ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಗೆ 'ನೊ ಎಂಟ್ರಿ' ಬೋರ್ಡ್ ನ ಸ್ವಾಗತ!

Recommended Video

      ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕಿದ್ದು ' ನೋ ಎಂಟ್ರಿ ಬೋರ್ಡ್ ' ಸ್ವಾಗತ | Oneindia Kannada

      ಲಕ್ನೋ, ಅಕ್ಟೋಬರ್ 11: ಉತ್ತರ ಪ್ರದೇಶದಲ್ಲಿ ಹಲವೆಡೆ ಬಿಜೆಪಿ ಮುಖಂಡರನ್ನು 'ನೋ ಎಂಟ್ರಿ' ಬೋರ್ಡ್ ಸ್ವಾಗತಿಸುತ್ತಿರುವುದು, ಪಕ್ಷದ ಮುಖಂಡರಿಗೆ ದೊಡ್ಡ ತಲೆನೋವೆನ್ನಿಸಿದೆ!

      ಹಲವು ಕಾರಣಗಳಿಂದ ಬಿಜೆಪಿ ಮುಖಂಡರಿಗೆ ಊರೊಳಗೆ ಬರಲು ಜನರು ಬಿಡುತ್ತಿಲ್ಲ. ಬಿಜೆಪಿ ಮುಖಂಡರು ಯಾವುದಾದರೂ ಕಾರ್ಯಕ್ರಮಕ್ಕೆ ತೆರಳಿದರೆ ಅಲ್ಲಿ 'ನೋ ಎಂಟ್ರಿ' ಬೋರ್ಡ್ ಹಾಕಿ ಅವರನ್ನು ವಾಪಸ್ ಕಳಿಸಲಾಗುತ್ತಿದೆ.

      ಬಿಜೆಪಿಯನ್ನು ತಳಮಟ್ಟದಿಂದ ಮೇಲೆತ್ತುವ ಉದ್ದೇಶ ಹೊತ್ತು ಊರಿಂದೂರಿಗೆ ತೆರಳುತ್ತಿರುವ ಬಿಜೆಪಿ ಮುಖಂಡರಿಗೆ ಇದರಿಂದ ಇರಿಸುಮುರಿಸುಂಟಾಗಿದೆ.

      No entry boards inviting BJP men in Uttar Pradesh

      ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಪಕ್ಷದ ವರಿಷ್ಟರು, ಬಿಜೆಪಿ ಶಾಸಕ, ಸಂಸದರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲೇ ಇದ್ದು, ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಹೇಳಿದ್ದಾರೆ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರ ಮೇಲೆ ಮತದಾರರು ಮುನಿಸಿಕೊಂಡಿರುವುದು ಬಿಜೆಪಿಗೆ ದೊಡ್ಡ ತಲೆನೋವಾಗಿದೆ.

      ಹಿಂದುಳಿದ ವರ್ಗ ಮತ್ತು ಮುಸ್ಲಿಂ ಮತೀಯರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದು, ಅವರ ಕೋಪ ತಣ್ಣಗಾಗುವವರೆಗೂ ನಾವು ನಮ್ಮ ಕ್ಷೇತ್ರಗಳಿಗೆ ತೆರಳದಿರುವುದೇ ಲೇಸು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+