ಉತ್ತರಪ್ರದೇಶ ಅಲ್ಲ, ಇದು ಅತ್ಯಾಚಾರಿಗಳ ಪ್ರದೇಶ- 'ಯೋಗಿ' ನಾಡಿನ ಕ್ರೂರ ಪ್ರಕರಣಗಳಿವು..

ಲಕ್ನೋ ಸೆಪ್ಟೆಂಬರ್ 15: ಉತ್ತರಪ್ರದೇಶಕ್ಕೆ ಉತ್ತರಪ್ರದೇಶ ಎಂದು ಸಂಬೋಧಿಸಲು ಕಷ್ಟವಾಗುತ್ತಿದೆ. ಇದರ ಬದಲಿಗೆ ಅದು ಅತ್ಯಾಚಾರಿಗಳ ಪ್ರದೇಶ ಎಂದು ಕರೆಯುವ ಮನಸ್ಸಾಗುತ್ತಿದೆ. ಅದಕ್ಕೆ ಕಾರಣ ದಲಿತ ಹದಿಹರೆಯದವರ ಮೇಲೆ ನಡೆದ ಅತ್ಯಾಚಾರ ಪ್ರಕರಣ. ಇದೊಂದೇ ಕಾರಣಕ್ಕಾಗಿ ಇಡೀ ಉತ್ತರಪ್ರದೇಶವನ್ನು ಅತ್ಯಾಚಾರಿಗಳ ಪ್ರದೇಶ ಎಂದು ಕಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಅತ್ಯಾಚಾರ ಪ್ರಕರಣಗಳ ಸರಮಾಲೇಯೇ ಇದೆ. ಅದು ಅತ್ಯಂತ ಕ್ರೂರವಾಗಿ ಅತ್ಯಾಚಾರವೆಸಗಿದ ಪ್ರಕರಣಗಳು ಇಲ್ಲಿ ದಾಖಲಾಗಿವೆ. ಇತ್ತೀಚೆಗೆ ಘನಘೋರವಾದ ಅತ್ಯಾಚಾರ ಪ್ರಕರಣಗಳು ಉತ್ತರಪ್ರದೇಶದಲ್ಲಿ ನಡೆಯುತ್ತಿರುವುದು ಮಹಿಳೆಯರ ಬಗ್ಗೆ ಆತಂಕವನ್ನು ಹೆಚ್ಚಿಸಿದೆ. ಉತ್ತರಪ್ರದೇಶ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಮಾಣದಲ್ಲಿ ಮುಂಚುಣಿಯಲ್ಲಿದೆ.

ರಾಷ್ಟ್ರೀಯ ಕ್ರೈಮ್ ರೆಕಾರ್ಡ್ ಬ್ಯೂರೋದ ಅಂಕಿಅಂಶಗಳನ್ನು ನಂಬುವುದಾದರೆ, ಇತ್ತೀಚಿನ ದಾಳಿಯ ಕ್ರೂರತೆಯು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಎನ್‌ಸಿಆರ್‌ಬಿಯ "ಕ್ರೈಮ್ ಇನ್ ಇಂಡಿಯಾ" 2019ರ ವರದಿಯ ಪ್ರಕಾರ, ಉತ್ತರ ಪ್ರದೇಶವು ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳನ್ನು (59,853) ವರದಿ ಮಾಡಿದೆ, ಇದು ದೇಶಾದ್ಯಂತ ಅಂತಹ ಪ್ರಕರಣಗಳಲ್ಲಿ 14.7 ಪ್ರತಿಶತವನ್ನು ಹೊಂದಿದೆ. ಯುಪಿ ಪೋಕ್ಸೊ ಕಾಯ್ದೆಯಡಿಯಲ್ಲಿ ಹೆಣ್ಣು ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳನ್ನು ಹೊಂದಿದೆ ಮತ್ತು ಅತ್ಯಾಚಾರದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ.

ಇನ್ನೂ ಇಂದು (ಸೆಪ್ಟೆಂಬರ್ 15)ರಂದು 15 ಮತ್ತು 17 ವರ್ಷ ವಯಸ್ಸಿನ ಇಬ್ಬರು ದಲಿತ ಸಹೋದರಿಯರನ್ನು ಐವರು ಉತ್ತರ ಪ್ರದೇಶದ ಲಖಿಂಪುರಖೇರಿಯಲ್ಲಿ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣ ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಮೇಲೆ ಮತ್ತೆ ಗಮನ ಸೆಳೆದಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶದ ಕೆಲವು ಕ್ರೂರ ಅತ್ಯಾಚಾರ ಪ್ರಕರಣಗಳು ನಿಮಗೆ ಹೇಳಲೇಬೇಕು.

