• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರ ಕುಟುಂಬಕ್ಕಲ್ಲ, ಬಡವರಿಗೆ ಎಂಬುದು ಬಿಜೆಪಿಯಿಂದ ಸಾಬೀತು: ಅಮಿತ್‌ ಶಾ

|
Google Oneindia Kannada News

ಲಕ್ನೋ, ಅಕ್ಟೋಬರ್‌ 29: ಭಾರತೀಯ ಜನತಾ ಪಕ್ಷ ವಿರೋಧ ಪಕ್ಷದಂತೆ ಅಲ್ಲ, ಬಿಜೆಪಿ ಸರ್ಕಾರ ಬಡವರಿಗಿಂತ ಅತೀ ತೊಂದರೆ ಇರುವವರಿಗಾಗಿಗೂ ಕೆಲಸ ಮಾಡುತ್ತಿದೆ ಎಂದು ಈಗಾಗಲೇ ಸಾಬೀತು ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

'ಮೇರಾ ಪರಿವಾರ್‌-ಬಿಜೆಪಿ ಪರಿವಾರ್‌' (ನನ್ನ ಪರಿವಾರ ಬಿಜೆಪಿ ಪರಿವಾರ) ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, "ಉತ್ತರ ಪ್ರದೇಶವು ತನ್ನ ಗುರುತನ್ನು ಮತ್ತೆ ಮರಳಿ ಪಡೆಯುವಲ್ಲಿ ಬಿಜೆಪಿಯು ಸಫಲವಾಗಿ ಕಾರ್ಯ ನಿರ್ವಹಿಸಿದೆ.. ಉತ್ತರ ಪ್ರದೇಶ ರಾಜ್ಯವನ್ನು ದೇಶದ ಪ್ರಮುಖ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷವು ಸಾಕಷ್ಟು ಕೆಲಸವನ್ನು ಮಾಡಿದೆ. ಸರ್ಕಾರವು ಒಂದು ಕುಟುಂಬಕ್ಕಾಗಿ ಇರುವುದು ಅಲ್ಲ, ಅದು ಬಡವರಿಗಿಂತ ಅತೀ ಬಡವರಿಗಾಗಿ ಎಂಬುವುದನ್ನು ಬಿಜೆಪಿ ಸರ್ಕಾರ ಸಾಬೀತು ಮಾಡಿದೆ," ಎಂದು ತಿಳಿಸಿದರು.

'ಅನಕ್ಷರಸ್ಥರ ಸೈನ್ಯದಿಂದ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದದು': ಅಮಿತ್ ಶಾ'ಅನಕ್ಷರಸ್ಥರ ಸೈನ್ಯದಿಂದ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದದು': ಅಮಿತ್ ಶಾ

"ಕಳೆದ ಐದು ವರ್ಷಗಳಿಂದ ತಮ್ಮ ಮನೆಗಳಲ್ಲಿ ಕುಳಿತಿದ್ದ ಜನರು ತಮ್ಮ ಸರ್ಕಾರ ರಚನೆ ಆಗುತ್ತದೆ ಎಂದು ಯೋಚಿಸಿಕೊಂಡು ಹೊರ ಬಂದಿದ್ದಾರೆ. ಈ ಸಂದರ್ಭದಲ್ಲಿ ಎಷ್ಟು ಸಮಯಗಳ ಕಾಲ ವಿದೇಶದಲ್ಲೇ ಇದ್ದರೂ ಎಂದು ನಾನು ಈ ಸಂದರ್ಭದಲ್ಲಿ ಅಖಿಲೇಶ್‌ ಯಾದವ್‌ರನ್ನು ಪ್ರಶ್ನಿಸಲು ಬಯಸುತ್ತೇನೆ. ಕೋವಿಡ್‌, ನೆರೆ ಸಂದರ್ಭದಲ್ಲಿ ಅಖಿಲೇಶ್‌ ಯಾದವ್‌ ಎಲ್ಲಿದ್ದರು. ಅವರು ಆ ಸಂದರ್ಭದಲ್ಲಿ ಬರೀ ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡಿದ್ದಾರೆ," ಎಂದು ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ''ಮೇರಾ ಪರಿವಾರ-ಬಿಜೆಪಿ ಪರಿವಾರ'' ಸದಸ್ಯತ್ವ ಅಭಿಯಾನ ಆರಂಭವಾಗಿದೆ ಎಂದು ಕೂಡಾ ಈ ಸಂದರ್ಭದಲ್ಲಿ ಅಮಿತ್‌ ಶಾ ಘೋಷಣೆ ಮಾಡಿದ್ದಾರೆ. ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, "ಬಿಜೆಪಿ ಕಾರ್ಯಕರ್ತರು ಗಲಭೆಗಳ ವಿರುದ್ಧ ಕೆಲಸ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯು ಗೆಲುವು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ," ಎಂದು ತಮ್ಮ ಕಾರ್ಯಕರ್ತರನ್ನು ಶ್ಲಾಘಿಸಿದರು.

