• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಗಾಂಧಿ ಹತ್ರಾಸ್‌ ಭೇಟಿ ರಾಜಕೀಯವಷ್ಟೇ,ನ್ಯಾಯಕ್ಕಾಗಿ ಅಲ್ಲ: ಸ್ಮೃತಿ

|

ನವದೆಹಲಿ, ಅಕ್ಟೋಬರ್ 03: ರಾಹುಲ್ ಗಾಂಧಿ ಹತ್ರಾಸ್‌ಗೆ ಭೇಟಿ ನೀಡುತ್ತಿರುವುದು ರಾಜಕೀಯ ಉದ್ದೇಶದಿಂದಷ್ಟೇ ಹೊರತು ನ್ಯಾಯಕ್ಕಾಗಿ ಅಲ್ಲ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಮಾತನಾಡಿರುವ ಕಾರಣ ವಾರಾಣಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರನ್ನು ತಡೆಹಿಡಿದರು.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಳೆದ ಎರಡು ವಾರಗಳ ಹಿಂದೆ ದಲಿತ ಯುವತಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾಳೆ. ಆಕೆಯ ಅಂತ್ಯಕ್ರಿಯೆಗೂ ಕುಟುಂಬದವರಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ತೆರಳಿದ್ದರು. ಆದರೆ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದಿದ್ದರು.

ಕಾಂಗ್ರೆಸ್ ತಂತ್ರದ ಬಗ್ಗೆ ಜನರಿಗೆ ತಿಳಿಸಿದೆ

ಕಾಂಗ್ರೆಸ್ ತಂತ್ರದ ಬಗ್ಗೆ ಜನರಿಗೆ ತಿಳಿಸಿದೆ

ಕಾಂಗ್ರೆಸ್ ತಂತ್ರದ ಬಗ್ಗೆ ಜನರಿಗೆ ಅರಿವಿದೆ. ಅವರಕ್ಕಾಗಿ ಅವರು 2019ರ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಿದ್ದರು. ಕಳೆದ ವರ್ಷ ಅಮೇಥಿ ಲೋಕಸಭಾಚುನಾವಣೆಯಲ್ಲಿ ಸ್ಮೃತಿ ಇರಾನಿ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು.

ಅವರನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ

ಅವರನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರನ್ನೂ ತಡೆಯಲು ನನ್ನಿಂದ ಸಾಧ್ಯವಿಲ್ಲ.ಆದರೆ ಜನರು ಹತ್ರಾಸ್‌ಗೆ ಭೇಟಿ ನೀಡುವುದು ರಾಜಕೀಯಕ್ಕಾಗಿ, ಸಂತ್ರಸ್ತೆಯ ನ್ಯಾಯಕ್ಕಾಗಿ ಅಲ್ಲ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಸ್ಮೃತಿ ಇರಾನಿ ಕಾರು ತಡೆಯಲು ಯತ್ನ

ಸ್ಮೃತಿ ಇರಾನಿ ಕಾರು ತಡೆಯಲು ಯತ್ನ

ಸ್ಮೃತಿ ಇರಾನಿ ಮಾತುಗಳಿಂದ ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು ವಾರಾಣಸಿಯಲ್ಲಿ ಸ್ಮೃತಿ ಇರಾನಿ ಕಾರನ್ನು ತಡೆಯುವ ಪ್ರಯತ್ನ ನಡೆಸಿದರು. ಹಾಗೆಯೇ ಅವರ ವಿರುದ್ಧ ಘೋಷಣೆ ಕೂಗಿದರು.

ಯಾವುದೇ ಶಕ್ತಿಯು ನನ್ನನ್ನು ತಡೆಯಲು ಸಾಧ್ಯವಿಲ್ಲ

ಯಾವುದೇ ಶಕ್ತಿಯು ನನ್ನನ್ನು ತಡೆಯಲು ಸಾಧ್ಯವಿಲ್ಲ

ಯಾವುದೇ ಶಕ್ತಿಯು ಹತ್ರಾಸ್ ಕುಟುಂಬದವರನ್ನು ಭೇಟಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇಂದು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಸಂತ್ರಸ್ತೆ ಮನೆಗೆ ಭೇಟಿ ನೀಡಲಿದ್ದಾರೆ. ಕಳೆದ 48 ಗಂಟೆಗಳ ಬಳಿಕ ಹಳ್ಳಿಯ ಗಡಿಯನ್ನು ತೆರೆಯಲಾಗಿದೆ. ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ಮಾತ್ರ ಬರಲು ಅವಕಾಶವಿದೆ. ಜಾಂಯಿಂಟ್ ಮ್ಯಾಜಿಸ್ಟ್ರೇಟ್ ಮಾತನಾಡಿ, ರಾಹುಲ್ ಗಾಂಧಿಗೆ ಬರಲು ಅವಕಾಶವಿಲ್ಲ, ಅವರು ಮಾತ್ರವಲ್ಲ ಯಾವುದೇ ರಾಜಕೀಯ ವ್ಯಕ್ತಿಗಳು ಹಳ್ಳಿಗೆ ಬರಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

English summary
Union Minister Smriti Irani was stopped by some Congress workers in Varanasi this afternoon soon after she attacked Rahul Gandhi over his visit to Hathras in Uttar Pradesh amid outrage over the alleged gang rape and murder of a 20-year-old woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X