ಮನುಕುಲವೇ ತಲೆ ತಗ್ಗಿಸುವಂತಹ ಪ್ರಕರಣ

ಮನುಕುಲವೇ ತಲೆ ತಗ್ಗಿಸುವಂತಹ ಪ್ರಕರಣ

ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಪ್ರಕರಣ ಇದು. ಈ ಘಟನೆಯು ಸೆಪ್ಟೆಂಬರ್ 14, 2020 ರಂದು ನಡೆದಿದೆ. 19 ವರ್ಷದ ಯುವತಿ ಮೇಲೆ ನಾಲ್ವರು ಮೇಲ್ಜಾತಿ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿ ಕ್ರೂರವಾಗಿ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಸಂತ್ರಸ್ತೆಯ ಕುಟುಂಬ ಸದಸ್ಯರು ಹೊಲಗಳಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಈ ಘನಘೋರ ಕೃತ ನಡೆದಿದೆ. ನಾಲ್ಕೈದು ಮಂದಿ ಹಿಂದಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿ, ದುಪ್ಪಟ್ಟಾದಿಂದ ಬಾಯಿ ಬಿಗಿದು ಬಜರಾ ಮೈದಾನಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು.

ಬಳಿಕ ಮಹಿಳೆಯ ಬೆನ್ನುಮೂಳೆಯ ಮೇಲೆ ತೀವ್ರ ಗಾಯಗಳಾಗಿದ್ದು, ಆಕೆಯ ನಾಲಿಗೆಯ ಮೇಲೆ ಗಾಯವಾಗಿತ್ತು. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದಾಗ್ಯೂ, ಎರಡು ವಾರಗಳ ನಂತರ ಯುವತಿ ತನ್ನ ಮೇಲಾದ ತೀವ್ರ ಗಾಯಗಳಿಗೆ ಬಲಿಯಾದಳು. ಇಷ್ಟು ಮಾತ್ರವಲ್ಲದೆ ಮೃತಪಟ್ಟ ಯುವತಿಯ ಮೃತದೇಹವನ್ನು ಪೊಲೀಸರು ಅದೇ ದಿನದ ರಾತ್ರಿ ಅಂದರೆ ಸೆ.30ರಂದು ತರಾತುರಿಯಲ್ಲಿ ಕುಟುಂಬದ ಅನುಮತಿಯನ್ನೂ ಪಡೆಯದೇ ಸಂಸ್ಕಾರ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಇದು ದೇಶಾದ್ಯಂತ ಭಾರಿ ಪ್ರತಿಭಟನೆಗಳು ಮತ್ತು ಆಕ್ರೋಶವನ್ನು ಉಂಟುಮಾಡಿತು. ಹತ್ರಾಸ್ ಪ್ರಕರಣವನ್ನು ಯುಪಿ ಪೋಲೀಸ್ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ವಿಧಿವಿಜ್ಞಾನ ವರದಿಯು ಯುವತಿಯ ಮೇಲೆ ಅತ್ಯಾಚಾರವಾಗಿಲ್ಲ ಎಂದು ತೋರಿಸಿದೆ. ಆದರೆ ಸಂತ್ರಸ್ತೆಯ ಅವಸರದ ಅಂತ್ಯಸಂಸ್ಕಾರ, ಕುಟುಂಬಸ್ಥರನ್ನು ಅಂತ್ಯಸಂಸ್ಕಾರಕ್ಕೆ ಕರೆಯದೇ ಇರುವುದು, ಮಧ್ಯರಾತ್ರಿ ಆಕೆಯ ಮೃತದೇಹವನ್ನು ಕುಟುಂಬಕ್ಕೆ ನೀಡದೇ ಇರುವುದು ಮತ್ತು ಗ್ರಾಮಕ್ಕೆ ಇನ್ನಿತರರು ಹೋಗದಂತೆ ಅಡ್ಡಗಟ್ಟುವುದು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು.

