ಮಾರ್ಚ್ 10ರ ನಂತರ ಬಿಸಿ ಮುಟ್ಟಿಸುವವರು ತಣ್ಣಗಾಗುತ್ತಾರೆ: ಸಿಎಂ ಯೋಗಿ

ಲಕ್ನೋ ಫೆಬ್ರವರಿ 9: ಉತ್ತರ ಪ್ರದೇಶದ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊರಾದಾಬಾದ್‌ನ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮತ್ತೊಮ್ಮೆ ಅರಾಜಕತೆಯನ್ನು ಹರಡುವವರ ವಿರುದ್ಧ ಕಳೆದ 5 ವರ್ಷಗಳಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸಲಾಗಿದೆ ಎಂದು ಬಲವಾದ ಮಾತುಗಳಲ್ಲಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ತಮ್ಮ ಮಾತಿನ ಮೂಲಕ ಮತ್ತೆ ಬಿಸಿ ತೋರಿಸುತ್ತಿದ್ದಾರೆ. ಮಾರ್ಚ್ 10ರ ನಂತರ ಮತ್ತೊಮ್ಮೆ ಬಿಜೆಪಿ ಸರಕಾರ ಬರಲಿ, ಅವರ ಬಿಸಿ ತಣಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಬರೇಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, 2012-17ರಲ್ಲಿ ಬರೇಲಿಯಲ್ಲಿ ಸುಮಾರು 8 ಗಲಭೆಗಳು ನಡೆದಿವೆ. ಯುಪಿ ಗಲಭೆಗಳೊಂದಿಗೆ ಗುರುತಿಸಲ್ಪಟ್ಟಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಬರೇಲಿಯಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ. ಇಂದು ಅದೇ ಯುಪಿಯನ್ನು ಭದ್ರತೆವಾಗಿ ನೋಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಉತ್ತರಪ್ರದೇಶ ಉತ್ತಮ ರೀತಿಯಲ್ಲಿ ಗುರುತಿಸಲ್ಪಟ್ಟಿದೆ.

ರಾಂಪುರದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಕಳೆದ 5 ವರ್ಷಗಳಲ್ಲಿ ನಾವು ಕಬ್ಬಿನ ಬೆಲೆ 1,59,000 ಕೋಟಿ ರೂ.ಗಳನ್ನು ಕಬ್ಬು ರೈತರ ಖಾತೆಗಳಿಗೆ ಪಾವತಿಸಿದ್ದೇವೆ. ಆದರೆ ಬಿಎಸ್‌ಪಿ ಮತ್ತು ಎಸ್‌ಪಿ ಸರ್ಕಾರದ ಅವಧಿಯಲ್ಲಿ ಕಬ್ಬಿಗೆ ಇಷ್ಟು ಬೆಲೆ ನೀಡಿರಲಿಲ್ಲ. ಬಿಎಸ್‌ಪಿ ಸರ್ಕಾರದ ಅವಧಿಯಲ್ಲಿ ರಾಂಪುರ ಒಂದರಲ್ಲೇ ರೈತರಿಗೆ 653 ಕೋಟಿ ಕಬ್ಬಿನ ಬೆಲೆ ನೀಡಲಾಗಿದೆ ಎಂದು ಸಿಎಂ ಹೇಳಿದರು. ಎಸ್ಪಿ ಸರ್ಕಾರದ ಅವಧಿಯಲ್ಲಿ 1,400 ಕೋಟಿ ರೂಪಾಯಿ ನೀಡಲಾಗಿದೆ. ಇದೇ ವೇಳೆ ಬಿಜೆಪಿ ಸರಕಾರದ ಅವಧಿಯಲ್ಲಿ ರಾಂಪುರ ಒಂದರಲ್ಲೇ 2,400 ಕೋಟಿ ರೂ.ಗಳ ಕಬ್ಬಿಗೆ ಪಾವತಿಯಾಗಿದೆ ಎಂದರು.

Those Who Are Showing Heat, After March 10, Will Pacify Their Heat: CM Yogi
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರದ ಅಬ್ಬರ ಅಂತ್ಯಗೊಂಡಿದೆ. ಫೆಬ್ರವರಿ 10 ರಂದು ಅಂದರೆ ನಾಳೆ ಪಶ್ಚಿಮ ಯುಪಿ ಮತ್ತು ಬ್ರಜ್ ಪ್ರದೇಶದ 11 ಜಿಲ್ಲೆಗಳ 58 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಶಾಮ್ಲಿ, ಮುಜಾಫರ್‌ನಗರ, ಬಾಗ್‌ಪತ್, ಮೀರತ್, ಗಾಜಿಯಾಬಾದ್, ಹಾಪುರ್, ಗೌತಮ್ ಬುಧ್ ನಗರ, ಬುಲಂದ್‌ಶಹರ್, ಅಲಿಗಢ, ಮಥುರಾ ಮತ್ತು ಆಗ್ರಾದಲ್ಲಿ ಮತದಾನ ನಡೆಯಲಿದೆ. ಈ ಹಂತದಲ್ಲಿ 2.27 ಕೋಟಿ ಮತದಾರರು ಒಟ್ಟು 623 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಸಮಾಜವಾದಿ ಪಕ್ಷದ ಮೇಲೆ ದಾಳಿ ಮಾಡಿದ ಅವರು, ಎಸ್‌ಪಿ ನಾಯಕರು ತಮ್ಮ ಕುಟುಂಬದ ಏಳಿಗೆಗಾಗಿ ಶ್ರಮಿಸಿದ್ದಾರೆ ಮತ್ತು ಸಾಮಾನ್ಯ ಜನರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಎಸ್ಪಿಯವರ ಪಟ್ಟಿಯನ್ನು ನೋಡಿದರೆ ಇದು ವಿನಾಶದ ಪಟ್ಟಿಯೇ ಹೊರತು ಅಭಿವೃದ್ಧಿಯಲ್ಲ ಎಂದು ಅನಿಸುತ್ತಿದೆ, ಅಪರಾಧಿಗಳು ಅಭಿವೃದ್ಧಿ ಮಾಡುವುದಿಲ್ಲ ಆದರೆ ನಾಶಪಡಿಸುತ್ತಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 'ಭದ್ರತೆ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಬಿಜೆಪಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಸಮಾಜವಾದಿ ಪಕ್ಷವು ಅಪರಾಧಿಗಳನ್ನು ತನ್ನ ಅಭ್ಯರ್ಥಿಗಳಾಗಿ ಹೆಸರಿಸುವ ಮೂಲಕ 'ವಿನಾಶದ ಪಟ್ಟಿ'ಯನ್ನು ಬಿಡುಗಡೆ ಮಾಡಿದೆ' ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.

ಅವರು (ಎಸ್‌ಪಿ) ಕೈರಾನಾವನ್ನು ಕಾಶ್ಮೀರವನ್ನಾಗಿ ಮಾಡುವ ಕನಸು ಕಾಣುತ್ತಿದ್ದರು. ಕಾಶ್ಮೀರ ಈಗ ಸ್ವರ್ಗವಾಗಿ ಬದಲಾಗುತ್ತಿದೆ ಮತ್ತು ಪಶ್ಚಿಮ ಉತ್ತರ ಪ್ರದೇಶವು ಅಭಿವೃದ್ಧಿಯಲ್ಲಿ ಹೊಸ ಅಭಿವೃದ್ಧಿಯನ್ನು ಸಾಧಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್, ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಪ್ರತಿಪಾದಿಸಿದರು. ಎಸ್ಪಿ ಆಡಳಿತದಲ್ಲಿ ಹಿಂದೂಗಳ ವಲಸೆ ಹೋದರೆಂಬ ವಿಚಾರ ಕೆಲವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದಾಗ ತಿಳಿದು ಬಂದಿದೆ ಎಂದು ಬಿಜೆಪಿ ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+