ನಾಡಿದ್ದು ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ ಸಾಧ್ಯತೆ: ಸಾರಿಗೆ ನಿಗಮ ನೌಕರರ ಮುಷ್ಕರದ ಬಗ್ಗೆ ನೀವು ತಿಳಿಯಬೇಕಾದ 10 ಪ್ರಮುಖಾಂಶಗಳು

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟಗಳು ಜಂಟಿಯಾಗಿ ಮೇ 20ರಿಂದ (ಬುಧವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದ್ದು, ಸಾರ್ವಜನಿಕರಿಗೆ ಭಾರಿ ತೊಂದರೆಯಾಗುವ ಆತಂಕ ಎದುರಾಗಿದೆ.

ಈ ಮುಷ್ಕರ ಹಾಗೂ ಸರ್ಕಾರದ ಇಂದಿನ ನಿರ್ಧಾರಗಳ ಕುರಿತು ನೀವು ತಿಳಿಯಬೇಕಾದ 10 ಪ್ರಮುಖಾಂಶಗಳು ಇಲ್ಲಿವೆ.

* ಬುಧವಾರದಿಂದ ಬಸ್ ಸೇವೆ ಬಂದ್ ಸಾಧ್ಯತೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುತ್ತಿದ್ದಾರೆ. ಇದರಿಂದಾಗಿ ಬುಧವಾರದಿಂದಲೇ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಸಂಚಾರದಲ್ಲಿ ಭಾರಿ ವ್ಯತ್ಯಯವಾಗುವ ಭೀತಿ ಎದುರಾಗಿದೆ.

Strike

* ನೌಕರರ ಒಕ್ಕೂಟಗಳ ಒಗ್ಗಟ್ಟು: ಸಾರಿಗೆ ನೌಕರರ ವಿವಿಧ ಒಕ್ಕೂಟಗಳು ಜಂಟಿಯಾಗಿ ಈ ಪ್ರತಿಭಟನೆ ಮತ್ತು ಮುಷ್ಕರಕ್ಕೆ ಕರೆ ನೀಡಿರುವುದರಿಂದ, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಳ್ಳುವ ಮುನ್ಸೂಚನೆ ಸಿಕ್ಕಿದೆ.

* ವೇತನ ಪರಿಷ್ಕರಣೆಗೆ ನೌಕರರ ಪಟ್ಟು: ನೌಕರರು ತಮಗೆ ಶೇಕಡಾ 25ರಷ್ಟು ವೇತನ ಪರಿಷ್ಕರಣೆ ಮಾಡಲೇಬೇಕು ಹಾಗೂ ಕಳೆದ 38 ತಿಂಗಳ ವೇತನದ ಹಿಂಬಾಕಿಯನ್ನು (Arrears) ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

* ಸರ್ಕಾರದ ಪ್ರಸ್ತಾಪ: ನೌಕರರ ಬೇಡಿಕೆಗೆ ಪ್ರತಿಯಾಗಿ ರಾಜ್ಯ ಸರ್ಕಾರವು ಸದ್ಯಕ್ಕೆ ಶೇ. 12.5 ರಷ್ಟು ವೇತನ ಪರಿಷ್ಕರಣೆ ಮಾಡಲು ಒಪ್ಪಿಗೆ ಸೂಚಿಸಿದೆ.

* ಸರ್ಕಾರದಿಂದ ಹಣ ಬಿಡುಗಡೆ: ಬಾಕಿ ಉಳಿದಿರುವ 26 ತಿಂಗಳ ವೇತನ ಹಿಂಬಾಕಿಯ ಮೊದಲ ಕಂತಿನ ರೂಪದಲ್ಲಿ 450 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಸರ್ಕಾರ ತಿಳಿಸಿದೆ.

ರಾಜ್ಯದ 8 ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ
ರಾಜ್ಯದ 8 ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ

* ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ: ಸರ್ಕಾರದ ಈ ಸದ್ಯದ ಕೊಡುಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೌಕರರ ಸಂಘಟನೆಗಳು, ತಮ್ಮ ಮೂಲ ಬೇಡಿಕೆಗಳು ಸಂಪೂರ್ಣ ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿವೆ.

* ಖಾಕಿ ಮತ್ತು ಖಡಕ್ ಎಚ್ಚರಿಕೆ: ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಬುಧವಾರದ ಮುಷ್ಕರದಲ್ಲಿ ಯಾವುದೇ ಸಿಬ್ಬಂದಿ ಭಾಗಿಯಾಗದಂತೆ ಹಾಗೂ ಪ್ರತಿಭಟನೆಗೆ ಬೆಂಬಲ ನೀಡದಂತೆ ಕಟ್ಟುನಿಟ್ಟಿನ ಕಠಿಣ ಆದೇಶ ಹೊರಡಿಸಿದೆ.

* 'ನೋ ವರ್ಕ್ ನೋ ಪೇ' ಅಸ್ತ್ರ: ಬುಧವಾರ ಕೆಲಸಕ್ಕೆ ಹಾಜರಾಗದ ಸಿಬ್ಬಂದಿಗೆ 'ಕೆಲಸವಿಲ್ಲದಿದ್ದರೆ ವೇತನವಿಲ್ಲ' (No Work No Pay) ಎಂಬ ನಿಯಮವನ್ನು ಅನ್ವಯಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

* ರಜೆಗಳು ರದ್ದು: ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಸಿಬ್ಬಂದಿಗೆ ಯಾವುದೇ ರೀತಿಯ ರಜೆಗಳನ್ನು ಮಂಜೂರು ಮಾಡಬಾರದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ (MD) ಅಕ್ರಂ ಪಾಷಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

* ವಾರದ ರಜೆಯಲ್ಲೂ ಕರ್ತವ್ಯ: ಬಸ್ ಸಂಚಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು, ತೀರಾ ಅನಿವಾರ್ಯ ಸಂದರ್ಭಗಳಲ್ಲಿ ನೌಕರರ ವಾರದ ರಜೆಗಳನ್ನು (Weekly Off) ರದ್ದುಗೊಳಿಸಿ ಅವರನ್ನು ಕಡ್ಡಾಯವಾಗಿ ಕರ್ತವ್ಯಕ್ಕೆ ನಿಯೋಜಿಸುವಂತೆ ಉನ್ನತ ಅಧಿಕಾರಿಗಳಿಗೆ ಆದೇಶಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+