ಖಾಸಗಿ ಭಾಗಕ್ಕೆ ಕಬ್ಬಿಣ ತುರಕಿ ಬರ್ಬರವಾಗಿ ರಾಕ್ಷಸ ಕೃತ್ಯ

ಖಾಸಗಿ ಭಾಗಕ್ಕೆ ಕಬ್ಬಿಣ ತುರಕಿ ಬರ್ಬರವಾಗಿ ರಾಕ್ಷಸ ಕೃತ್ಯ

ಉತ್ತರಪ್ರದೇಶದ ಹತ್ರಾಸ್‌ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣದ ಕರಾಳ ನೆನಪು ಮಾಸುವ ಮೊದಲೇ ಅಲ್ಲಿನ ಬದೌನ್‌ ಜಿಲ್ಲೆಯಲ್ಲಿ ಮತ್ತೊಂದು ಅಂತಹದ್ದೇ ಹೇಯ ಕೃತ್ಯ ನಡೆದಿದೆ. ಈ ಘಟನೆಯು 2021 ಜನವರಿಯಲ್ಲಿ ನಡೆದಿದೆ.


ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಉಘೈತಿ ಪ್ರದೇಶದಲ್ಲಿ 50 ವರ್ಷದ ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರವಾಗಿ ಹತ್ಯೆಗೈಯ್ಯಲಾಗಿತ್ತು. ಮೃತಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅತ್ಯಾಚಾರ, ಆಕೆಯ ಖಾಸಗಿ ಭಾಗಗಳಲ್ಲಿ ಗಾಯ ಮತ್ತು ಕಾಲುಗಳಲ್ಲಿ ಮೂಳೆ ಮುರಿತವನ್ನು ದೃಢಪಟ್ಟಿದೆ. ಈ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಹೊತ್ತವರು ಯಾರು ಎನ್ನುವುವ ವಿಚಾರ ಕೇಳಿದರೆ ರೋಷಾವೇಶದೊಂದಿಗೆ ನಂಬಲು ಸಾಧ್ಯವಾಗದು.


50 ವರ್ಷದ ಅಂಗನವಾಡಿ ಸಹಾಯಕಿ ಮೇಲೆ ದೇವಾಲಯದ ಅರ್ಚಕ ಮತ್ತು ಆತನ ಇಬ್ಬರು ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣ ತುರಕಿ ಬರ್ಬರವಾಗಿ ರಾಕ್ಷಸ ಕೃತ್ಯ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.


ಜನವರಿ 3 ರಂದು ಸಂಜೆ ಅಂಗನವಾಡಿ ಕಾರ್ಯಕರ್ತೆ ಮಹಿಳೆಯೊಬ್ಬರು ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕುಟುಂಬದವರು ಆರೋಪಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮತ್ತು ಅವರ ಇಬ್ಬರು ಶಿಷ್ಯರನ್ನು ಬಂಧಿಸಲಾಗಿದೆ. ಆದರೆ ಸ್ಥಳೀಯ ಪೊಲೀಸರು FIR ದಾಖಲಿಸುವಲ್ಲಿ ತಡಮಾಡಿದ್ದರು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದರು. ಬಳಿಕ ಕರ್ತವ್ಯ ಲೋಪಕ್ಕಾಗಿ ಆ ಪ್ರದೇಶದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವರನ್ನು ಅಮಾನತುಗೊಳಿಸಲಾಗಿದೆ. ಬದೌನ್ ನಲ್ಲಿನ ಈ ಪ್ರಕರಣ ಈ ಹಿಂದೆ 2014 ರಲ್ಲಿ ಇಬ್ಬರು ಹದಿಹರೆಯದ ಸೋದರಸಂಬಂಧಿಗಳ ಅತ್ಯಾಚಾರ ಮತ್ತು ಹತ್ಯೆಯ ನಂತರ ಬೆಳಕಿಗೆ ಬಂದಿತ್ತು.

