ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಕಚ್ಚಿ ಕೊಂದ ಪಿಟ್ಬುಲ್‌ ದತ್ತು ಪಡೆಯಲು ಡಿಮಾಂಡ್!

|
Google Oneindia Kannada News

ಲಕ್ನೋ ಜುಲೈ 25: 82 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಸಾಕುನಾಯಿ ಕಚ್ಚಿ ಕೊಂದ ಮನಕಲಕುವ ಪ್ರಕರಣ ನೆನಪಿದೆಯೇ?. ಕೆಲ ದಿನಗಳ ಹಿಂದೆ ನಿವೃತ್ತ ಶಿಕ್ಷಕಿಯಾಗಿರುವ ಮಹಿಳೆ ಲಕ್ನೋದ ಕೈಸರ್‌ಬಾಗ್ ಪ್ರದೇಶದಲ್ಲಿ ಮನೆಯಲ್ಲಿ ಒಬ್ಬರೇ ಇದ್ದಾಗ ಪಿಟ್ಬುಲ್ ನಾಯಿ ಆಕೆಯನ್ನು ಕಚ್ಚಿ ಕೊಂದ ಘಟನೆ ನಡೆದಿತ್ತು.

ಪಿಟ್ಬುಲ್ ಆಕೆಯ ಮೇಲೆ ಮಾರಣಾಂತಿಕ ದಾಳಿ ಮಾಡಿತ್ತು. ಆಕೆಯ ದೇಹದ ಮೇಲೆ ಗಂಭೀರ ಗಾಯಗಳಾಗುವಂತೆ ಪಿಟ್ಬುಲ್ ಕ್ರೂರವಾಗಿ ಆಕ್ರಮಣ ಮಾಡಿತ್ತು. ಈ ಪ್ರಕರಣ ನಾಯಿ ಮಾಲೀಕರಲ್ಲಿ ಭಯ ಉಂಟು ಮಾಡಿತ್ತು ಮತ್ತು ಜನರು ಸಾಕು ನಾಯಿಗಳನ್ನು ವಿಶೇಷವಾಗಿ ಪಿಟ್ಬುಲ್‌ಗಳನ್ನು ಸಾಕಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಮಾಡಿತ್ತು.

ಲಕ್ನೋ: ವಿಗ್ರಹ ಕದ್ದ ಕಳ್ಳರನ್ನು ಕಾಡಿದ ಕೆಟ್ಟ ಕನಸು, ಬದಲಾಯ್ತು ಕಳ್ಳರ ಮನಸುಲಕ್ನೋ: ವಿಗ್ರಹ ಕದ್ದ ಕಳ್ಳರನ್ನು ಕಾಡಿದ ಕೆಟ್ಟ ಕನಸು, ಬದಲಾಯ್ತು ಕಳ್ಳರ ಮನಸು

ಈ ಭಯಾನಕ ಘಟನೆಯ ಬಳಿಕ ಶ್ವಾನ ಪ್ರಿಯರ ಗುಂಡಿಗೆ ಕೊಂಚ ನಡುಗಿದ್ದಿದೆ. ಅದರಲ್ಲೂ ಪಿಟ್ಬುಲ್ ಸಾಕುವವರ ಎದೆ ಗಟ್ಟಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ಲಕ್ನೋ ಮಹಿಳೆಯ ಸಾವಿಗೆ ಕಾರಣವಾದ ಪಿಟ್ಬುಲ್‌ನನ್ನೇ ದತ್ತು ಪಡೆಯಲು ಎಂಟು ಸಂಸ್ಥೆಗಳು ಮುಂದಾಗಿವೆ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ.

ನಾಯಿಯನ್ನು ದತ್ತು ಪಡೆಯಲು 8 ಎನ್‌ಜಿಒಗಳು ಒಲವು

ನಾಯಿಯನ್ನು ದತ್ತು ಪಡೆಯಲು 8 ಎನ್‌ಜಿಒಗಳು ಒಲವು

ಎಂಟು ಸಂಸ್ಥೆಗಳು ಈಗ ಪಿಟ್ಬುಲ್ ನಾಯಿಯನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿವೆ. ಪ್ರಸ್ತುತ ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (ಎಲ್‌ಎಂಸಿ) ಅಧಿಕಾರಿಗಳು ಮತ್ತು ಪಶುವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ನಾಯಿ ಇದೆ. ಅದರ ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಈಗ ನಾಯಿಯ ವರ್ತನೆ ಸಹಜವಾಗಿದ್ದು, ಆಟವಾಡುತ್ತಿದೆ ಮತ್ತು ದಿನಕ್ಕೆ ಮೂರು ಬಾರಿ ಆಹಾರ ಸೇವಿಸುತ್ತಿದೆ ಎಂದು ಪ್ರಾಣಿ ಕಲ್ಯಾಣ ಅಧಿಕಾರಿ ಡಾ.ಅಭಿನವ್ ವರ್ಮಾ ತಿಳಿಸಿದ್ದಾರೆ.

