ಉ.ಪ್ರ.ದ ಈ ಕಚೋರಿ ಮಾರಾಟಗಾರನ ಆದಾಯ ವರ್ಷಕ್ಕೆ 60 ಲಕ್ಷದಿಂದ 1 ಕೋಟಿ

ಅಲೀಗಢ (ಉತ್ತರಪ್ರದೇಶ), ಜೂನ್ 25: ಉತ್ತರಪ್ರದೇಶದ ಅಲೀಗಢದಲ್ಲಿ ಕಚೋರಿ ಮಾರುವ ಸಾಮಾನ್ಯ ಮಳಿಗೆಯೊಂದರ ವ್ಯವಹಾರ ಕಂಡು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗು ಬಡಿದು ಹೋಗಿದ್ದಾರೆ. ಆ ಮಳಿಗೆಯ ಹೆಸರು ಮುಕೇಶ್ ಕಚೋರಿ. ಸೀಮಾ ಸಿನಿಮಾ ಹಾಲ್ ಹತ್ತಿರವೇ ಇರುವ ಈ ಮಳಿಗೆ ಅಂದರೆ ಸ್ಥಳೀಯರಿಗೆ ಬಲು ಅಚ್ಚುಮೆಚ್ಚು.

ಮಳಿಗೆ ಮಾಲೀಕ ಮುಕೇಶ್ ಸಮೋಸಾ, ಕಚೋರಿಯನ್ನು ಮಾರಲು ಬೆಳಗ್ಗೆ ಆರಂಭಿಸಿದರೆ, ರಾತ್ರಿಯ ತನಕ ಮಾರುತ್ತಲೇ ಇರುತ್ತಾರೆ. ಮಳಿಗೆಯ ಮುಂದಿನ ಸರತಿ ಮಾತ್ರ ಕರಗುವುದಿಲ್ಲ. ಈಚೆಗೆ ವಾಣಿಜ್ಯ ತೆರಿಗೆ ಇಲಾಖೆಯ ಬಳಿ ಮುಕೇಶ್ ಅವರ ಮಳಿಗೆ ವಿರುದ್ಧ ದೂರು ದಾಖಲಿಸುವ ತನಕ ಎಲ್ಲವೂ ಸರಿಯೇ ಇತ್ತು.

ಯಾವಾಗ ದೂರು ಬಂದಿತೋ, ಮುಕೇಶ್ ಕಚೋರಿ ಮಳಿಗೆ ಬದಿಗೆ ಮತ್ತೊಂದು ಅಂಗಡಿಯಲ್ಲಿ ಠಿಕಾಣಿ ಹೂಡಿದ ಅಧಿಕಾರಿಗಳು, ಮುಕೇಶ್ ಗೆ ಎಷ್ಟು ವ್ಯಾಪಾರ ಆಗುತ್ತಿದೆ ಎಂದು ಲೆಕ್ಕ ಇಡಲು ಆರಂಭಿಸಿದರು. ಆವರಿಗೆ ಗೊತ್ತಾಗಿದ್ದೇನೆಂದರೆ, ವಾರ್ಷಿಕವಾಗಿ ಮುಕೇಶ್ ಗಳಿಸುತ್ತಿರುವುದು 60 ಲಕ್ಷ ರುಪಾಯಿಯಿಂದ 1 ಕೋಟಿ. ಕೆಲವು ಸಲ ಅದಕ್ಕಿಂತ ಹೆಚ್ಚು.

This Kachori seller annual turnover 60 lakhs to 1 crore

ಇದೀಗ ಮುಕೇಶ್ ಗೆ ನೋಟಿಸ್ ನೀಡಲಾಗಿದೆ. ಏಕೆಂದರೆ ಆತ ಜಿಎಸ್ ಟಿ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ. ಯಾವುದೇ ತೆರಿಗೆ ಪಾವತಿ ಮಾಡುತ್ತಿರಲಿಲ್ಲ.

"ನನಗೆ ಇವ್ಯಾವೂ ಗೊತ್ತಿರಲಿಲ್ಲ. ಕಳೆದ ಹನ್ನೆರಡು ವರ್ಷದಿಂದ ಅಂಗಡಿ ನಡೆಸುತ್ತಾ ಇದ್ದೀನಿ. ಈ ಎಲ್ಲ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಯಾರೂ ನನಗೆ ಹೇಳಿಲ್ಲ. ಜೀವನಕ್ಕಾಗಿ ಕಚೋರಿ, ಸಮೋಸಾ ಮಾರುತ್ತಾ ಬದುಕುತ್ತಿರುವ ಸಾಮಾನ್ಯ ಜನ ನಾವು ಎನ್ನುತ್ತಾರೆ ಮುಕೇಶ್.

ಈ ಪ್ರಕರಣದ ತನಿಖೆ ಭಾಗವಾಗಿರುವ ರಾಜ್ಯ ಗುಪ್ತಚರ ಇಲಾಖೆ ಸದಸ್ಯರೊಬ್ಬರು ಮಾತನಾಡಿ, ಮುಕೇಶ್ ಈಗಾಗಲೇ ತನ್ನ ಆದಾಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಕಚೋರಿ- ಸಮೋಸಾಗೆ ಬೇಕಾಗುವ ಪದಾರ್ಥ, ಎಣ್ಣೆ, ಎಲ್ ಪಿಜಿ ಸಿಲಿಂಡರ್ ಗಳು ಇತ್ಯಾದಿ ಖರ್ಚಿನ ಮಾಹಿತಿಯನ್ನೂ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.

ಯಾವುದೇ ವ್ಯಾಪಾರದಲ್ಲಾಗಲೀ 40 ಲಕ್ಷ ಮತ್ತು ಮೇಲ್ಪಟ್ಟ ವಹಿವಾಟು ಇದ್ದಲ್ಲಿ ಜಿಎಸ್ ಟಿ ನೋಂದಣಿ ಮಾಡಿಸುವುದು ಕಡ್ಡಾಯ. ತಯಾರಾದ ಆಹಾರ ಪದಾರ್ಥದ ಮೇಲೆ 5 ಪರ್ಸೆಂಟ್ ತೆರಿಗೆ ಬೀಳುತ್ತದೆ. ಅಧಿಕಾರಿಗಳು ಹೇಳುವ ಪ್ರಕಾರ, ಮುಕೇಶ್ ಜಿಎಸ್ ಟಿ ನೋಂದಣಿ ಮಾಡಿಸಬೇಕು ಹಾಗೂ ಒಂದು ವರ್ಷದ ತೆರಿಗೆ ಪಾವತಿಸಬೇಕು. ಅಂದಹಾಗೆ ಈಗಾಗಲೇ ಮುಕೇಶ್ ಗೆ ನೋಟಿಸ್ ಕೂಡ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+