ಗೋರಖ್‌ಪುರದಲ್ಲಿ ಅತ್ಯಾಚಾರ, ಸಿಗರೇಟ್ ತುಂಡುಗಳಿಂದ ಸುಟ್ಟು ಹಿಂಸೆ

ಗೋರಖ್‌ಪುರದಲ್ಲಿ ಅತ್ಯಾಚಾರ, ಸಿಗರೇಟ್ ತುಂಡುಗಳಿಂದ ಸುಟ್ಟು ಹಿಂಸೆ

ಉತ್ತರ ಪ್ರದೇಶದಲ್ಲಿ ಅಪ್ರಾಪ್ತರ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಭೀಕರ ಪ್ರಕರಣಗಳೂ ಹೆಚ್ಚುತ್ತಿವೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಅಂದರೆ ಗೋರಖ್‌ಪುರ್ ಘಟನೆ. ಇದು ಅತ್ಯಂತ ಹೀನಾಯ ಮತ್ತು ಅಮಾನವೀಯ ಕೃತ್ಯ. ಕಳೆದ ವರ್ಷ ಆಗಸ್ಟ್‌ನಲ್ಲಿ ಗೋರಖ್‌ಪುರ ಜಿಲ್ಲೆಯ ಗೋಲಾ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸಿಗರೇಟ್ ತುಂಡುಗಳಿಂದ ಸುಟ್ಟಿದ್ದರು.


ಪಿಟಿಐ ವರದಿಯ ಪ್ರಕಾರ, ಇಟ್ಟಿಗೆ ಗೂಡು ಕಾರ್ಮಿಕನ ಮಗಳು ಆಗಸ್ಟ್ 16 ರ ರಾತ್ರಿ ಕೈ ಪಂಪ್‌ನಿಂದ ನೀರು ತರಲು ಹೋದಾಗ ಇಬ್ಬರು ಆರೋಪಿಗಳು ಬಲವಂತವಾಗಿ ಮೋಟಾರು ಸೈಕಲ್‌ನಲ್ಲಿ ಗುಡಿಸಲಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದರು. ಅಲ್ಲದೆ ಆಕೆಗೆ ಸಿಗರೇಟ್ ತುಂಡುಗಳಿಂದ ಸುಟ್ಟು ಚಿತ್ರಹಿಂಸೆ ನೀಡಿ ಪ್ರಜ್ಞೆ ತಪ್ಪಿ ಬಿದ್ದಾಗ ಪರಾರಿಯಾಗಿದ್ದಾರೆ.


ಅದೇ ದಿನ, ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ಮತ್ತೊಂದು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವರದಿಯಾಗಿತ್ತು. ಆರೋಪಿಗಳಲ್ಲಿ ಒಬ್ಬನ ಮಾಲೀಕತ್ವದ ಕಬ್ಬಿನ ಗದ್ದೆಯಲ್ಲಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು. ಆಕೆಯ ತಂದೆ ಅವಳನ್ನು ಕತ್ತು ಹಿಸುಕಿ, ಕಣ್ಣುಗಳನ್ನು ಕಿತ್ತು ಮತ್ತು ನಾಲಿಗೆಯನ್ನು ಕತ್ತರಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯು ಸಂತ್ರಸ್ತೆಯ ಕಣ್ಣುಗಳನ್ನು ಕಿತ್ತುಹಾಕಲಾಗಿದೆ ಅಥವಾ ನಾಲಿಗೆ ಕತ್ತರಿಸಲ್ಪಟ್ಟಿದೆ ಎಂದು ಸೂಚಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಕ್ಕಾಗಿ ಹೋರಾಡುವಾಗ ಮಹಿಳೆಗೆ ಬೆಂಕಿ ಹಚ್ಚಿದ ಅತ್ಯಾಚಾರದ ಆರೋಪಿಗಳು