ಶಾ, ಮೋದಿಯನ್ನು ಹೊಗಳಿದ್ದ ಯೋಗಿ

"ಬಿಜೆಪಿ ಕಾರ್ಯಕರ್ತರುಗಳ ಗಲಭೆಗಳ ವಿರುದ್ಧವಾಗಿ ಹೋರಾಡಿದ್ದಾರೆ. ಹಲವಾರು ಸವಾಲುಗಳನ್ನು ಎದುರಿಸಿ ಕೇಂದ್ರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ತಮ್ಮ ಸರ್ಕಾರವನ್ನು ರಚನೆ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾರ ನಾಯಕತ್ವದಲ್ಲಿ ಉತ್ತರ ಪ್ರದೇಶದಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿರುವ ನಿಟ್ಟಿನಲ್ಲಿ ಎಲ್ಲರೂ ಹೆಮ್ಮೆ ಪಟ್ಟಿದ್ದಾರೆ. ಈ ವರ್ಷ ಅಯೋಧ್ಯೆಯ ದೀಪಾವಳಿ ಸಂದರ್ಭದಲ್ಲಿ ದೀಪೋತ್ಸವವನ್ನು ವಿಶ್ವವೇ ನೋಡಲಿದೆ," ಎಂದು ವಿವರಿಸಿದರು..

'ವೈದ್ಯಕೀಯ ಅಧ್ಯಯನಕ್ಕಾಗಿ ಇನ್ನು ಪಾಕ್‌ಗೆ ಹೋಗಬೇಕಾಗಿಲ್ಲ': ಕಾಶ್ಮೀರದ ಯುವಕರಿಗೆ ಶಾ'ವೈದ್ಯಕೀಯ ಅಧ್ಯಯನಕ್ಕಾಗಿ ಇನ್ನು ಪಾಕ್‌ಗೆ ಹೋಗಬೇಕಾಗಿಲ್ಲ': ಕಾಶ್ಮೀರದ ಯುವಕರಿಗೆ ಶಾ

ಇನ್ನು ಅಮಿತ್‌ ಶಾ ಡೆಲೆವರಿ ಡೆಮಾಕ್ರಸಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಪರಾಮರ್ಶೆ ಎಂಬ ಬಗ್ಗೆ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಗುರುವಾರ ಮಾತನಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದರು. "ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆರಂಭ ಮಾಡಿದ ಈ 'ಬೇಟಿ ಬಚಾವೋ, ಬೇಟಿ ಪಡಾವೋ' ಕಾರ್ಯಕ್ರಮದಿಂದಾಗಿ ಶಾಲೆಯಲ್ಲಿ ಶೇಕಡ 100 ರಷ್ಟು ದಾಖಲಾತಿ ಆರಂಭವಾಯಿತು. ಶಾಲೆಯನ್ನು ಅರ್ಧಕ್ಕೆ ಬಿಡುವ ವಿದ್ಯಾರ್ಥಿನಿಯರ ಸಂಖ್ಯೆಯು ಶೂನ್ಯಕ್ಕೆ ಬರುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು," ಎಂದಿದ್ದರು.

ಉತ್ತರ ಪ್ರದೇಶದಲ್ಲಿ 2022 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಲೇ ಉತ್ತರ ಪ್ರದೇಶದಲ್ಲಿ ಚುನಾವಣಾ ಕಾರ್ಯವನ್ನು ಎಲ್ಲಾ ಪಕ್ಷಗಳು ಮಾಡುತ್ತಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 403 ವಿಧಾನಸಭೆ ಕ್ಷೇತ್ರಗಳ ಪೈಕಿ 312 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಶೇಕಡ 39.67 ರಷ್ಟು ಮತವನ್ನು ಬಿಜೆಪಿ ಪಡೆದುಕೊಂಡಿತ್ತು. ಸಮಾಜವಾದಿ ಪಕ್ಷವು (ಎಸ್‌ಪಿ) 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಎಸ್‌ಪಿ 19, ಕಾಂಗ್ರೆಸ್‌ ಏಳು ಕ್ಷೇತ್ರದಲ್ಲಿ ಜಯ ಗಳಿಸಿತ್ತು.

(ಒನ್‌ಇಂಡಿಯಾ ಸುದ್ದಿ)

English summary
Unlike Opposition, BJP Government Works For Poorest Of Poor said Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X