B-Khata: ಬೆಂಗಳೂರು ಬಿ ಖಾತಾ ಆಸ್ತಿದಾರರಿಗೆ ಬಂಪರ್ ರಿಯಾಯಿತಿ ಕೊಟ್ಟು ಕೈ ಸುಟ್ಟುಕೊಂಡ ಜಿಬಿಎ
B-Khata: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವು ಬಿ ಖಾತಾ ಆಸ್ತಿದಾರರಿಗೆ ಬಂಪರ್ ಗುಡ್‌ನ್ಯೂಸ್ ಕೊಟ್ಟಿದೆ. ಆದರೆ ಇದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಲಿದೆ. ಮುಂದಿನ ದಿನಗಳಲ್ಲಿ ಬಿ ಖಾತಾ ಮಾಡಿಸಿಕೊಳ್ಳದೆ ಇರುವವರು, ಮುಂದೆ ಬಿ ಖಾತಾ ಮಾಡಿಸಿಕೊಳ್ಳಲು ಮತ್ತೆ ಶೇ 5% ಆಸ್ತಿಯ ಮೇಲಿನ ಗೈಡ್‌ಲೈನ್ಸ್ ವ್ಯಾಲ್ಯೂ ಪಾವತಿ ಮಾಡಬೇಕಾಗುತ್ತದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ. ಅಕ್ಟೋಬರ್ 15, 2025 ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮೊದಲು ಬಿ ಖಾತಾದಿಂದ ಎ ಖಾತಾ ಅಭಿಯಾನವನ್ನು ಸರ್ಕಾರ ಪ್ರಾರಂಭಿಸಿತು. ಆದರೆ, ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳುವುದಕ್ಕೆ ಕೇವಲ 949 ಆಸ್ತಿದಾರರು ಮಾತ್ರ ಮುಂದೆ ಬಂದಿದ್ದರು.
ಇದೀಗ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮೇ 13 ರಂದು ಬಿ-ಖಾತಾದಿಂದ ಎ-ಖಾತಾ ಆಸ್ತಿ ಪರಿವರ್ತಿಸಲು ಶುಲ್ಕದಲ್ಲಿ 60% ರಿಯಾಯಿತಿ ಘೋಷಿಸಿದ್ದಾರೆ. ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆ ಮಾಡುವುದಕ್ಕೆ ರಿಯಾಯಿತಿ ಘೋಷಿಸಿದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಮಂಡಿಸಲಾಗಿದ್ದ ಬಜೆಟ್‌ನ ಮೇಲೆ ಭಾರೀ ಪರಿಣಾಮ ಬೀರಿದೆ.

ಬೆಂಗಳೂರು ಗ್ರೇಟರ್ ಪ್ರಾಧಿಕಾರದ ಐದು ಪಾಲಿಕೆಗಳು ಈಗಾಗಲೇ ಆರ್ಥಿಕ ನಷ್ಟದ ಅಂಚಿನಲ್ಲಿವೆ. ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆಯಿಂದ ಕೋಟ್ಯಾಂತರ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಬೆಂಗಳೂರಿನ ಆಡಳಿತಕ್ಕೆ ಪ್ರಮುಖ ಆದಾಯವೇ ಆಸ್ತಿಯಿಂದ ಬರುವ ಆದಾಯವಾಗಿದೆ. ಒಂದು ಆಸ್ತಿ ತೆರಿಗೆ ಸಂಗ್ರಹದಿಂದ ಹಾಗೂ ಮತ್ತೊಂದು ಆಸ್ತಿಯ ಹೆಚ್ಚುವರಿ ಶುಲ್ಕದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 5 ಸಾವಿರ ಕೋಟಿಯಿಂದ 6 ಸಾವಿರ ಕೋಟಿ ರೂ. ಆದಾಯ ಬರುತ್ತದೆ.
