ಉತ್ತರ ಪ್ರದೇಶದಲ್ಲಿ ಊರಿಗೆ ಮರಳಿದ ವಲಸೆ ಕಾರ್ಮಿಕ ಆತ್ಮಹತ್ಯೆ

ಲಕ್ನೋ, ಜೂನ್ 12: ಕೊರೊನಾ ಲಾಕ್‌ಡೌನ್‌ನಲ್ಲಿ ಸಿಲುಕಿ ಹೇಗೋ ಮನೆಗೆ ಮರಳಿದ್ದ ವಲಸೆ ಕಾರ್ಮಿಕ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Recommended Video

      Indian stands 4th in the world in corona cases count | Oneindia Kannada

      ಉತ್ತರಾಖಂಡದ ಹರಿದ್ವಾರದ ಕಂಪನಿಯೊಂದರಲ್ಲಿ ಅಂಜನಿ ಕುಮಾರ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದರು. ಹದಿನೈದು ದಿನಗಳ ಹಿಂದಷ್ಟೇ ಮಠ ಯೋಗೇಂದ್ರ ಗಿರಿ ಗ್ರಾಮದ ತನ್ನ ಮನೆಗೆ ಹಿಂದಿರುಗಿದ್ದರು. ದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

      ಆರ್ಥಿಕವಾಗಿ ದುರ್ಬಲರಾಗಿದ್ದರು, ಕೆಲಸವಿಲ್ಲದ ಕಾರಣ ಮಾನಸಿಕವಾಗಿ ಕುಗ್ಗಿಹೋಗಿದ್ದರು, ಹೀಗಾಗಿ ಈ ನಿರ್ಧಾರ ಮಾಡಿರಬಹುದು ಎಂದು ಕುಟುಂಬದವರು ತಿಳಿಸಿದ್ದಾರೆ.

      Migrant Labourer Commits Suicide After Returning Home In UP

      ದೇಶದಲ್ಲಿರುವ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಊರಿಗೆ ಮರಳಲು ಕಾರ್ಮಿಕರು ಕಷ್ಟಪಡುತ್ತಿದ್ದಾರೆ.

      ಕೇಂದ್ರ ಸರ್ಕಾರವು ಶ್ರಮಿಕ್ ವಿಶೇಷ ರೈಲಿನ ಮೂಲಕ ಕಾರ್ಮಿಕರನ್ನು ಊರಿಗೆ ತೆರಳಲು ಅವಕಾಶ ಮಾಡಿಕೊಡುತ್ತಿದೆ ಆದರೆ, ಊರಲ್ಲಿ ಕೆಲಸವಿಲ್ಲದೆ ಆಹಾರ ಸಾಮಗ್ರಿಗಳನ್ನು ಕೊಳ್ಳಳು ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+