Get Updates
Get notified of breaking news, exclusive insights, and must-see stories!

ಕೋವಿಡ್ 19: ಉತ್ತರ ಪ್ರದೇಶದಲ್ಲಿ 2 ಕಪ್ಪಾ ರೂಪಾಂತರಿ ಪತ್ತೆ

ಲಕ್ನೋ, ಜುಲೈ 09: ಉತ್ತರ ಪ್ರದೇಶದಲ್ಲಿ ಎರಡು ಕಪ್ಪಾ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಲಕ್ನೋನ ಕೆಜಿಎಂಯು ಆಸ್ಪತ್ರೆಗೆ ಒಟ್ಟು 109 ಮಾದರಿಗಳನ್ನು ನೀಡಲಾಗಿತ್ತು, ಅದರಲ್ಲಿ 107 ಡೆಲ್ಟಾ ರೂಪಾಂತರಿ ಪ್ರಕರಣಗಳಾಗಿದ್ದು, ಎರಡು ಕಪ್ಪಾ ಪ್ರಕರಣಗಳಿವೆ.

ಈ ಎರಡು ರೂಪಾಂತರಿಗಳು ರಾಜ್ಯಕ್ಕೆ ಹೊಸದಾಗಿದ್ದು, ಆತಂಕ ಹೆಚ್ಚಿಸಿದ್ದು, ನಿತ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೈದ್ಯರ ಜತೆ ಸಭೆ ನಡೆಸುತ್ತಿದ್ದಾರೆ.

"ಈ ರೂಪಾಂತರಿ ಕುರಿತು ಭಯ ಪಡುವುದು ಬೇಡ ಚಿಕಿತ್ಸೆ ಲಭ್ಯವಿದೆ'' ಎಂದು ಆರೋಗ್ಯ ಹೆಚ್ಚುವರಿ ಕಾರ್ಯದರ್ಶಿ ಮೋಹನ್ ಪ್ರಸಾದ್ ತಿಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 22,676ಕ್ಕೆ ಏರಿದೆ, ಒಟ್ಟು 17,07,044 ಪ್ರಕರಣಗಳಿವೆ.

Two Cases Of Kappa Covid Variant Detected In Uttar Pradesh

ಭಾರತದಲ್ಲಿ ಕಂಡುಬಂದ 2 ಸೋಂಕಿಗೆ ಡೆಲ್ಟಾ ಹಾಗೂ ಕಪ್ಪಾ ಎಂದು ಹೆಸರಿಡಲಾಗಿದೆ. ಇನ್ಮುಂದೆ ಭಾರತದ ಸೋಂಕು, ಬ್ರಿಟನ್​ ಸೋಂಕು, ಆಫ್ರಿಕಾ ಸೋಂಕು ಎಂದು ದೇಶಗಳನ್ನು ಉಲ್ಲೇಖಿಸಿ ರೂಪಾಂತರಿ ಸೋಂಕನ್ನು ಗುರುತಿಸುವಂತಿಲ್ಲ. ವೈದ್ಯಕೀಯ ಭಾಷೆಯಲ್ಲಿ ರೂಪಾಂತರಿ ಸೋಂಕನ್ನು ಹೆಸರಿಸಬೇಕು.

ಭಾರತದಲ್ಲಿ ಮೊದಲು ಕಾಣಿಸಿಕೊಂಡ B.1.617.1 ಸೋಂಕಿಗೆ ಕಪ್ಪಾ ಎಂದು, ನಂತರ ಕಾಣಿಸಿಕೊಂಡ B1.617.2 ವೈರಸನ್ನು ಡೆಲ್ಟಾ ಎಂದು ನಾಮಕರಣ ಮಾಡಲಾಗಿದೆ. ಎರಡೂ ಮಾದರಿಯ ವೈರಸ್​​ 2020ರ ಅಕ್ಟೋಬರ್​ನಲ್ಲಿ ಭಾರತದಲ್ಲಿ ಪತ್ತೆಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​​-19 ಟೆಕ್ನಿಕಲ್​​ ಮುಖ್ಯಸ್ಥರಾದ ಡಾ.ಮಾರಿಯಾ ವೆನ್​ ಕೆರಕೋವ ಹೆಸರುಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ದೇಶಗಳ ಹೆಸರನ್ನು ಬಳಸದೆ ಇನ್ಮುಂದೆ ವೈದ್ಯಕೀಯ ಹೆಸರುಗಳ ಮೂಲಕವೇ ರೂಪಾಂತರಿ ವೈರಸನ್ನು ಗುರುತಿಸಲಾಗುವುದು.

ಸೋಂಕು ಪತ್ತೆ, ಚಿಕಿತ್ಸೆ, ಅಧ್ಯಯನ ಎಲ್ಲವೂ ಇನ್ಮುಂದೆ ಗ್ರೀಕ್​​​ ಅಕ್ಷರಗಳುಳ್ಳ ಹೆಸರುಗಳ ಮೂಲಕವೇ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬೇರೆ ದೇಶಗಳಲ್ಲಿ ರೂಪಾಂತರಗೊಂಡಿರುವ ವೈರಸ್​ಗೆ ಆಲ್ಫಾ, ಬೀಟಾ, ಗಮಾ ಸೇರಿದಂತೆ ಹಲವು ಗ್ರೀಕ್​ ಅಕ್ಷರಗಳನ್ನು ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+