PMAY ಫಲಾನುಭವಿಗಳಿಗೆ ದೀಪಾವಳಿಗೆ ತಲಾ 2 ದೀಪ ಬೆಳಗಲು ಮೋದಿ ಕರೆ
ಲಕ್ನೋ, ಅಕ್ಟೋಬರ್ 05: ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳು ದೀಪಾವಳಿಯಂದು ತಲಾ ಎರಡು ದೀಪ ಬೆಳಗಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ನಮ್ಮ ಸರ್ಕಾರವು ಪಿಎಂಎವೈ ಯೋಜನೆಯಲ್ಲಿ ಮನೆಗಳ ಆಸ್ತಿ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದೆ. ಇಲ್ಲಿಯವರೆಗೆ ಎಲ್ಲವೂ ಗಂಡ ಅಥವಾ ಮಗನ ಹೆಸರಿನಲ್ಲಿ ಇರುತ್ತಿತ್ತು. ಆರೋಗ್ಯಕರ ಸಮಾಜದಲ್ಲಿ ಸಮತೋಲನ ಇರಬೇಕೆಂದು ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಲಾಗುತ್ತಿರುವ ಮನೆಗಳಲ್ಲಿ, ಶೇಕಡಾ 80 ಕ್ಕಿಂತಲೂ ಹೆಚ್ಚು ಮನೆಗಳು ಮಹಿಳೆಯರ ಒಡೆತನದಲ್ಲಿರುವುದು ಅಥವಾ ಅವರು ಜಂಟಿ ಮಾಲೀಕರಾಗಿರುವುದು ನನಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ.

ತಾಯಿ ಭಾರತಿಗೆ ಸಮರ್ಪಿತವಾದ ರಾಷ್ಟ್ರಕ್ಕೆ ಲಕ್ನೋ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರೂಪದಲ್ಲಿ ದೂರದೃಷ್ಟಿಯನ್ನು ನೀಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಂದು, ಅವರ ಸ್ಮರಣಾರ್ಥವಾಗಿ, ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪೀಠವನ್ನು ಸ್ಥಾಪಿಸಲಾಗುತ್ತಿದೆ ಮತ್ತು ಇದು ಅತೀವ ಸಂತಸದ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಈ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ಮಾರ್ಟ್ ಸಿಟಿ ಮಿಶನ್ ಅಡಿ ಆಗ್ರಾ, ಅಲಿಗಡ್, ಬರೇಲಿ, ಝಾನ್ಸಿ, ಕಾನ್ಪುರ್, ಲಕ್ನೋ, ಪ್ರಯಾಗ್ ರಾಜ್, ಸಹಾರನ್ ಪುರ, ಮುರಾದಾಬಾದ್ ಹಾಗೂ ಅಯೋಧ್ಯೆಯಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಹಾಗೂ ನಗರ ಮೂಲಭೂತ ಸೌಕರ್ಯ ಹಾಗೂ ಅಮೃತ್ ಮಿಶನ್ ಅಡಿ ಪ್ರದೇಶದ ವಿಭಿನ್ನ ನಗರಗಳಲ್ಲಿ ಉತ್ತರ ಪ್ರದೇಶ ಜಲ ನಿಗಮ ಮಂಡಳಿ ಮೂಲಕ ನಿರ್ಮಿಸಲಾಗಿರುವ ಕುಡಿಯುವ ನೀರಿನ ಹಾಗೂ ಚರಂಡಿಗಳ ಒಟ್ಟು 4,737 ಕೋಟಿ ರೂಗಳ 75 ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ.
ಇದಲ್ಲದೆ ಪ್ರಧಾನಿ ಮೋದಿ, ಲಕ್ನೋ, ಕಾನ್ಪುರ್, ಗೋರಖ್ಪುರ, ಝಾನ್ಸಿ, ಪ್ರಯಾಗ್ ರಾಜ್, ಗಾಜಿಯಾಬಾದ್ ಹಾಗೂ ವಾರಾಣಾಸಿಗಾಗಿ 75 ಸ್ಮಾರ್ಟ್ ಎಲೆಕ್ಟ್ರಿಕ್ ಬಸ್ ಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
2014ಕ್ಕೂ ಮುನ್ನ ಮನೆಯ ಗಾತ್ರ ನಿರ್ಧರಿಸುವ ಯಾವುದೇ ನೀತಿ ಇರಲಿಲ್ಲ. ಕೆಲವು ಸ್ಥಳಗಳಲ್ಲಿ ಮನೆಗಳನ್ನು 15 ಚದರ ಮೀಟರ್‌ಗಳಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ 17 ಚದರ ಮೀಟರ್‌ಗಳಲ್ಲಿ ನಿರ್ಮಿಸಲಾಗಿದೆ.
ನಮ್ಮ ಸರ್ಕಾರವು 22 ಚದರ ಮೀಟರ್‌ಗಿಂತ ಕಡಿಮೆ ಜಾಗದಲ್ಲಿ ಯಾವುದೇ ಮನೆ ನಿರ್ಮಿಸಬಾರದು ಎಂದು ನಿರ್ಧರಿಸಿತ್ತು.ನಾವು ನಿವೇಶನದ ಗಾತ್ರವನ್ನು ಹೆಚ್ಚಿಸಿದ್ದೇವೆ, ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣವನ್ನೂ ವರ್ಗಾಯಿಸುತ್ತಿದ್ದೇವೆ ಎಂದು ಮೋದಿ ಹೇಳಿದರು.
2019ರಲ್ಲಿ ಅಯೋಧ್ಯೆಯಲ್ಲಿ ದಾಖಲೆಯ 4,10,000 ಹಣತೆಗಳನ್ನು ಬೆಳಗಿಸಲಾಗಿತ್ತು, 2020ರಲ್ಲಿ ನಾಲ್ಕನೇ ದೀಪೋತ್ಸವದ ವೇಳೆ ಜಿಲ್ಲಾ ಆಡಳಿತವು ರಾಮ್ ಕಿ ಪೈಡಿ ಘಾಟ್ ಹಾಗೂ ಕೆಲವು ಘಾಟ್‌ಗಳಲ್ಲಿ 6,06,569 ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿತ್ತು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಅಯೋಧ್ಯೆಯಲ್ಲಿ ದಿಯಾಸ್ ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ ಆದಿತ್ಯನಾಥ್ ಸರ್ಕಾರ ತನ್ನ ಹಿಂದಿನ ದಾಖಲೆಯನ್ನು ಮುರಿಯುವ ಯೋಜನೆಯಲ್ಲಿದೆ.
ಉತ್ತರ ಪ್ರದೇಶದಲ್ಲಿ ಪಿಎಂಎವೈನ 9 ಲಕ್ಷ ಫಲಾನುಭವಿಗಳಿದ್ದಾರೆ. ಪ್ರತಿ ಮನೆಯಲ್ಲಿ ಎರಡು ದೀಪಗಳನ್ನು ಬೆಳಗಿಸಿದರೆ, 18 ಲಕ್ಷ ದೀಪಗಳನ್ನು ದೀಪಾವಳಿಯಲ್ಲಿ ಬೆಳಗಿದಂತಾಗಲಿದೆ. ಅಯೋಧ್ಯೆಯಲ್ಲಿ 7.5 ಲಕ್ಷ ದೀಪಗಳನ್ನು ಬೆಳಗಿಸುವ ಯೋಜನೆ ಇದೆ. ಇದು ಭಗವಾನ್ ರಾಮನನ್ನು ಸಂತೋಷಪಡಿಸುತ್ತದೆ ಎಂದರು.
ದೇಶದ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 13 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು 11 ಲಕ್ಷಕ್ಕೂ ಹೆಚ್ಚು ಸಹಾಯಕರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ವಿಮೆ ಸೌಲಭ್ಯ ಪಡೆಯಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು 50 ಲಕ್ಷ ರೂಪಾಯಿಗಳ ವಿಮೆಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ












Click it and Unblock the Notifications