ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕಾಶ್ಮೀರದ ಚೆಂದದ ಹುಡ್ಗಿ ಮದ್ವೆಯಾಗಿ": ಬಿಜೆಪಿ ಶಾಸಕನ ಕರೆ

|
Google Oneindia Kannada News

ಲಕ್ನೋ, ಆಗಸ್ಟ್ 07: ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಪಕ್ಷದ ಕಾರ್ಯಕರ್ತರಿಗೆ ಕಾರ್ಯಕ್ರಮವೊಂದರಲ್ಲಿ ನೀಡಿರುವ ಕರೆಗೆ ಆಕ್ಷೇಪ ಕೇಳಿ ಬಂದಿದೆ. ಕಾಯಕರ್ತರನ್ನು ಉದ್ದೇಶಿಸಿ, 'ನೀವೀಗ ಕಾಶ್ಮೀರದ ಚೆಂದದ ಹುಡುಗಿಯರನ್ನು ವರಿಸಬಹುದು' ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಆಸ್ತಿ ಹಕ್ಕು ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವುದನ್ನು ಹೊಗಳುವ ಭರದಲ್ಲಿ ಶಾಸಕ ವಿಕ್ರಮ್ ಈ ರೀತಿ ಹೇಳಿಕೆ ನೀಡಿದ್ದಾರೆ. ವಿಕ್ರಮ್ ಭಾಷಣದ ತುಣುಕು ಇರುವ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

Fact Check: ಜಮ್ಮು ಮತ್ತು ಕಾಶ್ಮೀರದಲ್ಲಿ ಸೈಟ್ ಮಾರಾಟಕ್ಕಿದೆ, ಎಚ್ಚರ!Fact Check: ಜಮ್ಮು ಮತ್ತು ಕಾಶ್ಮೀರದಲ್ಲಿ ಸೈಟ್ ಮಾರಾಟಕ್ಕಿದೆ, ಎಚ್ಚರ!

ವಿಡಿಯೋದಲ್ಲಿ ಶಾಸಕ ಮಾತನಾಡುತ್ತಾ, "ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬಿಜೆಪಿ ಕಾರ್ಯಕರ್ತರು ಕಾಶ್ಮೀರದಲ್ಲಿ ಜಮೀನನ್ನು ಖರೀದಿಸಬಹುದು, ಅಲ್ಲಿನ ಸುಂದರ ಮಹಿಳೆಯರನ್ನೂ ಮದುವೆ ಆಗಬಹುದಾಗಿದೆ" ಎಂದಿದ್ದಾರೆ.

‘Now, marry fair Kashmiri women, says BJP MLA after article 370 repeal

ಕಾಶ್ಮೀರ ಪುನರ್ ರಚನೆ ವಿಧೇಯಕಕ್ಕೆ ಅಂಗೀಕಾರ ಸಿಕ್ಕ ಸಂಭ್ರಮಾಚರಣೆ ಸಂದರ್ಭದಲ್ಲಿ ಶಾಸಕರು ಮಾತನಾಡಿ, " ಬಿಜೆಪಿ ಕಾರ್ಯಕರ್ತರು ಈಗ ತುಂಬಾ ಉತ್ಸಾಹದಿದ್ದಾರೆ. ಅವಿವಾಹಿತರು ಕಾಶ್ಮೀರ ಯುವತಿಯರನ್ನು ವರಿಸಬಹುದು. ಈಗ ಯಾವುದೇ ಸಮಸ್ಯೆ ಇಲ್ಲ. ಈ ಮುನ್ನ ಅಲ್ಲಿ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯ ಪ್ರಕರಣಗಳು ಕಂಡು ಬಂದಿತ್ತು, ಕಾಶ್ಮೀರ ಮಹಿಳೆ ಉತ್ತರಪ್ರದೇಶ ಮೂಲದ ವ್ಯಕ್ತಿಯನ್ನು ಮದುವೆಯಾದರೆ, ಆಕೆಯ ಪೌರತ್ವವನ್ನು ರದ್ದು ಮಾಡಲಾಗುತ್ತಿತ್ತು, ಆಸ್ತಿ ಹಕ್ಕು ಸಿಗುತ್ತಿರಲಿಲ್ಲ" ಎಂದು ಹೇಳಿದರು

"ಕಾಶ್ಮೀರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡ ಈ ಕ್ರಮಕ್ಕೆ ಮುಸ್ಲಿಂ ಕಾರ್ಯಕರ್ತರು ಖಂಡಿತವಾಗಿ ಸಂಭ್ರಮಿಸಬೇಕು. ಹಿಂದು ಅಥವಾ ಮುಸ್ಲಿಮರು ಎಲ್ಲರೂ ಸಂಭ್ರಮಾಚರಣೆ ಮಾಡಬೇಕು" ಎಂದು ಹೇಳಿದ್ದಾರೆ.

English summary
‘Now, marry fair Kashmiri women', says BJP MLA Vikram Saini from Uttar Pradesh's Muzaffarnagar district after article 370 repeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X