ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ: ಯೋಗಿ

|
Google Oneindia Kannada News

ಲಕ್ನೋ, ಜೂ. 1: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ರಾಮಮಂದಿರವು ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ದೇವಾಲಯದ ಗರ್ಭಗುಡಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೇಳಿದರು.

ಜನರು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. ರಾಮಮಂದಿರವು ಭಾರತದ ಏಕತೆಯ ಸಂಕೇತವಾಗಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭಿಸಿದ್ದರು. ಈ ಕೆಲಸ ಈಗ ಯಶಸ್ವಿಯಾಗಿ ಮುಂದುವರೆದಿದೆ. ಬುಧವಾರ ಗರ್ಭಗುಡಿಯಲ್ಲಿ ಕಲ್ಲುಗಳನ್ನು ಇರಿಸಿದ ದಿನಾಚರಣೆಯನ್ನು ಪ್ರಾರಂಭಿಸಿರುವುದು ನಮ್ಮ ಅದೃಷ್ಟ ಎಂದು ಯೋಗಿ ಉಲ್ಲೇಖಿಸಿದರು. ಯೋಗಿ ಆದಿತ್ಯನಾಥ ಅವರು ಕೆಂಪು ಇಟ್ಟಿಗೆಯನ್ನು ಹೂಮಾಲೆಗಳಿಂದ ಮುಚ್ಚಿದ ಗೋಡೆಯ ಬದಿಯಲ್ಲಿ ಇರಿಸಿದರು. ಈ ಪಂಡಿತರು ಧಾರ್ಮಿಕ ಶ್ಲೋಕಗಳನ್ನು ಪಠಿಸಿದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ವೈಶಿಷ್ಟ್ಯವೇನು?ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ವೈಶಿಷ್ಟ್ಯವೇನು?

ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ರಾಮಮಂದಿರ ಆಂದೋಲನಕ್ಕೆ ಸಂಬಂಧಿಸಿದ ಸುಮಾರು 90 ಮಠಗಳ ಹಾಗೂ ದೇವಾಲಯಗಳ ಸಂತರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಳೆದ ತಿಂಗಳು ರಾಮಮಂದಿರ ನಿರ್ಮಾಣ ಸಮಿತಿಯ ಸದಸ್ಯರೊಬ್ಬರು ಮಾಹಿತಿ ನೀಡಿ ದೇವಾಲಯದ ಕೆಲಸವು ಪ್ರಗತಿಯ ಹಂತದಲ್ಲಿದೆ. ಇದು ನಿಗದಿತ ಅವಧಿಯಲ್ಲಿ ಕೆಲಸವನ್ನು ಮುಗಿಸುತ್ತದೆ. ಗರ್ಭಗುಡಿ ಮತ್ತು ಐದು ಮಂಟಪಗಳು ಸೇರಿದಂತೆ ಮೂರು ಅಂತಸ್ತಿನ ದೇವಾಲಯದ ನಿರ್ಮಾಣವು ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದೆ ಎಂದು ತಿಳಿಸಿದರು.

12 ಗಣಿಗಳಿಗೆ ಪರಿಸರ ಇಲಾಖೆ ಅನುಮೋದನೆ

12 ಗಣಿಗಳಿಗೆ ಪರಿಸರ ಇಲಾಖೆ ಅನುಮೋದನೆ

ಗರ್ಭಗುಡಿಯಲ್ಲಿ ಪೂಜೆಗಾಗಿ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ದೇವಾಲಯ ಡಿಸೆಂಬರ್ 2023ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಸುಮಾರು 17,000 ಕಲ್ಲುಗಳನ್ನು ಇದರಲ್ಲಿ ಬಳಸಲಾಗಿದೆ. ದೇವಾಲಯದ ಅಲಂಕಾರಿಕ ರಚನೆಗಾಗಿ ರಾಜಸ್ಥಾನದ ಬನ್ಸಿ ಪಹರ್‌ಪುರದಿಂದ ಕಲ್ಲನ್ನು ಸಂಗ್ರಹಿಸಲಾಗುತ್ತಿದೆ. ಕಳೆದ ವಾರ ರಾಜಸ್ಥಾನ ಸರ್ಕಾರವು ಬನ್ಸಿ ಪಹಾರ್‌ಪುರ ಪ್ರದೇಶದಲ್ಲಿ 12 ಗಣಿಗಳಿಗೆ ಪರಿಸರ ಇಲಾಖೆ ಅನುಮೋದನೆ ನೀಡಿದ್ದು, ಅಲ್ಲಿಂದ ಈ ಉದ್ದೇಶಕ್ಕಾಗಿ ಗುಲಾಬಿ ಮರಳುಗಲ್ಲು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಜುಲೈ ವೇಳೆಗೆ ಇನ್ನೂ 12 ಗಣಿಗಳಿಗೆ ಪರಿಸರ ಇಲಾಖೆ ಅನುಮೋದನೆ ನೀಡಲಾಗುತ್ತದೆ ಎನ್ನಲಾಗಿದೆ. ಆಗಸ್ಟ್ 2020 ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು.