ಈ ಹಿಂದೆ ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆಗೆ ಶೇ 5%ರಷ್ಟು ಆಸ್ತಿ ಮೌಲ್ಯದ ಶುಲ್ಕ ಪಾವತಿ ಮಾಡಬೇಕು ಎಂದು ನಿಗದಿ ಮಾಡಲಾಗಿತ್ತು. ಆದರೆ ಯೋಜನೆಯಲ್ಲಿ ಆಸ್ತಿದಾರರು ಆಸ್ತಿದಾರರು ಆಸಕ್ತಿ ತೋರಿಸದೆ ಹಿನ್ನೆಲೆಯಲ್ಲಿ ಖಾತಾ ಪರಿವರ್ತನೆಗೆ ಪ್ರಾಪರ್ಟಿ ಗೈಡ್‌ಲೈನ್ಸ್ ವ್ಯಾಲ್ಯೂ ಮೊತ್ತವನ್ನು ಶೇ 2%ಕ್ಕೆ ಇಳಿಸಲಾಗಿದೆ.
B-Khata: ಬಜೆಟ್ ಲೆಕ್ಕಾಚಾರ ತಲೆಕೆಳಗೆ
ಅಕ್ಟೋಬರ್ 15, 2025 ರಂದು ಗ್ರೇಟರ್ ಬೆಂಗಳೂರು ಪ್ರದೇಶದ(ಜಿಬಿಎ) ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಪರಿಚಯಿಸಿದಾಗಿನಿಂದಲೂ ಕೇವಲ 949 ಆಸ್ತಿದಾರರು ಮಾತ್ರ ಬಿ ಖಾತಾಗಳನ್ನು ಎ-ಖಾತಾಗಳಾಗಿ ಪರಿವರ್ತಿಸಲಾಗಿದೆ. ಇದರಿಂದ ಖಾತಾ ಪರಿವರ್ತನೆಯಲ್ಲಿ 52.35 ಕೋಟಿ ರೂ. ಆದಾಯವನ್ನು ಸಂಗ್ರಹಿಸಲಾಗಿದೆ. ನಗರದಲ್ಲಿ ಅಂದಾಜು 7 ಲಕ್ಷ ಬಿ- ಖಾತಾ ಆಸ್ತಿಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಒಟ್ಟು 11,916 ಅರ್ಜಿಗಳನ್ನು ಸ್ವೀಕರಿಸಿದೆ.
ಐದು ಪಾಲಿಕೆಗಳು 2026-27ರಲ್ಲಿ ಆಸ್ತಿ ಖಾತಾ ಪರಿವರ್ತನೆಯಿಂದ 1700.5 ಕೋಟಿ ಆದಾಯವನ್ನು ಅಂದಾಜಿಸಲಾಗಿದೆ. ಎಲ್ಲಾ ಆಸ್ತಿಗಳಿಗೆ ಇದೀಗ ಶೇ 60% ರಿಯಾಯಿತಿಯನ್ನು ಅನ್ವಯಿಸಿದರೆ, ಮೊತ್ತವು 680.5 ಕೋಟಿ ರೂ.ಗೆ ಇಳಿಯುತ್ತದೆ. ಬೆಂಗಳೂರು ನಗರ ಉತ್ತರ ಪಾಲಿಕೆಯು ಬಜೆಟ್‌ನಲ್ಲಿ ಖಾತಾ ಪರಿವರ್ತನೆ ಯೋಜನೆಯಿಂದ 680 ಕೋಟಿ ರೂ. ಆದಾಯವನ್ನು ಸಂಗ್ರಹಿಸುವ ನಿರೀಕ್ಷೆ ಇತ್ತು. ಇದೇ ಮಾದರಿಯಲ್ಲಿ ವಿವಿಧ ಪಾಲಿಕೆಗಳು ಸಹ ಬಿ ಖಾತಾದಿಂದ ಎ ಖಾತಾ ಪರಿವರ್ತನೆಯಿಂದ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹಿಸುವ ಲೆಕ್ಕಾಚಾರ ಹಾಕಿದ್ದವು. ಆದರೆ ಆ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿದೆ.













Click it and Unblock the Notifications