಗಳ ಬಿಡಿಸುವ ವಿಚಾರವಾಗಿ ವೈರಲ್ ವಿಡಿಯೋದಲ್ಲಿ ಕಂಡುಬಂದ ಮಹಿಳೆಯ ಸಂಪರ್ಕಕ್ಕೆ ದೀಪ್ ಸಿಂಗ್ ಬಂದಿದ್ದರು. ಇದಾದ ಬಳಿಕ ಪೋಲೀಸಪ್ಪ ಪತಿ ಇಲ್ಲದ ಹಿನ್ನೆಲೆಯಲ್ಲಿ ಮಹಿಳೆಯ ಮನೆಗೆ ತೆರಳಿ ಆಕೆಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದಾನೆ. ಮುಖ್ಯ ಪೇದೆಯ ಸತ್ಯಾಸತ್ಯತೆ ಬೆಳಕಿಗೆ ಬಂದಾಗ ಮಹಿಳೆಯ ಪತಿ, ಕಾರ್ ಗ್ಯಾರೇಜ್ ನಿರ್ವಾಹಕರ ಸಹಾಯದಿಂದ ಅಸಭ್ಯ ಸ್ಥಿತಿಯಲ್ಲಿ ತನ್ನ ಪತ್ನಿಯೊಂದಿಗೆ ಕಾನ್‌ಸ್ಟೆಬಲ್ ಇರುವುದನ್ನು ವಿಡಿಯೋ ಮಾಡಿದ್ದಾನೆ.

ಕಾನ್‌ಸ್ಟೆಬಲ್‌ನಿಂದ ಹಣ ಪೀಕುತ್ತಿದ್ದ ಯುವಕರು
ಸುಮಾರು ಮೂರು ವರ್ಷಗಳಿಂದ ವಿಡಿಯೋ ಮಾಡಿದ ಯುವಕರು ಮುಖ್ಯ ಪೇದೆಯನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕಾನ್‌ಸ್ಟೆಬಲ್ ಬಳಿ ಯುವಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ತನ್ನ ಬಳಿ ಹಣವಿಲ್ಲ ಎಂದು ದೀಪ್ ಸಿಂಗ್ ಹೇಳಿದ್ದಾನೆ. ಹಣದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾನ್‌ಸ್ಟೆಬಲ್ ಮಹಿಳೆಯೊಂದಿಗೆ ಇರುವ ಆಕ್ಷೇಪಾರ್ಹ ವಿಡಿಯೋ ವೈರಲ್ ಮಾಡಲಾಗಿದೆ.












Click it and Unblock the Notifications