ನಿಮ್ಮ ಮನೆಗೆ ಬಾಂಬ್ ಇಡ್ತೀವಿ ಹುಷಾರ್: ಬಿಜೆಪಿ ಸಂಸದರಿಗೆ ಆವಾಜ್!
ಲಕ್ನೋ, ಆಗಸ್ಟ್.11: ಜೀವ ಬೆದರಿಕೆ ಹಾಗೂ ಮನೆಗೆ ಬಾಂಬ್ ಇರಿಸುವ ಕುರಿತು ಬೆದರಿಕೆ ಕರೆ ಬಂದಿದೆ ಎಂದು ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸೋಮವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಉನ್ನಾವೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಸಂಬಂಧ ದೂರು ನೀಡಲಾಗಿದೆ. ಪಾಕಿಸ್ತಾನದ 923151225989 ಎಂಬ ದೂರವಾಣಿ ಸಂಖ್ಯೆಯಿಂದ ಎರಡು ಬಾರಿ ಬೆದರಿಕೆ ಕರೆ ಬಂದಿದೆ. ಫೋನ್ ನಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಯು ತಮಗೆ ಜೀವ ಬೆದರಿಕೆ ಹಾಕಿದ್ದು ಅಲ್ಲದೇ ಸಂಸದರ ಮನೆಗೆ ಬಾಂಬ್ ಇರಿಸುವುದಾಗಿ ಆವಾಜ್ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
"ನನ್ನ ಸ್ನೇಹಿತ ಮೊಹಮ್ಮದ್ ಗಫಾರ್ ನನ್ನು ಪೊಲೀಸರು ಬಂಧಿಸಲು ಸಹಾಯ ಮಾಡುವ ಮೂಲಕ ನಿನ್ನ ಸಾವನ್ನು ನೀವೇ ಸ್ವಾಗತಿಸಿಕೊಂಡಿದ್ದೀಯ" ಎಂದು ಅಪರಿಚಿತ ವ್ಯಕ್ತಿಯು ಫೋನ್ ನಲ್ಲಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಇನ್ನು 10 ದಿನಗಳಲ್ಲೇ ಸಂಸದ ಸಾಕ್ಷಿ ಮಹಾರಾಜ್ ಮತ್ತು ಸಹದ್ಯೋಗಿಗಳನ್ನು ಹತ್ಯೆಗಯ್ಯುವುದಾಗಿ ಬೆದರಿಸಲಾಗಿದೆ.

ಸಾಕ್ಷಿ ಮಹಾರಾಜ್ ಮೇಲೆ ಮುಜಾಹಿದ್ದೀನ್ ಕಣ್ಣು
ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಚಟುವಟಿಕೆಗಳ ಮೇಲೆ 24/7 ತಮ್ಮ ಮುಜಾಹಿದ್ದೀನ್ ಸಂಘಟನೆ ಕಣ್ಣು ಇರಿಸಿದೆ. ಅವಕಾಶ ಸಿಗುತ್ತಿದ್ದಂತೆ ನಿಮ್ಮನ್ನು ಕೊಂದು ಹಾಕುತ್ತೇವೆ. ಏಕೆಂದರೆ ಸಾಕ್ಷಿ ಮಹಾರಾಜ್ ಅವರ ಚಳವಳಿಯ ಬಗ್ಗೆ ತಮ್ಮ ಜನರಿಗೆ ತಿಳಿದಿದೆ ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಸಾಕ್ಷಿ ಮಹಾರಾಜರಿಗೆ ತಿಳಿಸಿದ್ದಾರೆ. ಕರೆ ಮಾಡಿದ ವ್ಯಕ್ತಿಯು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಹೆಸರಿಸಿದ್ದಾರೆ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಬಗ್ಗೆ ಸಂಸದರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಮೇಲೆ ಕಣ್ಣು
ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೂ ಜೀವ ಬೆದರಿಕೆಯನ್ನು ಅಪರಿಚಿತ ವ್ಯಕ್ತಿಯು ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೇಶದಲ್ಲಿ ಮುಸ್ಲಿಂ ಆಡಳಿತ ಜಾರಿಗೊಳಿಸುವ ಬಗ್ಗೆ ಹೇಳಿಕೆ
ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಜೀವ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯು ಭಾರತದಲ್ಲಿನ ಆಡಳಿತ ವ್ಯವಸ್ಥೆಯನ್ನೇ ಬದಲಿಸುವ ಬಗ್ಗೆ ಮಾತನಾಡಿದ್ದಾನೆ. ದೇಶದಲ್ಲಿ ಮುಸ್ಲಿಂ ಆಡಳಿತವನ್ನು ಜಾರಿಗೊಳಿಸುವುದೇ ತಮ್ಮ ಮುಖ್ಯ ಉದ್ದೇಶ ಎಂದು ವ್ಯಕ್ತಿಯು ಆವಾಜ್ ಹಾಕಿದ್ದಾನೆ ಎಂದು ಸಂಸದರು ಆರೋಪಿಸಿದ್ದಾರೆ.

ಇದೇ ಮೊದಲಲ್ಲ ಸಾಕ್ಷಿ ಮಹಾರಾಜ್ ರಿಗೆ ಜೀವ ಬೆದರಿಕೆ
ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಉಗ್ರ ಸಂಘಟನೆಗಳಿಂದ ಜೀವ ಬೆದರಿಕೆ ಹಾಕುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಸಾಕಷ್ಟು ಉಗ್ರ ಸಂಘಟನೆಗಳಿಂದ ಸಂಸದರಿಗೆ ಜೀವ ಬೆದರಿಕೆಗಳು ಬಂದಿವೆ. ಅಮೂಲಾಗ್ರ ಸಿದ್ದಾಂತವನ್ನು ನಂಬಿರುವ ಜನರು ಹಾಗೂ ಪಿಎಫ್ಐ ಸಂಘಟನೆಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ಸಂಸದ ಸಾಕ್ಷಿ ಮಹಾರಾಜ್ ದೂರಿದ್ದಾರೆ. ಈ ಹಿಂದೆ ತನಗೆ ಕುವೈತ್‌ನಿಂದ ಮೊಹಮ್ಮದ್ ಘಫರ್ ಬೆದರಿಕೆ ಹಾಕಿದ್ದ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಉತ್ತರ ಪ್ರದೇಶದ ಎಸ್‌ಟಿಎಫ್ ನಂತರ ಘಾಫರ್ ನನ್ನು ಬಿಜ್ನೋರ್ ನಲ್ಲಿ ಬಂಧಿಸಲಾಗಿತ್ತು. ಹೀಗಾಗಿ ಅವರ ಸ್ನೇಹಿತ ಈಗ ಸಂಸದರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications