ಪ್ರಿಯಾಂಕಾ ಪತಿಯ ಹೆಸರಿಗಿಂತ ನನ್ನ ಹೆಸರನ್ನೇ ಹೆಚ್ಚು ನೆನಪಿಸಿಕೊಳ್ತಾರೆ: ಸ್ಮೃತಿ

Recommended Video

      ನಾನು ಯಾರು ಎಂಬುದೇ ಗೊತ್ತಿರಲಿಲ್ಲ.. ಆದರೆ ಈಗ..!? | Oneindia Kannada

      ಅಮೇಥಿ, ಮೇ 06: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇತ್ತೀಚೆಗೆ ತಮ್ಮ ಪತಿಯ ಹೆಸರಿಗಿಂತ ನನ್ನ ಹೆಸರನ್ನೇ ಹೆಚ್ಚು ಉಚ್ಚರಸುತ್ತಾರೆ ಎಂದು ಅಮೇಥಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹೇಳಿದ್ದಾರೆ.

      ಸೋಮವಾರ ಅಮೇಥಿ ಕ್ಷೇತ್ರದಲ್ಲಿ ಐದನೇ ಹಂತದ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. "ಐದು ವರ್ಷಗಳ ಹಿಂದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನಾನು ಯಾರು ಎಂಬುದೇ ಗೊತ್ತಿರಲಿಲ್ಲ. ಆದರೆ ಇತ್ತೀಚೆಗೆ ಅವರು ತಮ್ಮ ಪತಿಯ ಹೆಸರನ್ನು ಹೇಳುವುದಕ್ಕಿಂತ ಹೆಚ್ಚು ನನ್ನ ಹೆಸರನ್ನು ಹೇಳುತ್ತಾರೆ" ಎಂದು ಸ್ಮೃತಿ ಇರಾನಿ ಟೀಕಿಸಿದರು.

      ಅಮೇಥಿಯಲ್ಲಿ ರಾಹುಲ್ ಗಾಂಧಿ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಹಲವು ಬಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಮೃತಿ ಇರಾನಿ ಅವರ ಹೆಸರನ್ನು ಉಚ್ಚರಿಸಿದ್ದರು. ಆದರೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಪತ್ರಕರ್ತರು, 'ರಾಹುಲ್ ಗಾಂಧಿ ಅವರಿಗೆ ಸ್ಮೃತಿ ಇರಾನಿ ಪ್ರಬಲ ಪ್ರತಿಸ್ಪರ್ಧಿಯೇ?' ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, "ಸ್ಮೃತಿ ಇರಾನಿ? ಹಾಗಂದ್ರೆ ಯಾರು?" ಎಂದು ಪ್ರಶ್ನಿಸಿದ್ದರು.

      Priyanka Gandhi takes my name more than her husbands: Smriti Irani

      ಅದಕ್ಕೆ ಉತ್ತರಿಸಿದ್ದ ಸ್ಮೃತಿ ಇರಾನಿ, "ನಿಮ್ಮ ಕುಟುಂಬಸ್ಥರು ಮಾಡಿದ ಹಗರಣಗಳೇ ನಿಮಗೆ ನೆನಪಿರುವುದಿಲ್ಲ. ಇನ್ನು ನಾನು ಯಾರು ಎಂಬುದುದ ನಿಮಗೆ ಹೇಗೆ ನೆನಪಿರುತ್ತದೆ" ಎಂದಿದ್ದರು.

      ಇದೀಗ ಮತ್ತೆ ಆ ಘಟನೆಯನ್ನು ಸ್ಮೃತಿ ಇರಾನಿ ನೆನಪಿಸಿಕೊಂಡು, ಪ್ರಿಯಾಂಕಾ ಗಾಂಧಿ ಅವರಿಗೆ ಟಅಂಗ್ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+