ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಕಿಮ್ಮತ್ತಿಲ್ಲ?!

|
Google Oneindia Kannada News

ಲಕ್ನೋ, ಡಿಸೆಂಬರ್ 19: ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಎಲ್ಲ ವಿರೋಧಪಕ್ಷಗಳನ್ನು ಜೊತೆಗೂಡಿಸಿ ಮಹಾ ಮೈತ್ರಿಕೂಟವನ್ನು ರಚಿಸಿದೆ.

ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸುವುದು ಇದರ ಉದ್ದೇಶ. ಆದರೆ, ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳೇ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗುವ ಸಾಧ್ಯತೆಗಳು ಗೋಚರಿಸಿವೆ.

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಬಹುತೇಕ ಕಡೆ ರಾಜಕೀಯ ಪಕ್ಷಗಳು ಈಗಾಗಲೇ ಸೀಟು ಪ್ರಕ್ರಿಯೆಯಂತಹ ಚಟುವಟಿಕೆಗಳನ್ನು ಆರಂಭಿಸಿವೆ.

'ವಿಪಕ್ಷಗಳ ಮಹಾಘಟಬಂಧನ ಭ್ರಮೆ, ಮತ್ತೆ ಅಧಿಕಾರಕ್ಕೆ ಬರೋದು ಬಿಜೆಪಿಯೇ!' 'ವಿಪಕ್ಷಗಳ ಮಹಾಘಟಬಂಧನ ಭ್ರಮೆ, ಮತ್ತೆ ಅಧಿಕಾರಕ್ಕೆ ಬರೋದು ಬಿಜೆಪಿಯೇ!'

ಮೂಲಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳು ಸೀಟು ಹಂಚಿಕೆಯ ಪಟ್ಟಿಯನ್ನು ಅಂತಿಮಗೊಳಿಸಿವೆ. ಆದರೆ, ಈ ಪ್ರಕ್ರಿಯೆಯಲ್ಲಿ ಮಹಾಮೈತ್ರಿ ಕೂಟದ ಪ್ರಮುಖ ಪಕ್ಷವಾದ ಕಾಂ‍ಗ್ರೆಸ್ ಅನ್ನೇ ಹೊರಗಿಡಲಾಗಿದೆ.

ಮುರು ಪಕ್ಷಗಳ ನಡುವೆ ಒಪ್ಪಂದ

ಮುರು ಪಕ್ಷಗಳ ನಡುವೆ ಒಪ್ಪಂದ

ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸೀಟು ಹಂಚಿಕೆಯ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿಕೊಂಡಿವೆ. ರಾಷ್ಟ್ರೀಯ ಲೋಕ ದಳ ಪಕ್ಷವೂ ಈ ಒಪ್ಪಂದದಲ್ಲಿ ಭಾಗಿಯಾಗಿದೆ. ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಎರಡೂ ಸಮಾನವಾಗಿ ಸೀಟುಗಳನ್ನು ಹಂಚಿಕೆ ಮಾಡಿಕೊಂಡಿದ್ದು, ಲೋಕದಳ ಪಕ್ಷಕ್ಕೆ ಅಭ್ಯರ್ಥಿಗಳನ್ನು ಇಳಿಸಲು ಮೂರು ಪಕ್ಷಗಳನ್ನು ಬಿಟ್ಟುಕೊಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಝೀ ನ್ಯೂಸ್ ವರದಿ ಮಾಡಿದೆ.

ರಾಹುಲ್ ಗಾಂಧಿಗೇ ಪ್ರಧಾನಿ ಪಟ್ಟ: ಸ್ಟಾಲಿನ್ ತರ್ಕವೇನು?ರಾಹುಲ್ ಗಾಂಧಿಗೇ ಪ್ರಧಾನಿ ಪಟ್ಟ: ಸ್ಟಾಲಿನ್ ತರ್ಕವೇನು?

ಜನವರಿಯಲ್ಲಿ ಪಟ್ಟಿ ಘೋಷಣೆ

ಜನವರಿಯಲ್ಲಿ ಪಟ್ಟಿ ಘೋಷಣೆ

2019ರ ಜನವರಿ 15ರಂದು ಬಿಎಸ್ಪಿ ನಾಯಕಿ ಮಾಯಾವತಿ ಅವರ ಜನ್ಮದಿನದ ಆಚರಣೆ ವೇಳೆ ಈ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ಚುನಾವಣೆಯಲ್ಲಿ ಭರ್ಜರಿ ಬೇಟೆಯಾಡಿದ್ದ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮತ್ತು ಎಸ್ಪಿ ಜತೆಗೂಡಿರುವುದು ಕಠಿಣ ಸವಾಲು ನೀಡಲಿದೆ. ಗೋರಖ್‌ಪುರ ಮತ್ತು ಫುಲ್ಪುರ್ ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿ ಮತ್ತು ಎಸ್ಪಿ ಜೊತೆಗೂಡಿ ಚುನಾವಣೆ ಎದುರಿಸಿ ಬಿಜೆಪಿ ಅಭ್ಯರ್ಥಿಗಳನ್ನು ಸುಲಭವಾಗಿ ಸೋಲಿಸಿದ್ದವು.

ಜೊತೆಯಾಗಿ ಪ್ರಯಾಣಿಸಿದ 'ಮಹಾಘಟಬಂಧನ'ದ ಪ್ರಯಾಣಿಕರು!ಜೊತೆಯಾಗಿ ಪ್ರಯಾಣಿಸಿದ 'ಮಹಾಘಟಬಂಧನ'ದ ಪ್ರಯಾಣಿಕರು!

ಬೆಂಬಲ ನೀಡದ ಮಾಯಾವತಿ

ಬೆಂಬಲ ನೀಡದ ಮಾಯಾವತಿ

ಇತ್ತೀಚೆಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಚುನಾವಣೆಗೂ ಮುನ್ನ ಕಾಂಗ್ರೆಸ್ ಹಾಗೂ ಮೈತ್ರಿಕೂಟದೊಂದಿಗೆ ಕೈಜೋಡಿಸುವುದಿಲ್ಲ ಎಂದು ಮಾಯಾವತಿ ಘೋಷಿಸಿದ್ದರು. ಇದರಿಂದಾಗಿ ಕಾಂಗ್ರೆಸ್, ಎಸ್ಪಿಯನ್ನು ಸಂಪರ್ಕಿಸಿತ್ತು. ಇದರಿಂದ ಅದಕ್ಕೆ ಬಹುದೊಡ್ಡ ಲಾಭವೇನೂ ದಕ್ಕಲಿಲ್ಲ. ಆದರೂ ಕಾಂಗ್ರೆಸ್ 114 ಸ್ಥಾನಗಳಲ್ಲಿ ಜಯಗಳಿಸಿತು. ಸರ್ಕಾರ ರಚನೆಗೆ ಎರಡು ಸೀಟುಗಳ ಕೊರತೆ ಬಿದ್ದಿದ್ದರಿಂದ ಕಾಂಗ್ರೆಸ್‌ಗೆ ಬಿಎಸ್ಪಿ ಬೆಂಬಲ ನೀಡಿ ಸರ್ಕಾರ ರಚನೆಗೆ ಅವಕಾಶ ನೀಡಿತು.

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಹಾಘಟಬಂಧನದ ವಿರಾಟರೂಪ ದರ್ಶನ?ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಹಾಘಟಬಂಧನದ ವಿರಾಟರೂಪ ದರ್ಶನ?

ಮೈತ್ರಿಗೆ ಭಾರಿ ಸೋಲಾಗಿತ್ತು

ಮೈತ್ರಿಗೆ ಭಾರಿ ಸೋಲಾಗಿತ್ತು

2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಈ ಮೈತ್ರಿಕೂಟಕ್ಕೆ ಕಹಿ ದೊರಕಿತ್ತು. ಬಿಜೆಪಿ ದಿಗ್ವಿಜಯ ಸಾಧಿಸಿತ್ತು.

ಈಗ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅನ್ನು ನೆಚ್ಚಿಕೊಂಡು ಮುಂದುವರಿಯಲು ಎಸ್ಪಿ ಮತ್ತು ಬಿಎಸ್ಪಿ ಸಿದ್ಧರಿಲ್ಲ ಎನ್ನಲಾಗಿದೆ. ಈ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿ ತಮ್ಮ ಪ್ರಭಾವಳಿಯನ್ನೇ ನೆಚ್ಚಿಕೊಂಡು 80 ಸೀಟುಗಳ ರಾಜ್ಯದಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಮುಂದಾಗಿವೆ. ಸೀಟು ಹಂಚಿಕೆಯ ಲೆಕ್ಕಾಚಾರದಿಂದ ಕಾಂಗ್ರೆಸ್‌ಅನ್ನು ಹೊರಗಿಟ್ಟು ಒಪ್ಪಂದ ಮಾಡಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

English summary
Opposition Parties in Uttar Pradesh finalised the share seating arrangement and Congress party has been left out of the arrangement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X