ಲೋಕಸಭಾ ಚುನಾವಣೆ ಸೋಲಿನ ನಂತರ ಮೊದಲ ಬಾರಿಗೆ ಅಮೇಥಿಗೆ ರಾಹುಲ್ ಭೇಟಿ
Recommended Video
ಅಮೇಥಿ (ಉತ್ತರಪ್ರದೇಶ), ಜುಲೈ 10: ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಮೊದಲ ಬಾರಿಗೆ ಅಮೇಥಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಭೇಟಿ ನೀಡಿದರು. ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಿದ್ದರು.
ರಾಹುಲ್ ಗಾಂಧಿ ಗೌರಿಗಂಜ್ ಗೆ ತೆರಳಿ, ತಿಲೋಯ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಾತಾ ಪ್ರಸಾದ್ ವೈಶ್ ಮನೆಗೆ ಭೇಟಿ ನೀಡಿದರು. ಅವರ ಸಂಬಂಧಿಕರು ಜೂನ್ ಇಪ್ಪತ್ತೈದರಂದು ಮೃತ ಪಟ್ಟಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆ ನಂತರ ಪಕ್ಷದ ಪದಾಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿದರು.
ಇದೇ ವೇಳೆ ಸಲೋನ್, ಅಮೇಥಿ, ಗೌರಿಗಂಜ್, ಜಗದೀಶ್ ಪುರ್ ಹಾಗೂ ತಿಲೋಯ್ ವಿಧಾನಸಭಾ ಕ್ಷೇತ್ರಗಳ ಬೂತ್ ಅಧ್ಯಕ್ಷರನ್ನು ಭೇಟಿ ಆಗಲಿದ್ದಾರೆ. ಕೆಲವು ಹಳ್ಳಿಗಳಿಗೂ ಭೇಟಿ ನೀಡಲಿದ್ದಾರೆ ಎಂದು ವಕ್ತಾರ ಅನಿಲ್ ಸಿಂಗ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಸೋಲಿನ ನಂತರ ಅವರ ಪ್ರತಿನಿಧಿ ಚಂದ್ರಶೇಖರ್ ದುಬೆ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಂದ್ರ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ರಾಹುಲ್ ಗಾಂಧಿ ಗೆಲ್ಲುತ್ತಾ ಬಂದಿದ್ದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಅವರು ಐವತ್ತೆರಡು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.












Click it and Unblock the Notifications