ಪಿಟ್ಬುಲ್ ಅನ್ನು ಜುಲೈ 27 ರವರೆಗೆ ಆಶ್ರಯದಲ್ಲಿ ಇರಿಸಲಾಗುವುದು. ನಂತರ ಅದನ್ನು ದತ್ತು ನೀಡುವ ನಿರ್ಧಾರ ತೆಗೆದುಕೊಳ್ಳಲಾಗುವುದು. ಮಾಜಿ ಕೇಂದ್ರ ಸಚಿವೆ ಮತ್ತು ಪ್ರಾಣಿ ಪ್ರೀತಿ ಮೇನಕಾ ಗಾಂಧಿ ಅವರು ಅಧಿಕಾರಿಗಳನ್ನು ಕರೆದು ನಾಯಿಯನ್ನು ಅದರ ಮಾಲೀಕ ಅಮಿತ್ ತ್ರಿಪಾಠಿಗೆ ಹಿಂತಿರುಗಿಸುವಂತೆ ಕೇಳಿದರು. ಆದರೆ, ನಾಯಿಯನ್ನು ವಶಪಡಿಸಿಕೊಂಡ ನಂತರ ಅಮಿತ್ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾಲೀಕರು ನಾಯಿಯನ್ನು ಪಡೆಯಲು ಬಯಸದಿದ್ದರೆ, ದತ್ತು ಪಡೆಯಲು ಬಿಟ್ಟುಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಪಿ ನವನಿರ್ಮಾಣ ಸೇನೆಯ ಮುಖ್ಯಸ್ಥ ಅಮಿತ್ ಜಾನಿ ಅವರು ಬ್ರೌನಿ ಹೆಸರಿನ ಪಿಟ್ಬುಲ್ ತಳಿಯ ನಾಯಿ ಅನ್ನು ದತ್ತುತೆಗೆದುಕೊಳ್ಳಲು ಬಯಸಿ LMC ಗೆ ಇಮೇಲ್ ಕಳುಹಿಸಿದ್ದಾರೆ ಎಂದು ಅಮಿತ್ ತಿಳಿಸಿದ್ದಾರೆ. "ನಾನು ಪ್ರಾಣಿ ಪ್ರೇಮಿ ಮತ್ತು ನಾಯಿಯನ್ನು ನನ್ನೊಂದಿಗೆ ಇಟ್ಟುಕೊಳ್ಳಲು ಇಷ್ಟಪಡುತ್ತೇನೆ. ಈ ನಿಟ್ಟಿನಲ್ಲಿ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ನಾನು ಸಿದ್ಧನಿದ್ದೇನೆ'' ಎಂದು ಅವರು ಮೇಲ್ ಮಾಡಿದ್ದಾರೆ. ಹೀಗೆ ಎಂಟು ಸಂಸ್ಥೆಗಳು ನಾಯಿಯನ್ನು ದತ್ತು ಪಡೆಯಲು ಮುಂದಾಗಿವೆ.

ಯಾರಿದು ಬ್ರೌನಿ?

ಯಾರಿದು ಬ್ರೌನಿ?

ಇದೇ ತಿಂಗಳು ಜುಲೈ 12 ಮಂಗಳವಾರ ಬೆಳಗ್ಗೆ ಲಕ್ನೋದ ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರನ್ನು ಆಕೆಯ ಮಗನ ಮುದ್ದಿನ ಪಿಟ್ಬುಲ್ ನಾಯಿ ಕಚ್ಚಿ ಕೊಂದ ಅಘಾತಕಾರಿ ಘಟನೆ ನಡೆದಿತ್ತು. ಈ ಘಟನೆ ಪ್ರಾಣಿ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದೆ. ಮೃತಳ ಕುಟುಂಬ ಕೈಸರ್‌ಬಾಗ್‌ನ ಬಂಗಾಳಿ ಟೋಲಾ ಪ್ರದೇಶದಲ್ಲಿ ವಾಸಿಸುತ್ತಿದೆ. ಮೃತ ಸುಶೀಲಾ ತ್ರಿಪಾಠಿ ಅವರ ಮಗ, ಜಿಮ್ ತರಬೇತುದಾರ ಅಮಿತ್ ಎರಡು ಸಾಕು ನಾಯಿಗಳನ್ನು ಹೊಂದಿದ್ದರು. ಒಂದು ಪಿಟ್ಬುಲ್ ಮತ್ತೊಂದು ಲ್ಯಾಬ್ರಡಾರ್. ಮಹಿಳೆಯ ಮೇಲೆ ದಾಳಿ ಮಾಡಿದ ಬ್ರೌನಿ ಎಂಬ ನಾಯಿಯನ್ನು ಮೂರು ವರ್ಷಗಳ ಹಿಂದೆ ಮನೆಗೆ ತರಲಾಗಿತ್ತು.

