ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮೋದಿ ತದ್ರೂಪಿ ಕಣಕ್ಕೆ

|
Google Oneindia Kannada News

Recommended Video

Lok Sabha Elections 2019 : ವಾರಣಾಸಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮೋದಿ ತದ್ರೂಪಿ ಕಣಕ್ಕೆ

ಲಕ್ನೋ, ಏಪ್ರಿಲ್ 13 : ಕರ್ನಾಟಕದ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಬೇಕೆಂದು ಅವರದೇ ಹೆಸರಿರುವ ಮೂರ್ನಾಲ್ಕು 'ಸುಮಲತೆ'ಯರನ್ನು ಕಣಕ್ಕಿಳಿಸಿದ್ದೇ ಇಳಿಸಿದ್ದು, ಇದೇ ಬಗೆಯ ತಂತ್ರಗಾರಿಕೆಯನ್ನು ನರೇಂದ್ರ ಮೋದಿಯವರನ್ನು ಸೋಲಿಸಲು ಕೂಡ ಬಳಸಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯದಲ್ಲಾಗಿದ್ದರೆ "ಸುಮಲತಾ ಎಂಬ ಹೆಸರಿನವಳಾದ ನಾನು..." ಎಂದು ಪ್ರಮಾಣವಚನ ಸ್ವೀಕರಿಸಲು ಸಿದ್ಧರಿದ್ದ ಮೂವರು ವಿಭಿನ್ನ ಮುಖಚೆಹರೆ ಇರುವ ಮಹಿಳೆಯರು ಲೋಕಸಭೆ ಚುನಾವಣಾ ಕಣಕ್ಕೆ ಇಳಿದಿದ್ದರೆ, ವಾರಣಾಸಿಯಲ್ಲಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿಯನ್ನು ಕಣಕ್ಕೆ ಇಳಿಸಲಾಗಿದೆ.

ವಾರಣಾಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ತೊಡೆತಟ್ಟುವವರು ಯಾರು? ವಾರಣಾಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ತೊಡೆತಟ್ಟುವವರು ಯಾರು?

ದೇಹದ ಆಕಾರ, ಉಡುಗೆ ತೊಡುಗೆ, ಕೇಶವಿನ್ಯಾಸ, ನೋಟದಲ್ಲೆಲ್ಲ ಹೆಚ್ಚೂಕಡಿಮೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿ ಅಭಿನಂದನ್ ಪಾಠಕ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಲಕ್ನೋ ಮತ್ತು ವಾರಣಾಸಿ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ.

Narendra Modi lookalike to contest against him in Varanasi

ಅವರು ಶುಕ್ರವಾರ ಲಕ್ನೋದಿಂದ ನಾಮಪತ್ರ ಸಲ್ಲಿಸಿದ್ದರೆ, ಏಪ್ರಿಲ್ 26ರಂದು ವಾರಣಾಸಿಯಿಂದಲೂ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲಿದ್ದಾರೆ. "ನಾನೇನು ಡಮ್ಮಿ ಅಭ್ಯರ್ಥಿಯಲ್ಲ. ನಾನು ಯಾರ ವಿರುದ್ಧವೂ ಸ್ಪರ್ಧಿಸುತ್ತಿಲ್ಲ, ಆದರೆ ಸುಳ್ಳು ಆಶ್ವಾಸನೆಗಳಿಗೆ ನನ್ನ ವಿರೋಧವಿದೆ" ಎಂದು ಅವರು ಹೇಳಿದ್ದಾರೆ.

ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ನಾನು ಗೆದ್ದ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸುತ್ತೇನೆ ಎಂದು ಅಭಿನಂದನ್ ಪಾಠಕ್ ಅವರು ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕೈಗೆ ದಾರ ಕಟ್ಟಿಕೊಳ್ಳುವುದಿರಲಿ, ಕನ್ನಡಕ ಧರಿಸುವುದಿರಲಿ, ಉಡುಗೆ ತೊಡುಗೆಯಲ್ಲಿ ನರೇಂದ್ರ ಮೋದಿಯವರನ್ನೇ ಅನುಕರಿಸುವ ಅಭಿನಂದನ್ ಅವರು ಮೋದಿಯವರ ವಿರುದ್ಧವೇ ಕಣಕ್ಕಿಳಿದಿದ್ದಾರೆ.

ಮೋದಿಯ ಪಡಿಯಚ್ಚು ಉಡುಪಿಯ ಅಡುಗೆ ಭಟ್ಟ ಸದಾನಂದ ನಾಯಕ್ ಮೋದಿಯ ಪಡಿಯಚ್ಚು ಉಡುಪಿಯ ಅಡುಗೆ ಭಟ್ಟ ಸದಾನಂದ ನಾಯಕ್

ಈ ತಂತ್ರಗಾರಿಕೆಯಿಂದ ನರೇಂದ್ರ ಮೋದಿಯವರನ್ನು ವಾರಣಾಸಿ ಕ್ಷೇತ್ರದಲ್ಲಿ ಸೋಲಿಸಲು ಸಾಧ್ಯವೆ? ಪ್ರಭಾವಿ ನಾಯಕರಾಗಿರುವ ಅರವಿಂದ್ ಕೇಜ್ರಿವಾಲ್ ಅವರೇ ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದರು.

English summary
Narendra Modi lookalike Abhinandan Pathak to contest against Modi in Varanasi. He has also filed nomination from Lucknow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X