ಬಿಜೆಪಿಯನ್ನು ವಿರೋಧಿಸಲು ‘ಮಿಷನ್ ಯುಪಿ’ ಆರಂಭಿಸಿದ ಎಸ್‌ಕೆಎಂ
ಲಕ್ನೋ ಫೆಬ್ರವರಿ 15: ಮೋದಿ ಸರ್ಕಾರದ ಕೃಷಿ ನೀತಿಗಳನ್ನು ಪ್ರತಿಭಟಿಸುವ ರೈತ ಸಂಘಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ನೇರವಾಗಿ ಪ್ರಚಾರ ಮಾಡಲು "ಮಿಷನ್ ಉತ್ತರ ಪ್ರದೇಶ" ಪ್ರಾರಂಭಿಸಿದೆ. ಜೊತೆಗೆ ಯೋಗಿ ನೇತೃತ್ವದ ಸರ್ಕಾರವನ್ನು ಹೊರಹಾಕುವಂತೆ ರೈತರನ್ನು ಕೇಳಿದೆ.
ಕೃಷಿ ನಾಯಕ ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್ ಮತ್ತು ಹನ್ನಾನ್ ಮೊಲ್ಲಾ ಸೇರಿದಂತೆ ಎಸ್‌ಕೆಎಂ ನಾಯಕರು ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಇದರಲ್ಲಿ ಮೋದಿ ಸರ್ಕಾರವು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ರೈತರಿಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ. ಇತ್ತೀಚಿನ ಕೇಂದ್ರ ಬಜೆಟ್ ಕೃಷಿ ಸಬ್ಸಿಡಿಗಳನ್ನು ತೀವ್ರವಾಗಿ ಕಡಿತಗೊಳಿಸಿದ್ದು ರೈತ ಸಮುದಾಯಕ್ಕೆ ಏನೂ ಇಲ್ಲದಂತೆ ಮಾಡಿದೆ ಎಂದು ಆರೋಪಿಸಲಾಗಿದೆ.
ಯುಪಿ ಚುನಾವಣೆ: ರಾಕೇಶ್ ಟಿಕಾಯತ್ ಸಹೋದರ ಹೇಳಿದ್ದೇನು?
ಸೋಮವಾರ ಲಕ್ನೋದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್ ಅವರು,"ಅವರು ಹಿಜಾಬ್ ಸಮಸ್ಯೆಯತ್ತ ಗಮನ ಸೆಳೆಯುತ್ತಿದ್ದಾರೆ. ಆದರೆ ನಿಜವಾದ ಸಮಸ್ಯೆ ಹಿಸಾಬ್ (ಜವಾಬ್ದಾರಿ)" ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಶಾಲಾ ವಿದ್ಯಾರ್ಥಿನಿಯರ ವಿವಾದವನ್ನು ಸೃಷ್ಟಿಗೆ ಅನುಮತಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಮೋದಿ ಸರ್ಕಾರ ಡಿಸೆಂಬರ್ 9 ರಂದು ಲಿಖಿತ ಭರವಸೆ ನೀಡಿದ್ದರೂ, ರೈತರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಅದರ ಆಧಾರದ ಮೇಲೆ ಎಸ್‌ಕೆಎಂ ವಿವಿಧ ರಾಜ್ಯಗಳಲ್ಲಿ ತನ್ನ 13 ತಿಂಗಳ ಸುದೀರ್ಘ ಆಂದೋಲನವನ್ನು ಹಿಂಪಡೆದಿದೆ. ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸುವುದಾಗಿ, ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಸುಮಾರು 46,000 ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಮತ್ತು ಸುದೀರ್ಘ ಆಂದೋಲನದ ವೇಳೆ ಮೃತಪಟ್ಟ ರೈತರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ ಯಾವುದೇ ಒಂದು ಭರವಸೆಯನ್ನು ಈವರೆಗೂ ಈಡೇರಿಸಿಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕಾಗಿದೆ ಎಂದು ಟಿಕಾಯತ್ ಹೇಳಿದ್ದಾರೆ.
ಯೋಗಿಯನ್ನು ಪ್ರತಿಪಕ್ಷ ನಾಯಕನನ್ನಾಗಿ ನೋಡಬೇಕು: ಟಿಕಾಯತ್
ಇತ್ತ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವಾಗ ಸಮಿತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂಬುದು ಸರ್ಕಾರದ ನಿಲುವು. ಇದನ್ನು ಸರ್ಕಾರ ಫೆಬ್ರವರಿ 4 ರಂದು ಘೋಷಿಸಿದೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ನಂತರ ಕೇಂದ್ರವು ಕನಿಷ್ಟ ಬೆಂಬಲ ಬೆಲೆ (MSP) ಕುರಿತು ಸಮಿತಿಯನ್ನು ರಚಿಸುತ್ತದೆ ಎಂದು ಹೇಳಿದರು. ಕೇಂದ್ರವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ವಿಧಾನಸಭಾ ಚುನಾವಣೆಯ ನಂತರ ಸಮಿತಿಯ ರಚನೆಯನ್ನು ಘೋಷಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಒಡೆದು ಆಳುವ ನೀತಿ ನಡೆಯುವುದಿಲ್ಲ ಎಂದ ರಾಕೇಶ್ ಟಿಕಾಯತ್
ಡಿಸೆಂಬರ್ 2021 ರಲ್ಲಿ ಮೋದಿ ಸರ್ಕಾರ ಸುಮಾರು 14 ತಿಂಗಳ ವ್ಯಾಪಕ ಪ್ರತಿಭಟನೆಗೆ ಕಾರಣವಾದ ಮೂರು ಕೃಷಿ-ಸುಧಾರಣಾ ಕಾನೂನುಗಳನ್ನು ರದ್ದುಗೊಳಿಸಿತು. ಸರಿಸುಮಾರು ಅರ್ಧದಷ್ಟು ಭಾರತೀಯರಿಗೆ ಉದ್ಯೋಗ ನೀಡುವ ಕೃಷಿ ಕ್ಷೇತ್ರದಲ್ಲಿ ಮೋದಿ ಸರ್ಕಾರದ ಸುಧಾರಣೆಗಳಿಗೆ ಈ ಮೂರು ಕಾನೂನುಗಳು ಮೂಲಾಧಾರವಾಗಿವೆ.
ಇನ್ನೂ ಕೃಷಿ ಸಚಿವಾಲಯಕ್ಕೆ 2021-22ರ ಬಜೆಟ್‌ನಿಂದ ₹123017.57 ಕೋಟಿಗಳಿಂದ 2022-23ಕ್ಕೆ ₹124000 ಕೋಟಿಗೆ ಅಲ್ಪ ಏರಿಕೆ ಕಂಡಿದೆ. ಕೃಷಿ ಆದಾಯವನ್ನು ಹೆಚ್ಚಿಸಲು ಡ್ರೋನ್‌ಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪರಿಚಯಿಸಲು ಬಜೆಟ್ ಪ್ರಸ್ತಾಪಿಸಿದೆ. "ರೈತರು ತಮ್ಮ ಉತ್ಪನ್ನಗಳಿಗೆ ಮೂಲ ಬೆಲೆಗಳನ್ನು ಪಡೆಯದಿರುವಾಗ ಡ್ರೋನ್‌ಗಳನ್ನು ಹೇಗೆ ಖರೀದಿಸಬಹುದು?" ಎಂದು SKM ನಾಯಕ ಹನ್ನಾನ್ ಮೊಲ್ಲಾ ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದು, ಬಿಜೆಪಿ ಭರವಸೆಗಳನ್ನು ನೀಡಿ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications