ಭ್ರಷ್ಟಾಚಾರಿ ನಂಬರ್ 1 ಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯ : ಮೋದಿ

ಲಕ್ನೋ, ಮೇ 05 : 'ಭ್ರಷ್ಟಾಚಾರಿ ನಂ 1 ಹಣೆಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಯಿತು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶನಿವಾರ 5ನೇ ಹಂತದ ಲೋಕಸಭಾ ಚುಣಾವಣಾ ಪ್ರಚಾರಕ್ಕೆ ಕೊನೆಯ ದಿನ. ಉತ್ತರ ಪ್ರದೇಶದ ಲಕ್ನೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

'ನಿಮ್ಮ ತಂದೆ ಮಿಸ್ಟರ್ ಕ್ಲೀನ್ ಎಂದು ನಿಮ್ಮ ಕುಟುಂಬಕ್ಕೆ ಆಪ್ತರಾಗಿರುವವರು ಹೇಳುತ್ತಾರೆ. ಆದರೆ, ನಿಮ್ಮ ತಂದೆಯ ಬದುಕು ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು' ಎಂದು ನರೇಂದ್ರ ಮೋದಿ ಟೀಕಿಸಿದರು.

Rahul Gandhi your fathers life ended as corrupt no 1 says PM Modi

ರಾಜೀವ್ ಗಾಂಧಿ 1980ರಲ್ಲಿ ಪ್ರಧಾನಿಯಾಗಿದ್ದಾಗ ನಡೆದ ಬೋಫೋರ್ಸ್ ಹಗರಣ ಬಗ್ಗೆ ಪ್ರಸ್ತಾಪಿಸಿದ ನರೇಂದ್ರ ಮೋದಿ ಅವರು, 'ಸ್ವಿಡೀಶ್ ಮೂಲದ ಬೋಫೋರ್ಸ್ ಕಂಪನಿಯಿಂದ ದೊಡ್ಡ ಮೊತ್ತದ ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆಯಲಾಗಿತ್ತು' ಎಂಬ ಮಾತನ್ನು ಉಲ್ಲೇಖಿಸಿದರು.

'ನನ್ನ ವರ್ಚಸ್ಸನ್ನು ಹಾಳು ಮಾಡುವ ಮೂಲಕ ಈ ಜನರು ದೇಶದಲ್ಲಿ ಅಸ್ಥಿರ, ಸದೃಢವಲ್ಲದ ಸರ್ಕಾರವನ್ನು ರಚನೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

'ನಾಮ್‌ಧಾರ್‌ಗಳು ಸ್ಪಷ್ಟವಾಗಿ ಕೇಳಿಸಿಕೊಳ್ಳಿ. ನರೇಂದ್ರ ಮೋದಿ ಅವರು ಚಿನ್ನದ ಚಮಚದೊಂದಿಗೆ ಜನಿಸಿಲ್ಲ. ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿಲ್ಲ' ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+