403 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ
ಲಕ್ನೋ ಫೆಬ್ರವರಿ 02: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು ತನ್ನ ಕಾರ್ಯಕರ್ತರನ್ನು ನಿರಂತರವಾಗಿ ಸಕ್ರಿಯಗೊಳಿಸುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯವರು ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಸ್ವಾವಲಂಬಿ ಆರ್ಥಿಕತೆ ವಿಷಯದ ಕುರಿತು ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ನಿನ್ನೆಯಷ್ಟೇ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ 17 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ, ಪಕ್ಷವು ಲಕ್ನೋದ ಹೆಚ್ಚಿನ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಹೊರಬಿದ್ದಿರುವ ಅತ್ಯಂತ ಆಘಾತಕಾರಿ ವಿಷಯವೆಂದರೆ ಯೋಗಿ ಸರ್ಕಾರದ ಮಹಿಳಾ ಕಲ್ಯಾಣ ಖಾತೆ ರಾಜ್ಯ ಸಚಿವೆ (ಸ್ವತಂತ್ರ ಉಸ್ತುವಾರಿ) ಸ್ವಾತಿ ಸಿಂಗ್ ಅವರ ಟಿಕೆಟ್‌ಗೆ ಬಿಜೆಪಿ ಕತ್ತರಿ ಹಾಕಿದೆ. ಅವರ ಸ್ಥಾನದಲ್ಲಿ ರಾಜೇಶ್ವರ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ. ರಾಜೇಶ್ವರ್ ಸಿಂಗ್ ಇಡಿ ಮಾಜಿ ಜಂಟಿ ನಿರ್ದೇಶಕರು, ಅವರು ಇತ್ತೀಚೆಗೆ ವಿಆರ್ಎಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ರಾಜೇಶ್ವರ್ ಸಿಂಗ್ ಅವರು ಲಕ್ನೋ ರೇಂಜ್ ಐಜಿ ಲಕ್ಷ್ಮಿ ಸಿಂಗ್ ಅವರ ಪತಿ.
17 ಅಭ್ಯರ್ಥಿಗಳ ಪಟ್ಟಿಯಲ್ಲಿ ಬ್ರಜೇಶ್ ಪಾಠಕ್ ಅವರಿಗೆ ಲಕ್ನೋ ಕ್ಯಾಂಟ್‌ನಿಂದ ಟಿಕೆಟ್ ನೀಡಲಾಗಿದೆ. ಲಕ್ನೋ ಕ್ಯಾಂಟ್ ಕ್ಷೇತ್ರದಲ್ಲಿ, ಅಪರ್ಣಾ ಯಾದವ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಬಹುದು ಎಂದು ನಂಬಲಾಗಿತ್ತು, ಏಕೆಂದರೆ ಸಮಾಜವಾದಿ ಪಕ್ಷದಲ್ಲಿದ್ದಾಗ ಅಪರ್ಣಾ ಯಾದವ್ ಈ ಸ್ಥಾನದಿಂದ ಸ್ಪರ್ಧಿಸಿದ್ದರು, ಅವರು ಈ ಹಿಂದೆ ಬಿಜೆಪಿ ಸೇರಿದ್ದರು. ಅಪರ್ಣಾ ಬದಲಿಗೆ ಬ್ರಜೇಶ್ ಪಾಠಕ್‌ಗೆ ಬಿಜೆಪಿ ಟಿಕೆಟ್ ನೀಡಿದೆ.

ಬಿಜೆಪಿ ಲಕ್ನೋ ಪಶ್ಚಿಮದಿಂದ ಅಂಜನಿ ಶ್ರೀವಾಸ್ತವ್, ಮಲಿಹಾಬಾದ್‌ನಿಂದ ಜಯದೇವಿ, ಲಕ್ನೋ ಉತ್ತರದಿಂದ ನೀರಜ್ ಬೋರಾ, ಲಕ್ನೋ ಸೆಂಟ್ರಲ್‌ನಿಂದ ರಜನೀಶ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ. ಸೀತಾಪುರದಿಂದ ರಾಕೇಶ್ ಠಾಕೂರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಮೋಹನ್‌ಲಾಲ್ ಗಂಜ್‌ನಿಂದ ಅಮರೇಶ್ ಕುಮಾರ್, ಉಂಚಹಾರ್‌ನಿಂದ ಅಮರ್‌ಪಾಲ್ ಮೋರಿಯಾ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಮತ್ತೊಂದೆಡೆ, ಬಕ್ಷಿಯಿಂದ ಹಾಲಿ ಶಾಸಕ ಯೋಗೇಶ್ ಶುಕ್ಲಾ ಅವರಿಗೆ ಟಿಕೆಟ್ ನೀಡಲಾಗಿದೆ.
ಭಗವಂತನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಸೆಂಬ್ಲಿ ಸ್ಪೀಕರ್ ಹೃದಯ ನಾರಾಯಣ ದೀಕ್ಷಿತ್ ನಿರಾಕರಿಸಿದ್ದರು, ನಂತರ ಬಿಜೆಪಿ ಈ ಸ್ಥಾನಕ್ಕೆ ಅಶುತೋಷ್ ಶುಕ್ಲಾ ಅವರನ್ನು ನಾಮನಿರ್ದೇಶನ ಮಾಡಿದೆ. ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಎಸ್‌ಪಿ ಸಿಂಗ್ ಬಘೇಲ್ ಅವರನ್ನು ಕಣಕ್ಕಿಳಿಸಲಾಗಿದೆ. ಇನ್ನೂ ಶುಕ್ರವಾರ ಬಿಜೆಪಿ 91 ಹೊಸ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಿತ್ತು. ಆರನೇ ಮತ್ತು ಏಳು ಹಂತಗಳಲ್ಲಿ (ಮಾರ್ಚ್ 3 ಮತ್ತು ಮಾರ್ಚ್ 7) ಮತದಾನ ನಡೆಯಲಿರುವ ಗೋರಖ್‌ಪುರ ಪ್ರದೇಶದ 62 ಸ್ಥಾನಗಳಲ್ಲಿ ಬಿಜೆಪಿ ಇದುವರೆಗೆ 37 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ ಶೇ.43ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
Recommended Video
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 11 ಜಿಲ್ಲೆಗಳಲ್ಲಿ ಒಟ್ಟು 58 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications