ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನನ್ನು ಎತ್ತಿಕೊಂಡೇ ಡ್ಯೂಟಿಗೆ ಹಾಜರ್: ಕಾನ್ಸ್ ಟೇಬಲ್ ನಿಷ್ಟೆಗೆ ಸೆಲ್ಯೂಟ್

|
Google Oneindia Kannada News

ಲಕ್ನೋ, ಮಾರ್ಚ್ 3: ದೊಡ್ಡದೊಂದು ಕಾರ್ಯಕ್ರಮ, ನೂರಾರೂ ಸಂಖ್ಯೆಯ ಜನರು, ವೇದಿಕೆ ಮೇಲೆ ಗಣ್ಯರು ಇವುಗಳ ನಡುವೆ ಮಗುವನ್ನು ಎತ್ತಿಕೊಂಡ ಒಬ್ಬ ಮಹಿಳಾ ಕಾನ್ಸ್ ಟೇಬಲ್. ಈ ದೃಶ್ಯ ಕಾಣಿಸಿದ್ದು, ನೋಯ್ಡಾದ ಕಾರ್ಯಕ್ರಮದಲ್ಲಿ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕಾಗಿ ನಿಯೋಜಿಸಿದ್ದ ಪೊಲೀಸರ ಪೈಕಿ ಪ್ರೀತಿ ರಾಣಿ ಎಂಬ ಮಹಿಳಾ ಕಾನ್ಸ್ ಟೇಬಲ್ ಸಹ ಒಬ್ಬರಾಗಿದ್ದರು.

ತೆಲಂಗಾಣ ಪೊಲೀಸರ ''ನಾಗೀನ್ ಡ್ಯಾನ್'' ವಿಡಿಯೋ ವೈರಲ್ತೆಲಂಗಾಣ ಪೊಲೀಸರ ''ನಾಗೀನ್ ಡ್ಯಾನ್'' ವಿಡಿಯೋ ವೈರಲ್

ಪ್ರೀತಿ ರಾಣಿ ತಮ್ಮ ಕರ್ತವ್ಯ ನಿಷ್ಟೆಯ ಮೂಲಕ ಕಾರ್ಯಕ್ರಮಕ್ಕೆ ಬಂದವರ ಗಮನ ಸೆಳೆದರು. ತಮ್ಮ ಮಗನನ್ನು ಎತ್ತಿಕೊಂಡೆ, ಕೆಲಸ ನಿರ್ವಹಿಸಿದರು. ಒಂದೂವರೆ ವರ್ಷದ ಮಗನನ್ನು ನೋಡಿಕೊಳ್ಳುತ್ತಲೆ ಕಾರ್ಯಕ್ರಮದಲ್ಲಿ ತಮ್ಮ ಕೆಲಸ ಮಾಡುತ್ತಿದ್ದರು.

Uttara Pradesha Lady Constable Carries Her Son In Arms At Yogi Adityanath Program

ತಮ್ಮ ಪತಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೋದ ಕಾರಣ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಹೀಗಾಗಿ ಮಗನನ್ನು ನಾನೇ ಕರೆದುಕೊಂಡು ಬಂದೆ ಎಂದು ಪ್ರೀತಿ ರಾಣಿ ಹೇಳಿದ್ದಾರೆ.

ಲಕ್ನೋ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕ ಆತ್ಮಹತ್ಯೆಲಕ್ನೋ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕ ಆತ್ಮಹತ್ಯೆ

ತಾಯಿಯಾಗಿ ಮಗನ ಆರೈಕೆ, ಕಾನ್ಸ್ ಟೇಬಲ್ ಆಗಿ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಪ್ರೀತಿ ರಾಣಿ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

English summary
Uttara pradesha lady constable carries her son in arms at CM Yogi Adityanath program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X