Get Updates
Get notified of breaking news, exclusive insights, and must-see stories!

ಗೋರಖ್‌ಪುರ ಶೋಭಾ ಯಾತ್ರೆಯಲ್ಲಿ ಸಿಎಂ ಭಾಗಿ: 200 ಕೆಜಿ ಬಣ್ಣ, ಹೂವುಗಳ ಮೂಲಕ ಸ್ವಾಗತ

ಗೋರಖ್‌ಪುರ ಮಾರ್ಚ್ 19: ಕೊರೊನಾ ವೈರಸ್ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಗೋರಖ್‌ಪುರದಲ್ಲಿ ನಡೆಯದ ಸಾಂಪ್ರದಾಯಿಕ ಭಗವಾನ್ ನರಸಿಂಗ್ ಶೋಭಾ ಯಾತ್ರೆ ಇಂದು ಅದ್ಧೂರಿಯಾಗಿ ನಡೆಯಲು ಸಜ್ಜಾಗಿದೆ.

ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಘಂಟಾ ಘರ್ ನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಸಾಂಪ್ರದಾಯಿಕ ಭಗವಾನ್ ನರಸಿಂಗ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗೋರಕ್ಷಪೀಠಾಧೀಶ್ವರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಶೋಭಾ ಯಾತ್ರೆಯು ಘಂಟಾಘರ್‌ನಿಂದ ಹೊರಡಲಿದೆ. ಮೆರವಣಿಗೆಯ ಸಂದರ್ಭದಲ್ಲಿ ಗೋರಖ್‌ಪುರದ ಜನರು ಸಿಎಂ ಯೋಗಿ ಅವರೊಂದಿಗೆ ಬಣ್ಣಗಳ ಹೋಳಿ ಆಡುತ್ತಾರೆ. ಹೀಗಾಗಿ ಈ ವೇಳೆ ಮೆರವಣಿಗೆಗೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಗೋರಖ್‌ಪುರದಲ್ಲಿ ಈ ಮೆರವಣಿಗೆಯನ್ನು ಆಯೋಜಿಸಲಾಗಿಲ್ಲ. ಹೀಗಾಗಿ ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ಹಂಗಾಮಿ ಸಿಎಂ ಯೋಗಿ ಆದಿತ್ಯನಾಥ್ ಅವರು ಈಗಾಗಲೇ ಗೋರಖ್‌ಪುರದಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ಪ್ರವಾಸದ ಮೂರನೇ ದಿನ ಅಂದರೆ ಶನಿವಾರ ಘಂಟಾಘರ್ ನಿಂದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ನರಸಿಂಗ್ ಶೋಭಾಯಾತ್ರೆ ಹೊರಡಲಿದೆ. ಮೆರವಣಿಗೆಗೂ ಮುನ್ನ ಗೋರಕ್ಷಪೀಠದಲ್ಲಿನ ಹೋಳಿಕಾಗೆ ತಿಲಕವಿಡುವ ಮೂಲಕ ಸಿಎಂ ಯೋಗಿ ಅವರು ಹೋಳಿಗೆ ಚಾಲನೆ ನೀಡಲಿದ್ದಾರೆ. ನಂತರ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹೋಳಿಕೋತ್ಸವ ಸಮಿತಿ ಮಹಾನಗರದಿಂದ ಆಯೋಜಿಸಿರುವ ಈ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಧ್ವಜವಂದನೆ ಮತ್ತು ಪ್ರಾರ್ಥನೆ ನಡೆಯಲಿದೆ.

Shobha Yatra after two years: CM Yogi Holi with people

ಪ್ರಾಂತ ಸಂಘದ ಚಾಲಕ ಸುಭಾಷ್, ಗೋರಕ್ಷಪೀಠಾಧೀಶ್ವರ ಯೋಗಿ ಆದಿತ್ಯನಾಥ್ ಅವರು ನರಸಿಂಹ ದೇವರ ಮಹಾ ಆರತಿ ನೆರವೇರಿಸಿ ಮೆರವಣಿಗೆಯ ರಥವನ್ನು ಏರಲಿದ್ದಾರೆ. ಬಣ್ಣಗಳನ್ನು ಆಡುವ ಮೂಲಕ ಶೋಭಾ ಯಾತ್ರೆ ಹೊರಡಲಿದೆ. ಈ ಬಾರಿಯ ಮೆರವಣಿಗೆಯಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಬೃಹತ್ ಗೆಲುವಿನ ವಿಜಯೋತ್ಸವದ ಸಂಭ್ರಮವೂ ಕಲಬೆರಕೆಯಾಗಲಿದೆ. ಪ್ರತಿ ವರ್ಷ ಗೋರಕ್ಷಪೀಠದ ಮುಖ್ಯಸ್ಥ ನರಸಿಂಹ ದೇವರು ಬಣ್ಣಗಳಲ್ಲಿ ಮುಳುಗುತ್ತಾನೆ. ರಥದಲ್ಲಿ ನರಸಿಂಹ ದೇವನ್ನು ಕೂಡಿಸಲಾಗುತ್ತದೆ. ಶೋಭಾ ಯಾತ್ರೆಯ ಸಮಯದಲ್ಲಿ ನರಸಿಂಹ ದೇವರು ಹೋಳಿಯಲ್ಲಿ ಎಲ್ಲರಿಗೂ ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆ ಇದೆ. ಆದರೆ ಈ ಬಾರಿ ಶೋಭಾ ಯಾತ್ರೆ ಜನರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.

ಈ ಬಾರಿ ಐದು ಟ್ರಾಲಿಗಳನ್ನು ಮೆರವಣಿಗೆಯಲ್ಲಿ ಸೇರಿಸಲಾಗಿದೆ. ಅವುಗಳ ಮೇಲೆ ಬಣ್ಣ ಹಾಕಲಾಗುತ್ತದೆ. ಪ್ರತಿ ಟ್ರಾಲಿ ಪಕ್‌ನಲ್ಲಿ 15 ರಿಂದ 20 ಸ್ವಯಂಸೇವಕರು ಇರುತ್ತಾರೆ. ಪಿಚ್ಗಾರಿಗಳಲ್ಲಿ ಬಣ್ಣ ತುಂಬಿ ಜನರ ಮೇಲೆ ಬಣ್ಣ ಎರಚುತ್ತಾರೆ. ಈ ಮೆರವಣಿಗೆಗಾಗಿ 200 ಕೆಜಿ ಬಣ್ಣಗಳು, 2 ಕ್ವಿಂಟಾಲ್ ಗುಲಾಬಿ ಮತ್ತು ಮಾರಿಗೋಲ್ಡ್ ಹೂವಿನ ದಳಗಳಿದ್ದು, ಇವುಗಳ ಮೇಲೆ ಹೋಳಿ ಆಡಲಾಗುತ್ತದೆ.

Shobha Yatra after two years: CM Yogi Holi with people

ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಯೋಗಿ ಆದಿತ್ಯನಾಥ್ ಮಾರ್ಚ್ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯುಪಿ ಸಿಎಂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರೆ ಕೇಂದ್ರ ಸಚಿವರು ಹಾಜರಾಗಲಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮವು ಮಾರ್ಚ್ 25ರ ಶುಕ್ರವಾರ ಸಂಜೆ 4 ಗಂಟೆಗೆ ಲಕ್ನೋದಲ್ಲಿರುವ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕ್ತಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. 50,000 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಕ್ರೀಡಾಂಗಣದಲ್ಲಿ 200 ವಿವಿಐಪಿ ಆಸನಗಳ ವ್ಯವಸ್ಥೆಯೂ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+