'ಯುಪಿ ಯುವಕರಿಗೆ ಉದ್ಯೋಗ ಹೇಗೆ ಕೊಡಿಸುತ್ತೇವೆಂದು ಪ್ರಣಾಳಿಕೆಯಲ್ಲಿದೆ' ರಾಹುಲ್ ಗಾಂಧಿ

ಲಕ್ನೋ ಜನವರಿ 21: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪಕ್ಷವು ಯುವಕರು ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಶೇಕಡಾ 40 ರಷ್ಟು ಟಿಕೆಟ್‌ಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಉಭಯ ನಾಯಕರು ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕಾಂಗ್ರೆಸ್ ಪಕ್ಷದ ಇಬ್ಬರೂ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಅಪರೂಪದ ಸಂದರ್ಭಗಳಲ್ಲಿ ಇದೂ ಕೂಡ ಒಂದಾಗಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಕಾಂಗ್ರೆಸ್​ ಪಕ್ಷವು ಯುವಕರು ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಕಣಕ್ಕೆ ಕಾಲಿಟ್ಟಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ 'ಮಹಿಳಾ ಅಸ್ತ್ರ' ಪ್ರಯೋಗಕ್ಕೆ ಮುಂದಾಗಿರುವ ಕಾಂಗ್ರೆಸ್ ಪಕ್ಷದ ಯುವ ಪ್ರಣಾಳಿಕೆ ಭಿನ್ನವಾಗಿದೆ.

ಉದ್ಯೋಗ ಹೇಗೆ ಕೊಡುತ್ತೇವೆಂದು ವಿವರಿಸಿದ ಪ್ರಿಯಾಂಕಾ ಗಾಂಧಿ

ಉದ್ಯೋಗ ಹೇಗೆ ಕೊಡುತ್ತೇವೆಂದು ವಿವರಿಸಿದ ಪ್ರಿಯಾಂಕಾ ಗಾಂಧಿ

ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಇದು ಯುವಜನರಿಗೆ ವಿಷನ್ ಡಾಕ್ಯುಮೆಂಟ್ ಆಗಿದ್ದು, ಯುಪಿಯ ಯುವಜನರೊಂದಿಗೆ ಮಾತನಾಡಿ ಮತ್ತು ಸಂವಾದ ನಡೆಸಿದ ನಂತರ ಪ್ರಣಾಳಿಕೆ ತಯಾರಿಸಲಾಗಿದೆ. ಉದ್ಯೋಗಗಳನ್ನು ಪಡೆಯಲು ಅವರು ಎದುರಿಸುತ್ತಿರುವ ಕಷ್ಟಗಳು ಮತ್ತು ಅವರ ಸಮಸ್ಯೆಗಳೇನು ಎಂಬುದನ್ನು ನಾವು ನೋಡಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳು ಬಂದು ಉದ್ಯೋಗ ಭರವಸೆ ನೀಡುತ್ತವೆ. 25 ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆ ನೀಡುತ್ತಾರೆ. ಆದರೆ ಅವರು ಅದನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಯಾರೂ ವಿವರವಾಗಿ ವಿವರಿಸುವುದಿಲ್ಲ. ಈ ಯುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅದೆಲ್ಲವನ್ನು ವಿವರಿಸಿದೆ.

ಇಂದು ಯುಪಿಯಲ್ಲಿ ಯುವಕರು ಉದ್ಯೋಗ ಪಡೆಯುವಲ್ಲಿ ಅಪಾರ ತೊಂದರೆ ಎದುರಿಸುತ್ತಿದ್ದಾರೆ. ಅವರು ಅರ್ಹರಾಗಿದ್ದೂ ನಿರುದ್ಯೋಗಿಗಳಾಗಿದ್ದಾರೆ. ಅವರು ಬಯಸಿದ ಮತ್ತು ಅಗತ್ಯವಿರುವ ಉದ್ಯೋಗವನ್ನು ಪಡೆಯಲು ನಾವು ಅವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ.ಅಷ್ಟೇ ಅಲ್ಲ, ಪರೀಕ್ಷೆಯ ವಿಷಯದಲ್ಲಿ ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುತ್ತಿದ್ದೇವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿದ್ದೇವೆ ಎಂದರು.