ಬೆಳಗ್ಗೆ 6 ಗಂಟೆ ಸುಮಾರಿಗೆ ಸುಶೀಲ ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿದೆ. ಆಕೆಯ ಮಗ ಆಕೆಯನ್ನು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣ ಆಕೆಯನ್ನು ಬಲರಾಂಪುರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಧಿಕ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ನೆರೆಹೊರೆಯವರು ಹೇಳಿದ್ದೇನು?

ನೆರೆಹೊರೆಯವರು ಹೇಳಿದ್ದೇನು?

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುಶೀಲಾ ಅವರ ದೇಹದಲ್ಲಿ ಕುತ್ತಿಗೆಯಿಂದ ಹೊಟ್ಟೆಯವರೆಗೆ ಒಟ್ಟು 12 ತೀವ್ರ ಗಾಯಗಳು ಪತ್ತೆಯಾಗಿವೆ. ನೆರೆಹೊರೆಯವರ ಪ್ರಕಾರ, "ಬೆಳಗ್ಗೆ 6 ಗಂಟೆ ಸುಮಾರಿಗೆ ನಾಯಿಗಳು ಬೊಗಳುವುದು ಮತ್ತು ಸುಶೀಲಾ ಮೇಲೆ ದಾಳಿ ಮಾಡಿದಾಗ ಸಹಾಯಕ್ಕಾಗಿ ಕೂಗುವುದು ಕೇಳಿತು. ನಾವು ಅವರ ಮನೆಗೆ ಧಾವಿಸಿದೆವು ಆದರೆ ಅದು ಒಳಗಿನಿಂದ ಬೀಗ ಹಾಕಿತ್ತು. ಮಹಿಳೆಯ ಮಗ ಮನೆಗೆ ಬಂದಾಗ ಅವರು ಬಾಗಿಲನ್ನು ತೆರೆದಿದ್ದಾರೆ. ಈ ವೇಳೆ ಆಕೆಗೆ ತೀವ್ರ ಗಾಯಗಳಾಗಿದ್ದವು'' ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.

ನಾಯಿ ಸಾಕುವವರಿಗೆ ಷರತ್ತು

ನಾಯಿ ಸಾಕುವವರಿಗೆ ಷರತ್ತು

ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (LMC) ಸ್ವಾನ್ ಲೈಸೆನ್ಸ್ ಕಂಟ್ರೋಲ್ ಮತ್ತು ರೆಗ್ಯುಲೇಶನ್ ಬೈ-ಲಾ 2003 ಎಂಬ ಹೆಸರಿನ ನಾಯಿಗಳನ್ನು ಸಾಕಲು ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಕೈಪಿಡಿಯ ಪ್ರಕಾರ, ನಾಯಿಗಳನ್ನು ಸಾಕಲು ಇಷ್ಟಪಡುವ ಜನರು ಹಲವಾರು ಷರತ್ತುಗಳನ್ನು ಅನುಸರಿಸಿದ ನಂತರ ಕಡ್ಡಾಯವಾಗಿ ಪರವಾನಗಿಯನ್ನು ಪಡೆಯಬೇಕಾಗುತ್ತದೆ.

ಯಾವುದೇ ವ್ಯಕ್ತಿಯು ತನ್ನ ನಾಯಿಯನ್ನು ನೆರೆಹೊರೆಯವರಿಗೆ ಯಾವುದೇ ಆಕ್ಷೇಪಣೆಯಿಲ್ಲದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಬಂಧಿಸಬೇಕು ಎಂದು ಕೈಪಿಡಿಯಲ್ಲಿ ಹೇಳಲಾಗಿದೆ. ಲಕ್ನೋ ನಗರದಲ್ಲಿ ಒಟ್ಟು 4,824 ಪರವಾನಗಿಗಳನ್ನು ನೀಡಲಾಗಿದ್ದು, ಇವುಗಳಲ್ಲಿ 2,370 ದೊಡ್ಡ ತಳಿಯ ನಾಯಿಗಳಿವೆ.

Recommended Video

ಒಕ್ಕಲಿಗ ಸ್ವಾಮೀಜಿ ಮತ್ತು ದೇವೇಗೌಡರ ಬಗ್ಗೆ ಜಮೀರ್ ಅಹಮದ್ ಹೇಳಿದ್ದೇನು? | OneIndia Kannada

English summary
8 NGOs have offered to adopt a dog that killed an 82-year-old retired teacher in Lucknow's Kaiserbagh area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X