ವೀಕ್ಷಿಸಿ: ಮಗನಿಗೆ ಜಾಮೀನು ಬಗ್ಗೆ ಪ್ರಶ್ನೆ: ಕೇಂದ್ರ ಸಚಿವರ ಪ್ರತಿಕ್ರಿಯೆ ಏನು?
ಲಖಿಂಪುರ ಫೆಬ್ರವರಿ 11: ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ನ್ಯಾಯಾಲಯ ಜಾಮೀನು ನೀಡಿರುವ ಬಗ್ಗೆ ಇಂದು ಬೆಳಗ್ಗೆ ಸುದ್ದಿಗಾರರು ಕೇಳಿದಾಗ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಕ್ಯಾಮರಾಗಳಿಗೆ ಮುಗುಳ್ನಕ್ಕು ಏನೂ ಹೇಳದೆ ತೆರಳಿದ್ದಾರೆ.
ಅಜಯ್ ಮಿಶ್ರಾ ಲಖಿಂಪುರದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಚುನಾವಣೆಯ ಮಧ್ಯದಲ್ಲಿ ತನ್ನ ಕೊಲೆ ಆರೋಪಿ ಮಗನಿಗೆ ಜಾಮೀನು ನೀಡಿರುವ ಬಗ್ಗೆ ಪ್ರತಿಪಕ್ಷಗಳ ದಾಳಿಗೆ ಪ್ರತಿಕ್ರಿಯಿಸುವಂತೆ NDTV ಕೇಳಿಕೊಂಡಿದೆ. ಆದರೆ ಸಚಿವರು ಮುಗುಳ್ನಕ್ಕು ತಮ್ಮ ಕಾರನ್ನು ಹತ್ತಿ ದಿನದ ಪ್ರಚಾರ ಆರಂಭಿಸಿದರು.
ಲಖಿಂಪುರ ಪ್ರಕರಣ: ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು
ಅಜಯ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಅವರ ಮಗನ ಮೇಲಿನ ಆರೋಪಗಳ ಮೇಲೆ ಅಜಯ್ ಮಿಶ್ರಾ ಅವರನ್ನು ಪದಚ್ಯುತಗೊಳಿಸುವಂತೆ ವಿಪಕ್ಷಗಳ ಹಾಗೂ ರೈತರ ಕರೆಗಳ ಹೊರತಾಗಿಯೂ ಅವರು ಹಾಗೆಯೇ ಅಧಿಕಾರದಲ್ಲಿ ಉಳಿದಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ನೇಪಾಳದ ಗಡಿಯಲ್ಲಿರುವ ಲಖಿಂಪುರದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು ಎಂದು ನಂಬಲಾಗಿದೆ.

Tried asking @ajaymishrteni about the propriety of his son getting bail . He did not answer . Kept smiling … pic.twitter.com/ELC124X14e
— Alok Pandey (@alok_pandey) February 11, 2022
ಈ ವೇಳೆ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಮಧ್ಯೆ ಶರವೇಗದಲ್ಲಿ ಕಾರು ನುಗ್ಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಆಶಿಶ್ ಮಿಶ್ರಾ ಎಸ್‌ಯುವಿ ಕಾರನ್ನು ಓಡಿಸುತ್ತಿದ್ದರು ಎಂದು ಹೇಳಲಾಗಿದ್ದರೂ, ಅವರು ಮತ್ತು ಅವರ ತಂದೆ ಅದನ್ನು ನಿರಾಕರಿಸಿದ್ದಾರೆ.
ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇದಾದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಬಿಜೆಪಿ ಬೆಂಗಾವಲು ಪಡೆಯಲ್ಲಿದ್ದವರನ್ನು ಹಿಂಬಾಲಿಸಿ ಥಳಿಸಿದ್ದಾರೆ. ಈ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಬಳಿಕ ಸುಮಾರು ದಿನಗಳು ಕಳೆದರು ಆರೋಪಿಯನ್ನು ವಿಚಾರಣೆಗೆಗಾಗಿ ವಶಕ್ಕೆ ಪಡೆದುಕೊಳ್ಳುವುದಾಗಲಿ ನಡೆದಿರಲಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ ಪೊಲೀಸರು ಮತ್ತು ಯುಪಿ ಆಡಳಿತ ಪ್ರಕರಣ ನಿಧಾನಗತಿಯ ಪ್ರತಿಕ್ರಿಯೆಯ ಬಗ್ಗೆ ನಿಂದಿಸಿತು. ಕೆಲವು ದಿನಗಳ ನಂತರ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಯಿತು.
ಪ್ರಕರಣದಲ್ಲಿ ಸಚಿವ ಅಜಯ್ ಮಿಶ್ರಾ ಅವರ ಪಾತ್ರವಿದೆ ಎಂದು ರೈತರಪರ ಸಂಘಟನೆಗಳು ಹಾಗೂ ವಿಪಕ್ಷಗಳು ಅಜಯ್ ಮಿಶ್ರಾ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರು. ಜೊತೆಗೆ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತಾದರೂ ಸರ್ಕಾರ ಈ ಬಗ್ಗೆ ಯಾವುದೇ ಮಾತನಾಡಿಲ್ಲ. ಹೀಗಾಗಿ ಬಿಜೆಪಿ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಬಿಜೆಪಿ ಮೇಲೆ ಇದು ಪರಿಣಾಮ ಬೀರಲಿದೆಯೇ ಎಂದು ಕಾದು ನೋಡಬೇಕಿದೆ.












Click it and Unblock the Notifications