ಪ್ರಣಾಳಿಕೆಯಲ್ಲಿ ಯುವಕರಿಗೆ ಆತ್ಮವಿಶ್ವಾಸ

ಪ್ರಣಾಳಿಕೆಯಲ್ಲಿ ಯುವಕರಿಗೆ ಆತ್ಮವಿಶ್ವಾಸ

ಇತ್ತೀಚೆಗೆ ಯುವಕರ ಉತ್ಸಾಹ ಕಡಿಮೆಯಾಗುತ್ತಿದೆ. ನಾವು ಅವರ ಆತ್ಮವಿಶ್ವಾಸವನ್ನು ಹೇಗೆ ಪುನಃಸ್ಥಾಪಿಸುತ್ತೇವೆ, ಉದ್ಯೋಗವನ್ನು ಒದಗಿಸುವಲ್ಲಿ ನಾವು ಹೇಗೆ ಸಹಾಯ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಇದು ಯುವಕರಿಗೆ ಭರವಸೆಯನ್ನು ನೀಡುತ್ತದೆ. ನಮ್ಮ ನೇಮಕಾತಿ ಶಾಸನದಲ್ಲಿ ಐದು ವಿಭಾಗಗಳಿವೆ. ಇದರಲ್ಲಿ ಯುವಕರ ವಿವಿಧ ಸಮಸ್ಯೆಗಳನ್ನು ಕೇಂದ್ರೀಕರಿಸಲಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪ್ರೌಢ, ಉನ್ನತ ಶಿಕ್ಷಣ, ಪೊಲೀಸ್ ಇತ್ಯಾದಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಸಂಸ್ಕೃತ, ಉರ್ದು ಶಿಕ್ಷಕರ ಅಂಗನವಾಡಿ, ಆಶಾ ಮತ್ತಿತರ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯಲ್ಲಿ ಕಳೆದುಹೋದ ನಂಬಿಕೆಯನ್ನು ಪುನಃಸ್ಥಾಪಿಸಲು, ಎಲ್ಲಾ ಪರೀಕ್ಷಾ ನಮೂನೆಗಳ ಶುಲ್ಕವನ್ನು ಮನ್ನಾ ಮಾಡಲಾಗುವುದು ಮತ್ತು ಬಸ್, ರೈಲು ಪ್ರಯಾಣ ಉಚಿತವಾಗಿರುತ್ತದೆ. ಪರೀಕ್ಷೆಗಳು ಮತ್ತು ವೇಳಾಪಟ್ಟಿಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಉದ್ಯೋಗ ಕ್ಯಾಲೆಂಡರ್ ಅನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ. ಇದು ಬಹಳ ಮುಖ್ಯವಾದ ವಿಷಯ ಮತ್ತು ಇದು ತುಂಬಾ ಅವಶ್ಯಕವಾಗಿದೆ ಎಂದರು.

ಮಾದಕ ವ್ಯಸನ ಶಿಬಿರಗಳ ಸ್ಥಾಪನೆ

ಮಾದಕ ವ್ಯಸನ ಶಿಬಿರಗಳ ಸ್ಥಾಪನೆ

ನಾವು ಲಕ್ನೋದಲ್ಲಿ ಶಿಬಿರಗಳು ಮತ್ತು ಕೇಂದ್ರವನ್ನು ಸ್ಥಾಪಿಸುತ್ತೇವೆ. ಅಲ್ಲಿ ಮಾದಕ ವ್ಯಸನ ಮತ್ತು ಮದ್ಯದ ವ್ಯಸನಿಗಳಿಗೆ ಸಲಹೆ ನೀಡಲಾಗುತ್ತದೆ. ಅಗತ್ಯವಿರುವ ಯುವಕರಿಗೆ ನೆರವು ನೀಡಲು ರಾಜ್ಯದ ವಿವಿಧೆಡೆ ಮಾದಕ ವ್ಯಸನ ಶಿಬಿರಗಳನ್ನು ಸ್ಥಾಪಿಸಲಾಗುವುದು. ಉತ್ತರ ಪ್ರದೇಶದಲ್ಲಿ ವಾರ್ಷಿಕವಾಗಿ ಯುವಜನೋತ್ಸವವನ್ನು ಆಯೋಜಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ವಾದ್ರಾ ಯುವಕರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.