ನ್ಯಾಯಕ್ಕಾಗಿ ಹೋರಾಡುವಾಗ ಮಹಿಳೆಗೆ ಬೆಂಕಿ ಹಚ್ಚಿದ ಅತ್ಯಾಚಾರದ ಆರೋಪಿಗಳು

ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ಮತ್ತೊಂದು ಪ್ರಕರಣವೆಂದರೆ ಅದು ಉನ್ನಾವೊ ಪ್ರಕರಣ. ಈ ಘಟನೆಯನ್ನ ಕಲ್ಪಿಸಿಕೊಳ್ಳುವುದು ಹೃದಯ ಹಿಂಡಿದ ಅನುಭವವಾಗುತ್ತದೆ. ಮಾನಸಿಕವಾಗಿ ದೈಹಿಕವಾಗಿ ತನ್ನನ್ನು ತಾನು ಕಳೆದುಕೊಂಡ ಅತ್ಯಾಚಾರಕ್ಕೊಳಗಾದ ಮಹಿಳೆ ದೇಹಕ್ಕೆ ಬೆಂಕಿ ಹೊತ್ತು ಉರಿಯುತ್ತಿತ್ತು. ಅತ್ಯಾಚಾರವೆಸಗಿ ಪೈಚಾಚಿಕ ಕೃತ್ಯವೆಸಗಿದ ಪಾಪಿ ಸಂತ್ರಸ್ತ ಮಹಿಳೆಗೆ ಬೆಂಕಿ ಕೂಡ ಹಚ್ಚಿದ್ದ. ಅಲ್ಲಿ ಅತ್ಯಾಚಾರದಿಂದ ಬದುಕುಳಿದ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಇಬ್ಬರು ಆರೋಪಿಗಳು ಸೇರಿದಂತೆ ಐದು ಪುರುಷರು ಅವಳಿಗೆ ಬೆಂಕಿ ಹಚ್ಚಿದ್ದರು, ಮಾತ್ರವಲ್ಲದೆ ಆಕೆಗೆ ಹೊಡೆದು ಮತ್ತು ಇರಿದಿದ್ದರು. ಬೆಂಕಿ ಹೊತ್ತುಕೊಂಡ ಬಲಿಪಶು ಸಹಾಯ ಪಡೆಯಲು ಒಂದು ಕಿಲೋಮೀಟರ್‌ಗೂ ಹೆಚ್ಚು ಓಡಬೇಕಾಯಿತು. ಈ ಘಟನೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.

2018 ರಲ್ಲಿ ಅಪಹರಣ ಮತ್ತು ಅತ್ಯಾಚಾರಕ್ಕೊಳಗಾದ ಮಹಿಳೆಗೆ 90 ಪ್ರತಿಶತದಷ್ಟು ಸುಟ್ಟ ಗಾಯಗಳಾಗಿದ್ದವು. ನಂತರ ಅವರು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಿಧನರಾದರು. ವಿಪರ್ಯಾಸ ಅಂದರೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ಆರೋಪಿಗಳಿಂದ ಬೆದರಿಕೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು ಆದರೆ ಪೊಲೀಸರು ದೂರುಗಳಿಗೆ ಕಿವಿಗೊಟ್ಟಿರಲಿಲ್ಲ.

ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ

ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ನಂತರ ಉನ್ನಾವೋ ದೇಶದ ಗಮನ ಸೆಳೆದಿದೆ. ತಾನು 11 ವರ್ಷದವಳಾಗಿದ್ದಾಗಿನಿಂದ ಅನೇಕ ಸಂದರ್ಭಗಳಲ್ಲಿ ಆಗಿನ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದಳು ಮತ್ತು ಆತನ ಮನೆಯಲ್ಲಿ ಬಂಧಿಯಾಗಿದ್ದಳು ಎಂದು ಆರೋಪಿಸಿದ್ದಳು.

ಅತ್ಯಾಚಾರ ಸಂತ್ರಸ್ತೆಯ ತಂದೆ ಮರುದಿನ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದಾಗ ಈ ಘಟನೆಯು ದೊಡ್ಡ ವಿವಾದಕ್ಕೆ ಕಾರಣವಾಯಿತು ಮತ್ತು ಸೆಂಗಾರ್ ಅವರ ಸಹೋದರ ಅತುಲ್ ಅವರನ್ನು ಕ್ರೂರವಾಗಿ ಥಳಿಸಿದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದವು. ಜುಲೈ 2019 ರಲ್ಲಿ, ಅತ್ಯಾಚಾರ ಸಂತ್ರಸ್ತೆ ಕೆಲವು ಕುಟುಂಬ ಸದಸ್ಯರು ಮತ್ತು ಅವರ ವಕೀಲರೊಂದಿಗೆ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅತ್ಯಾಚಾರ ಸಂತ್ರಸ್ತೆಯನ್ನು ದೆಹಲಿಯ ಏಮ್ಸ್‌ಗೆ ವಿಮಾನದಲ್ಲಿ ಸಾಗಿಸುವ ಸಂದರ್ಭದಲ್ಲಿ ಆಕೆಯ ಇಬ್ಬರು ಚಿಕ್ಕಮ್ಮಗಳು ಈ ಘಟನೆಯಲ್ಲಿ ಸಾವನ್ನಪ್ಪಿದ್ದರು. ಡಿಸೆಂಬರ್ 2019 ರಲ್ಲಿ ದೆಹಲಿ ನ್ಯಾಯಾಲಯವು ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+