ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಯಿಂದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ; ಹೆದ್ದಾರಿಯ ವಿಶೇಷತೆಗಳೇನು?

|
Google Oneindia Kannada News

ಲಕ್ನೋ, ನವೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ನ.16)ದಂದು ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದು, ಇದು "ಉತ್ತರಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ' ಎಂದು ಹೇಳಿದ್ದಾರೆ.

ಸುಮಾರು 341 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇಯು ಲಕ್ನೋದಿಂದ ಬಿಹಾರದ ಬಕ್ಸಾರ್ ನಡುವಿನ ಪ್ರಯಾಣದ ಸಮಯವನ್ನು ಏಳು ಗಂಟೆಗಳಿಂದ ನಾಲ್ಕು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.

ತುರ್ತು ಸಂದರ್ಭಗಳಲ್ಲಿ ವಿಮಾನವನ್ನು ಇಳಿಸಲು ಹೆದ್ದಾರಿಯ ಸಾಮರ್ಥ್ಯವನ್ನು ಪ್ರದರ್ಶಿಸುವ ಭಾರತೀಯ ವಾಯುಪಡೆಯ C-130J ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಧಾನಿ ಮೋದಿ ಇಳಿಯುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ.

ಪ್ರಯಾಗರಾಜ್ ಮತ್ತು ವಾರಣಾಸಿಯೊಂದಿಗೆ ಸಂಪರ್ಕ

ಪ್ರಯಾಗರಾಜ್ ಮತ್ತು ವಾರಣಾಸಿಯೊಂದಿಗೆ ಸಂಪರ್ಕ

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯು ಉತ್ತರಪ್ರದೇಶ ರಾಜಧಾನಿ ಲಕ್ನೋವನ್ನು ಮೌ, ಅಜಂಗಢ, ಬಾರಾಬಂಕಿ ಸೇರಿದಂತೆ ಪೂರ್ವ ಜಿಲ್ಲೆಗಳೊಂದಿಗೆ ಪ್ರಮುಖ ನಗರಗಳಾದ ಪ್ರಯಾಗರಾಜ್ ಮತ್ತು ವಾರಣಾಸಿಯೊಂದಿಗೆ ಸಂಪರ್ಕ ಬೆಸೆಯುತ್ತದೆ.

ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಎದುರು ಏರ್‌ಸ್ಟ್ರಿಪ್ ಫೈಟರ್ ಜೆಟ್‌ಗಳಿಂದ ಬಹು ಲ್ಯಾಂಡಿಂಗ್ ಮತ್ತು ಟೇಕ್‌ಆಫ್‌ಗಳೊಂದಿಗೆ ಭಾರತೀಯ ವಾಯುಸೇನೆ 45 ನಿಮಿಷಗಳ ವೈಮಾನಿಕ ಪ್ರದರ್ಶನವನ್ನು ನಡೆಸುತ್ತದೆ.

"ಟಚ್ ಮತ್ತು ಗೋ' ಕಾರ್ಯಾಚರಣೆಯ ಅಡಿಯಲ್ಲಿ, ಯುದ್ಧ ವಿಮಾನವು ಎಕ್ಸ್‌ಪ್ರೆಸ್‌ವೇಯನ್ನು ಸ್ಪರ್ಶಿಸಿ, ನಂತರ ಟೇಕ್ ಆಫ್ ಆಗುತ್ತದೆ. ಸುಖೋಯ್, ಮಿರಾಜ್, ರಫೇಲ್, ಎಎನ್ 32 ಮುಂತಾದ ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಒಳಗೊಂಡಿರಲಿವೆ.

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ತಿಳಿದುಕೊಳ್ಳಬೇಕಾದ ಅಂಶಗಳು

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ತಿಳಿದುಕೊಳ್ಳಬೇಕಾದ ಅಂಶಗಳು

* 341 ಕಿಮೀ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಲಕ್ನೋ- ಸುಲ್ತಾನ್‌ಪುರ ಹೆದ್ದಾರಿಯ ಚಾಂದಸಾರೈ ಗ್ರಾಮದಿಂದ ಪ್ರಾರಂಭವಾಗುತ್ತದೆ. ಇದು ಬಾರಾಬಂಕಿ, ಅಮೇಥಿ, ಸುಲ್ತಾನ್‌ಪುರ, ಫೈಜಾಬಾದ್, ಅಂಬೇಡ್ಕರ್ ನಗರ, ಅಜಂಗಢ, ಮೌ ಮೂಲಕ ಹಾದು ಘಾಜಿಪುರ ಜಿಲ್ಲೆಯ ಹಲ್ದರಿಯಾ ಗ್ರಾಮದಲ್ಲಿ ಕೊನೆಗೊಳ್ಳಲಿದೆ.

* ಜುಲೈ 2018ರಲ್ಲಿ ಅಜಂಗಢದಲ್ಲಿ ಪ್ರಧಾನಿ ಮೋದಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಡಿಪಾಯ ಹಾಕಿದ್ದರು.

* ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಸುಮಾರು 22,500 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ.

* ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸಾರ್ವಜನಿಕರಿಗೆ ತೆರೆದ ನಂತರ, ಆರು ಲೇನ್‌ಗಳ ಎಕ್ಸ್‌ಪ್ರೆಸ್‌ವೇ ಎಂಟು ಲೇನ್‌ಗಳಿಗೆ ವಿಸ್ತರಿಸಲಿದೆ. ಲಕ್ನೋದಿಂದ ಗಾಜಿಪುರಕ್ಕೆ ಪ್ರಯಾಣದ ಸಮಯವು 6 ಗಂಟೆಗಳಿಂದ 3.5 ಗಂಟೆಗಳಿಗೆ ಕಡಿಮೆಯಾಗುತ್ತದೆ.

* ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗುತ್ತಿರುವ ಸಮಯದಲ್ಲಿ ಇನ್ನೂ ಪೆಟ್ರೋಲ್ ಪಂಪ್‌ಗಳನ್ನು ಹೊಂದಿಲ್ಲ ಅಥವಾ ದೀರ್ಘ ಪ್ರಯಾಣದಲ್ಲಿ ಅಗತ್ಯವಿರುವ ಇತರ ಸೌಕರ್ಯಗಳನ್ನು ಹೊಂದಿರುವುದಿಲ್ಲ. ರಸ್ತೆಗೆ ಪ್ರವೇಶಿಸುವ ಜನರು ತಮ್ಮ ವಾಹನಗಳಲ್ಲಿ ಸ್ವಲ್ಪ ಆಹಾರ ಮತ್ತು ನೀರಿನೊಂದಿಗೆ ಪೂರ್ಣ ಟ್ಯಾಂಕ್ ಇಂಧನವನ್ನು ಹೊಂದಿರಬೇಕು. ಏಕೆಂದರೆ ಯಾವುದೇ ರೆಸ್ಟೋರೆಂಟ್‌ಗಳಿರುವುದಿಲ್ಲ.

ಪ್ರತಿ 100 ಕಿಲೋಮೀಟರ್‌ಗೆ ಎರಡು ತಂಗುದಾಣ

ಪ್ರತಿ 100 ಕಿಲೋಮೀಟರ್‌ಗೆ ಎರಡು ತಂಗುದಾಣ

* ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿ 100 ಕಿಲೋಮೀಟರ್‌ಗೆ ಎರಡು ತಂಗುದಾಣಗಳನ್ನು ನಿರ್ಮಿಸಲಾಗುತ್ತಿದೆ. ಈ ಪ್ರದೇಶಗಳು ಪೂರ್ಣಗೊಂಡ ನಂತರ ರೆಸ್ಟೋರೆಂಟ್‌ಗಳು, ಶೌಚಾಲಯ ಸೌಲಭ್ಯಗಳು, ಪೆಟ್ರೋಲ್ ಪಂಪ್, ಮೋಟಾರ್ ಗ್ಯಾರೇಜ್ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ.

* ಸುಲ್ತಾನ್‌ಪುರ ಜಿಲ್ಲೆಯ ಕುಡೆಭಾರ್‌ನಲ್ಲಿ ಎಕ್ಸ್‌ಪ್ರೆಸ್‌ವೇ ಮೂರು ಕಿಮೀ ಉದ್ದದ ರನ್‌ವೇಯನ್ನು ಹೊಂದಿರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಭಾರತೀಯ ವಾಯುಪಡೆಯ ಫೈಟರ್ ಜೆಟ್‌ಗಳನ್ನು ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಮಾಡಲು ಈ ರನ್‌ವೇಯನ್ನು ಬಳಸಿಕೊಳ್ಳಲಾಗುತ್ತದೆ.

271 ಅಂಡರ್‌ಪಾಸ್‌ಗಳನ್ನು ಹೆದ್ದಾರಿ ಹೊಂದಿದೆ

271 ಅಂಡರ್‌ಪಾಸ್‌ಗಳನ್ನು ಹೆದ್ದಾರಿ ಹೊಂದಿದೆ

* ಎಕ್ಸ್‌ಪ್ರೆಸ್‌ವೇ 18 ಮೇಲ್ಸೇತುವೆಗಳು, ಏಳು ರೈಲ್ವೆ ಮೇಲ್ಸೇತುವೆಗಳು, ಏಳು ಉದ್ದದ ಸೇತುವೆಗಳು, 104 ಸಣ್ಣ ಸೇತುವೆಗಳು, 13 ಇಂಟರ್‌ಚೇಂಜ್‌ಗಳು ಮತ್ತು 271 ಅಂಡರ್‌ಪಾಸ್‌ಗಳನ್ನು ಹೆದ್ದಾರಿಯಲ್ಲಿ ಹೊಂದಿದೆ.

* ಉತ್ತರ ಪ್ರದೇಶದ ಪೂರ್ವ ಭಾಗಗಳು, ವಿಶೇಷವಾಗಿ ಲಕ್ನೋ, ಬಾರಾಬಂಕಿ, ಅಮೇಥಿ, ಅಯೋಧ್ಯೆ, ಸುಲ್ತಾನ್‌ಪುರ, ಅಂಬೇಡ್ಕರ್ ನಗರ, ಅಜಂಗಢ, ಮೌ ಮತ್ತು ಘಾಜಿಪುರ ಜಿಲ್ಲೆಗಳು ಹೊಸ ಎಕ್ಸ್‌ಪ್ರೆಸ್‌ವೇಯ ಆರ್ಥಿಕ ಪ್ರಯೋಜನಗಳನ್ನು ಪಡೆಯಲಿವೆ ಏಕೆಂದರೆ ಇದು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

English summary
Prime Minister Narendra Modi will inaugurate the Poorvanchal Expressway on Tuesday (Nov. 16), which will "bring many benefits to the economic and social progress of Uttar Pradesh" he Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X