ಪಕ್ಷ ಉದ್ಯೋಗಗಳನ್ನು ಹೇಗೆ ನೀಡುತ್ತದೆ? ಪ್ರಣಾಳಿಕೆಯಲ್ಲಿ ಉಲ್ಲೇಖ

ಪಕ್ಷ ಉದ್ಯೋಗಗಳನ್ನು ಹೇಗೆ ನೀಡುತ್ತದೆ? ಪ್ರಣಾಳಿಕೆಯಲ್ಲಿ ಉಲ್ಲೇಖ

ಇನ್ನೂ ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷ ಜನರಿಗೆ ಉದ್ಯೋಗಗಳನ್ನು ಹೇಗೆ ನೀಡುತ್ತದೆ ಎಂಬುದನ್ನು ನಾವು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನರಿಗೆ ಉದ್ಯೋಗ ನೀಡುವುದು ಹೇಗೆ ಎಂದು ಹೇಳಿದ್ದೇವೆ. ಯುಪಿಗಾಗಿ ಈ ಯುವ ಪ್ರಣಾಳಿಕೆಯ ಹಿಂದಿನ ಚಿಂತನೆಯು ನಾವು ಯುವಕರಿಗೆ ಉದ್ಯೋಗಗಳನ್ನು ನೀಡಲು ಹೇಗೆ ಯೋಜಿಸುತ್ತಿದ್ದೇವೆ ಎಂಬುದನ್ನು ವಿವರಿಸುವುದಾಗಿದೆ. ನಾವು ಈ ಅನೇಕ ಉದ್ಯೋಗಗಳನ್ನು ನೀಡುತ್ತೇವೆ ಎಂಬ ಉದ್ಯೋಗಗಳ ಭರವಸೆ ಮಾತ್ರವಲ್ಲ, ಆ ಉದ್ಯೋಗಗಳನ್ನು ನಾವು ಹೇಗೆ ನೀಡುತ್ತೇವೆ ಎಂಬುದರ ವಿವರವಾಗಿ ಉಲ್ಲೇಖಿಸಿದ್ದೇವೆ.

ಎಲ್ಲಾ ಕೆಲಸಗಳು ಕೈಗಾರಿಕೋದ್ಯಮಿಗಳ ಪಾಲು

ಎಲ್ಲಾ ಕೆಲಸಗಳು ಕೈಗಾರಿಕೋದ್ಯಮಿಗಳ ಪಾಲು

ಉದ್ಯೋಗ ಸೃಷ್ಟಿಯನ್ನು ಮರೆತು ಇಂದು ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಯುಪಿಯಲ್ಲಿ ಪ್ರತಿ ಗಂಟೆಗೆ 880 ಯುವಕರು ಉದ್ಯೋಗ ಕಳೆದುಕೊಳ್ಳುತ್ತಾರೆ. ಏಕೆಂದರೆ ಎಲ್ಲಾ ಕೆಲಸಗಳನ್ನು 2-3 ಕೈಗಾರಿಕೋದ್ಯಮಿಗಳಿಗೆ ನೀಡಲಾಗುತ್ತಿದೆ. ಹಾಗಾಗಿ, ನಾವು ನಿಮಗೆ ಉದ್ಯೋಗಗಳನ್ನು ಹೇಗೆ ಸೃಷ್ಟಿಸಬಹುದು ಎಂದು ಯುಪಿಯ ಯುವಕರೊಂದಿಗೆ ಮಾತನಾಡಿದ ನಂತರ ಕಾಂಗ್ರೆಸ್ ಈ ಪ್ರಣಾಳಿಕೆಯನ್ನು ರಚಿಸಿದೆ. ನಾವು ಜನರ ನಡುವೆ ದ್ವೇಷ ಹರಡುವುದಿಲ್ಲ. ಸಮಾಜದಲ್ಲಿ ಶಾಂತಿ ಕಾಪಾಡುವುದು, ಯುವಕರು ಮತ್ತು ರಾಜ್ಯದ ಬೆಳವಣಿಗೆಯನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ ಎಂದರು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+