ಭಗವಾನ್ ರಾಮನಿಗೆ ಜಾಗ ಸೇರಿದೆ

ಭಗವಾನ್ ರಾಮನಿಗೆ ಜಾಗ ಸೇರಿದೆ

ನವೆಂಬರ್ 2019 ರಲ್ಲಿ ಸುಪ್ರೀಂ ಕೋರ್ಟ್ ಜಾಗದ ಕುರಿತು ದೀರ್ಘಕಾಲದ ಧಾರ್ಮಿಕ ವಿವಾದವನ್ನು ಇತ್ಯರ್ಥಪಡಿಸಿತ್ತು. ಇದು ಭಗವಾನ್ ರಾಮನಿಗೆ ಸೇರಿದೆ ಎಂದು ಹೇಳಿತ್ತು. ರಾಮಮಂದಿರ ನಿರ್ಮಾಣ ನಿರ್ವಹಣೆಗೆ ಟ್ರಸ್ಟ್ ಸ್ಥಾಪಿಸುವಂತೆ ಕೇಂದ್ರಕ್ಕೆ ತಿಳಿಸಲಾಗಿತ್ತು. ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಅದೇ ಪಟ್ಟಣದಲ್ಲಿ ಹೊಸ ಮಸೀದಿಗಾಗಿ ನಿವೇಶನ ಮಂಜೂರು ಮಾಡಲಾಗುವುದು ಎಂದು ಹೇಳಿತ್ತು.

ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯ

ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯ

ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ದೇಗುಲದಲ್ಲಿ ಪ್ರತಿ ವರ್ಷ ರಾಮನವಮಿಯಂದು ಉದಯ ಸೂರ್ಯನ ಕಿರಣಗಳು ರಾಮ ವಿಗ್ರಹದ ಮೇಲೆ ಬೀಳುವಂತೆ ಗರ್ಭಗುಡಿಯ ವಾಸ್ತುಶಿಲ್ಪವನ್ನು ರೂಪಿಸಲಾಗುತ್ತಿದೆ. ಪ್ರತಿ ವರ್ಷ ಸಂಕ್ರಾಂತಿಯಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯನ ಮೊದಲ ಕಿರಣಗಳು ದೇಗುಲದ ಲಿಂಗದ ಮೇಲೆ ಬೀಳುತ್ತವೆ. ಅದೇ ರೀತಿ ಅಯೋಧ್ಯೆಯಲ್ಲೂ ನಡೆಯಲಿದೆ. ಒಡಿಶಾದಲ್ಲಿರುವ 13ನೇ ಶತಮಾನದ ಕೊನಾರ್ಕ್ ದೇಗುಲದ ವಾಸ್ತುಶಿಲ್ಪವನ್ನು ಸ್ಫೂರ್ತಿಯಾಗಿ ಇರಿಸಿಕೊಂಡು ರಾಮಮಂದಿರ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

ತಾಂತ್ರಿಕ ಸೌಲಭ್ಯಗಳ ಬಗ್ಗೆಯೂ ಚರ್ಚೆ

ತಾಂತ್ರಿಕ ಸೌಲಭ್ಯಗಳ ಬಗ್ಗೆಯೂ ಚರ್ಚೆ

ಈ ವಿಶಿಷ್ಟ ತಂತ್ರಜ್ಞಾನವುಳ್ಳ ವಾಸ್ತುಶಿಲ್ಪವನ್ನು ಸಿದ್ಧಪಡಿಸುವ ಪ್ರಸ್ತಾವನೆಯನ್ನು ಈಗಾಗಲೇ ಮಂದಿರ ನಿರ್ಮಾಣ ನಿರತ ವಾಸ್ತುಶಿಲ್ಪ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಗತ್ಯ ತಾಂತ್ರಿಕ ಸೌಲಭ್ಯಗಳ ಬಗ್ಗೆಯೂ ಚರ್ಚಿಸಲಾಗಿದೆ. ಸೂರ್ಯ ಕಿರಣಗಳು ಶ್ರೀರಾಮ ವಿಗ್ರಹ ಸ್ಪರ್ಶಿಸುವ ಹೃದಯಂಗಮ ಸನ್ನಿವೇಶವನ್ನು ಪ್ರತಿ ಶ್ರೀರಾಮ ನವಮಿಯಂದು ಸೃಷ್ಟಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಕಟ್ಟಡ ನಿರ್ಮಾಣ ಸಂಸ್ಥೆ, ದೆಹಲಿ, ಮುಂಬೈ ಹಾಗೂ ರೂರ್ಕಿ ಐಐಟಿಯ ವಿಜ್ಞಾನಿಗಳು ಹಾಗೂ ತಜ್ಞರು ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ. ಕಂಬಗಳಲ್ಲಿ ನವಗ್ರಹಗಳಿರಲಿವೆ, ಲೈಟಿಂಗ್ ವ್ಯವಸ್ಥೆ ಇರಲಿದೆ ಎಂದು ಹೇಳಲಾಗಿದೆ.

Recommended Video

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾವನ್ನು ಮುಚ್ಚಿಡುತ್ತಿರೋದು ಯಾಕೆ? | #World | OneIndia Kannada

English summary
Uttar Pradesh Chief Minister Yogi Adityanath said at the temple's sanctum sanctorum on Wednesday that the magnificent palace that is being built in Ayodhya will be the national temple of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X