ವಿಕಾಸ್ ದುಬೆ ಆಯ್ತು, ಉತ್ತರ ಪ್ರದೇಶದಲ್ಲಿ ಇನ್ನೊಬ್ಬ ರೌಡಿಯ ಎನ್ಕೌಂಟರ್
ಲಕ್ನೋ, ಜುಲೈ 10: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಕುಖ್ಯಾತ ರೌಡಿ ವಿಕಾಸ್ ದುಬೆ ಎನ್ಕೌಂಟರ್ ಬೆನ್ನಲ್ಲೇ, ಉತ್ತರಪ್ರದೇಶದ ಮತ್ತೋರ್ವ ರೌಡಿ ಶೀಟರ್ ಪನ್ನಾ ಯಾದವ್, ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.
Recommended Video
ಕಳೆದ ರಾತ್ರಿ (ಜು 9) ಸ್ಪೆಷಲ್ ಟಾಸ್ಕ್ ಫೋರ್ಸ್, ಬಹ್ರೈಚ್ ಜಿಲ್ಲೆಯ ಹದ್ರಿಯ, ಅಹಿರಾನಪುರ್ವ ಗ್ರಾಮದಲ್ಲಿ ನಡೆಸಿದ ಎನ್ಕೌಂಟರ್ ನಲ್ಲಿ ರೌಡಿ ಪನ್ನಾ ಯಾದವ್, ತೀವ್ರವಾಗಿ ಗಾಯಗೊಂಡಿದ್ದ.
ಕೂಡಲೇ ಅವನನ್ನು ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಯಿತಾದರೂ, ಆತ ಮೃತ ಪಟ್ಟಿದ್ದಾನೆ. "ಗೋರಖಪುರದ ನಿವಾಸಿಯಾಗಿದ್ದ ಪನ್ನಾ ಯಾದವ್ ಬಗ್ಗೆ ಸುಳಿವು ನೀಡಿದವರಿಗೆ, ಐವತ್ತು ಸಾವಿರ ರೂಪಾಯಿ ಬಹುಮಾನ ಘೋಷಣೆಯಾಗಿತ್ತು"ಎಂದು ಎಸ್ಪಿ ವಿಪಿನ್ ಮಿಶ್ರಾ ಹೇಳಿದ್ದಾರೆ.

"ಪನ್ನಾ ಯಾದವ್ ದರೋಡೆ, ಲೂಟಿ ಮತ್ತು ಸುಲಿಗೆ ಸೇರಿದಂತೆ, ಸುಮಾರು 36 ಪಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಉತ್ತರ ಪ್ರದೇದ ಅಜಂಗರ್, ಗೋರಖಪುರ, ಖೇರಿ, ಬಸ್ತಿ, ಮತ್ತು ಮಹಾರಾಜ್ ಗಂಜ್ ನಲ್ಲಿ ತನ್ನ ಚಟುವಟಿಕೆ ನಡೆಸುತ್ತಿದ್ದ" ಎಂದು ಪೊಲೀಸರು ಹೇಳಿದ್ದಾರೆ.
ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಕುಖ್ಯಾತ ಪಾತಕಿ ವಿಕಾಸ್ ದುಬೆಯನ್ನು ಪೊಲೀಸರು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಇದು ಅಸಲಿಯೋ, ನಕಲಿ ಎನ್ಕೌಂಟರೋ ಎನ್ನುವುದು ಭಾರೀ ಚರ್ಚೆಯ ವಿಷಯವಾಗಿದೆ.
ಉತ್ತರ ಪ್ರದೇಶವನ್ನು ಅಪರಾಧದ ಜಗತ್ತನ್ನಾಗಿ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾಧ್ರಾ ದೂರಿದ್ದಾರೆ. ವಿಕಾಸ್ ದುಬೆ ಎನ್ಕೌಂಟರ್ ಗೆ ಅವರ ಹುಟ್ಟೂರಾದ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ಸಿಹಿಹಂಚಿ ಸಂಭ್ರಮಿಸಲಾಗಿದೆ.












Click it and Unblock the Notifications