• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮ ಮಂದಿರ ನಿರ್ಮಾಣ; ದೇಣಿಗೆ ನೀಡುವವರಿಗೆ ಟ್ರಸ್ಟ್ ಮನವಿ

|

ಲಕ್ನೋ, ಫೆಬ್ರವರಿ 17; ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುವವರಿಗೆ ಟ್ರಸ್ಟ್ ಮನವಿಯೊಂದನ್ನು ಮಾಡಿದೆ. ಯಾವ ದಾನಿಗಳು ಸಹ ಬೆಳ್ಳಿಯ ಇಟ್ಟಿಗೆಯನ್ನು ದಾನವಾಗಿ ನೀಡಬಾರದು ಎಂದು ಮನವಿ ಮಾಡಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಜನರಿಗೆ ಈ ಮನವಿಯನ್ನು ನೀಡಿದೆ. ಬೆಳ್ಳಿಯ ಇಟ್ಟಿಗೆಗಳನ್ನು ಸಂಗ್ರಹ ಮಾಡಲು ಬ್ಯಾಂಕ್ ಲಾಕರ್‌ಗಳಲ್ಲಿ ಸ್ಥಳಾವಕಾಶವಿಲ್ಲ. ಆದ್ದರಿಂದ, ಇಟ್ಟಿಗೆ ನೀಡುವುದು ಬೇಡ ಎಂದು ಹೇಳಿದೆ.

ರಾಮ ಮಂದಿರ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಯಡಿಯೂರಪ್ಪ ಗರಂ

ಇದುವರೆಗೂ 400 ಕೆಜಿಗೂ ಅಧಿಕ ಬೆಳ್ಳಿಯ ಇಟ್ಟಿಗೆಗಳನ್ನು ದಾನವಾಗಿ ಸ್ವೀಕರಿಸಲಾಗಿದೆ. ದೇಶದ ವಿವಿಧ ಭಾಗಗಳ ದಾನಿಗಳು ಇನ್ನೂ ಬೆಳ್ಳಿ ಇಟ್ಟಿಗೆಗಳನ್ನು ನೀಡುತ್ತಿದ್ದಾರೆ. ಅವುಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ದಾನ ನೀಡಬೇಡಿ ಎಂದು ಮನವಿ ಮಾಡಲಾಗಿದೆ.

ರಾಮ ಮಂದಿರ ನಿರ್ಮಾಣ; ಸಿದ್ದರಾಮಯ್ಯ ಸಹೋದರನಿಂದ ದೇಣಿಗೆ

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯ ಡಾ. ಅನಿಲ್ ಮಿಶ್ರಾ ಈ ಕುರಿತು ಹೇಳಿಕೆ ನೀಡಿದ್ದಾರೆ. "ದೇಶವ ವಿವಿಧ ರಾಜ್ಯಗಳ ಜನರು ಬೆಳ್ಳಿ ಇಟ್ಟಿಗೆಗಳನ್ನು ಕಳುಹಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣ: ಅತಿಹೆಚ್ಚು ದೇಣಿಗೆ ನೀಡಿದವರ ಪಟ್ಟಿ

"ಶ್ರೀ ರಾಮ ಭಕ್ತರ ಭಾವನೆಗೆ ನಾವು ಬೆಲೆ ಕೊಡುತ್ತೇವೆ. ಆದರೆ, ಬೆಳ್ಳಿ ಇಟ್ಟಿಗೆಗಳನ್ನು ಕಳಿಸಬೇಡಿ. ಅದನ್ನು ಸುರಕ್ಷಿತವಾಗಿ ಸಂಗ್ರಹ ಮಾಡಲು ನಾವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.

ಇದುವರೆಗೂ 1,600 ಕೋಟಿ ನಗದನ್ನು ದೇಣಿಗೆಯಾಗಿ ಪಡೆಯಲಾಗಿದೆ. ಹಣವನ್ನು ಟ್ರಸ್ಟ್ ಹೆಸರಿಗೆ ವರ್ಗಾವಣೆ ಮಾಡಿ ಅಥವ ಚೆಕ್ ಮೂಲಕ ದೇಣಿಗೆ ಪಡೆಯಿರಿ ಎಂದು ದೇಣಿಗೆ ಪಡೆಯುತ್ತಿರುವ ಗುಂಪುಗಳಿಗೆ ಸೂಚಿಸಲಾಗಿದೆ.

1,50,000 ಗುಂಪುಗಳು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುತ್ತಿವೆ. 39 ತಿಂಗಳಿನಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ.

English summary
Shri Ram Janmabhoomi Tirtha Kshetra Trust asked donors to not contribute silver bricks. The request has been made because bank lockers have no space to store them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X