• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉ.ಪ್ರ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ: ಪ್ರಿಯಾಂಕಾ ಗಾಂಧಿ

|
Google Oneindia Kannada News

ಲಕ್ನೋ, ನವೆಂಬರ್ 15: ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಏಕಾಂಗಿಯಾಗಿಯೇ ಸ್ಪರ್ಧಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇತರ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕಿದಾಗ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭಾನುವಾರದ ಹೇಳಿಕೆಯಲ್ಲಿ ಇದು ಚೆನ್ನಾಗಿ ಪ್ರತಿಫಲಿಸುತ್ತದೆ.

 ಯೋಗಿ ಕ್ಷೇತ್ರದಲ್ಲಿ ಕೃಷಿ ಸಾಲ ಮನ್ನಾದ ಭರವಸೆ ನೀಡಿದ ಪ್ರಿಯಾಂಕಾ ಯೋಗಿ ಕ್ಷೇತ್ರದಲ್ಲಿ ಕೃಷಿ ಸಾಲ ಮನ್ನಾದ ಭರವಸೆ ನೀಡಿದ ಪ್ರಿಯಾಂಕಾ

ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇತರ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಿರುವ ಐಎಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭಾನುವಾರದ ಹೇಳಿಕೆಯಲ್ಲಿಯೇ ಇದು ಚೆನ್ನಾಗಿ ಪ್ರತಿಫಲಿಸುತ್ತಿದೆ.

ಈ ಹಿಂದಿನ ಅನುಭವದಿಂದ ಪಾಠ ಕಲಿತಿರುವುದರಿಂದ ಯಾವುದೇ ಪ್ರಮುಖ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕಳೆದ ತಿಂಗಳು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದರು.

ಬುಲಂದರ್ ಶಹರ್ ನಲ್ಲಿ ಭಾನುವಾರ ನಡೆದ ಪಕ್ಷದ ಸಭೆಯೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಗಾಂಧಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಾತ್ರ ನಾವು ನಾಮನಿರ್ದೇಶನ ಮಾಡುತ್ತೀವಿ. ಒಂದು ವೇಳೆ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಅದು ತನ್ನ ಸ್ವಂತ ಸಾಮರ್ಥ್ಯದಿಂದ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಬಿಎಸ್‌ಪಿಯೂ ಮೈತ್ರಿಯಿಂದ ದೂರ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ನಮಗೆ ಯಾವುದೇ ಪಕ್ಷದ ನೆರವು ಬೇಕಿಲ್ಲ, ನಾವು ಸಮಾಜದ ಎಲ್ಲಾ ವಿಭಾಗದ ಜನತೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಅದು ಶಾಶ್ವತ ಮೈತ್ರಿ. ಈ ಮೈತ್ರಿಯೊಂದಿಗೇ ನಾವು 2007ರಂತೆಯೇ ಈ ಬಾರಿಯೂ ಬಹುಮತದೊಂದಿಗೆ ಗೆಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧವೂ ಹರಿಹಾಯ್ದಿದ್ದಾರೆ. ಮತ್ತೊಂದೆಡೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಿರುದ್ಧ ಮತ್ತೆ ಗುಡುಗಿದ್ದಾರೆ.

ಲಖಿಂಪುರ್ ಖೇರಿ ಪ್ರಕರಣದಲ್ಲಿ ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ಸುಪ್ರೀಂ ನೀಡಿರುವ ಆದೇಶದ ಬಗ್ಗೆ ಮಾತನಾಡಿರುವ ಅಖಿಲೇಶ್ ಸುಪ್ರೀಂಕೋರ್ಟ್‌ಗೆಬಿಜೆಪಿ ಬಗ್ಗೆ ನಂಬಿಕೆ ಇಲ್ಲ. ದೆಹಲಿ, ಲಕ್ನೋ ಹಾಗೂ ಲಖಿಂಪುರ ಖೇರಿಯ ಬಿಜೆಪಿ ಇಂಜಿನ್‌ಗಳು ಸೇರಿಕೊಂಡು ನ್ಯಾಯಾಂಗವನ್ನೇ ಹಾಳುಮಾಡಲು ಯತ್ನಿಸುತ್ತಿವೆ ಎಂದರು.

ದಲಿತರು ಹಾಗೂ ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್ ನಾಯಕರನ್ನು ಸಮಾಜವಾದಿ ಪಕ್ಷವು ಅವಹೇಳನ ಮಾಡಿದೆ ಎಂದು ಮಾಯಾವತಿ ಈ ಹಿಂದೆ ಆರೋಪಿಸಿದ್ದರು.

ಈ ವರ್ಗಗಳ ಜನರು ಅಖಿಲೇಶ್ ಯಾದವ್ ಅವರ ಪಕ್ಷದಿಂದ ಏನ್ನನೂ ನಿರೀಕ್ಷಿಸಬಾರದು ಎಂದು ಹೇಳಿದ್ದರು. ಜಾತಿಯ ದ್ವೇಷ ರಾಜಕಾರಣದಿಂದ ರಾಜ್ಯದಲ್ಲಿ ಅನೇಕ ಸಂಸ್ಥೆಗಳು ಹಾಗೂ ಯೋಜನೆಗಳ ಹೆಸರನ್ನು ಬದಲಿಸಲಾಗಿದೆ ಎಂದಿದ್ದರು. ದಲಿತರು ಹಾಗೂ ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್ ಸಂತರು, ಗುರುಗಳು ಹಾಗೂ ಮಹಾಪುರುಷರನ್ನು ಎಸ್‌ಪಿ ಮೊದಲಿನಿಂದಲೂ ಅವಹೇಳನ ಮಾಡುತ್ತಿದೆ.

ಫೈಜಾಬಾದ್‌ ಜಿಲ್ಲೆಯ ಹೊರಗೆ ರಚಿಸಲಾದ ಹೊಸ ಅಂಬೇಡ್ಕರ್ ನಗರ ಜಿಲ್ಲೆಯು ತಾಜಾ ಉದಾಹರಣೆ. ಸಂತ ರವಿದಾಸ ನಗರದಿಂದ ಭದೋಹಿ ಎಂಬ ಹೊಸ ಜಿಲ್ಲೆಯನ್ನು ರಚಿಸುವುದನ್ನು ಅವರು ವಿರೋಧಿಸಿದರು ಹಾಗೂ ಅದರ ಹೆಸರನ್ನೂ ಬದಲಿಸಿದರು ಎಂದು ಹೇಳಿದ್ದಾರೆ.

   T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada
   ಪ್ರಿಯಾಂಕಾ ಗಾಂಧಿ
   Know all about
   ಪ್ರಿಯಾಂಕಾ ಗಾಂಧಿ
   English summary
   Congress seems to come to terms with the reality that no political outfit was interested in stitching an alliance with it.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X