ಖಾಕಿ ಚಡ್ಡಿಯಂತೆ ಗೋಡ್ಸೆಯೂ RSS ಗುರುತು: ಆಜಂ ಖಾನ್

ರಾಂಪುರ, ಮೇ 17: "ಖಾಕಿ ಚಡ್ಡಿ ಎಂದರೆ ಹೇಗೆ ಆರೆಸ್ಸೆಸ್ ನೆನಪಾಗುತ್ತದೋ, ಹಾಗೆಯೇ ನಾಥೂರಾಮ್ ಗೋಡ್ಸೆ ಎಂದರೂ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ನೆನಪಾಗುತ್ತದೆ. ಗೋಡ್ಸೆ ಸಹ ಆರೆಸ್ಸೆಸ್ ಗುರುತು" ಎಂದು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಹೇಳಿದ್ದಾರೆ. ಈ ಮೂಲಕ ಮತ್ತೊಂದು ವಿವಾದಕ್ಕೆ ಅವರು ನಾಂದಿ ಹಾಡಿದ್ದಾರೆ.

ನಟ, ರಾಜಕಾರಣಿ ಕಮಲ್ ಹಾಸನ್ ಅವರು ಇತ್ತೀಚೆಗೆ ಕಾರ್ಯಕ್ರಮವೊದರಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ "ಸ್ವತಂತ್ರ ಭಾರತದ ಮೊದಲ ಉಗ್ರ ಓರ್ವ ಹಿಂದು, ಅವನ ಹೆಸರು ನಾಥೂರಾಮ್ ಗೋಡ್ಸೆ" ಎಂದಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, "ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತರಾಗಿದ್ದರು. ಅವರು ಎಂದಿಗೂ ದೇಶಭಕ್ತರಾಗಿಯೇ ಇರುತ್ತಾರೆ. ಆತನನ್ನು ಉಗ್ರ ಎನ್ನುವವರಿಗೆ ಜನರೇ ಪಾಠ ಕಲಿಸುತ್ತಾರೆ" ಎಂಬ ಹೇಳಿಕೆ ನೀಡಿದ್ದರು.

SP leader Azam Khan says, Godse is identity of RSS like khaki nikkar

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆಜಂ ಖಾನ್, "ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ಬಿಜಿ ವಿರೋಧಿಸಿಬಿಟ್ಟರೆ ಮುಗಿಯಿತೇ? ಗೋಡ್ಸೆ ಆರೆಸ್ಸೆಸ್ಸಿನ ಗುರುತು, ಖಾಕಿ ನಿಕ್ಕರ್ ನಂತೆ. ಈಗ ಜನರೇ ನಿರ್ಧರಿಸಬೇಕು, ಈ ದೇಶ ಗೋಡ್ಸೆ ಇಂದ ಗುರುತಿಸಿಕೊಳ್ಳಬೇಕೋ, ಗಾಂಧಿಯಿಂದ ಗುರುತಿಸಿಕೊಳ್ಳಬೇಕೋ? ಖಾಕಿ ಚಡ್ಡಿಯಿಂದ ಗುರುತಿಸಿಕೊಳ್ಳಬೇಕೋ, ಮಾನವೀಯತೆಯಿಂದ ಗುರುತಿಸಿಕೊಳ್ಳಬೇಕೋ?" ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+