ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ ಪೋಷಕರ ವಿವಾಹಿತ ಹೆಣ್ಣುಮಕ್ಕಳು ಸರ್ಕಾರಿ ನೌಕರಿ ಪಡೆಯಲು ಅರ್ಹರು: ಉ.ಪ್ರ ಸರ್ಕಾರ

|
Google Oneindia Kannada News

ಲಕ್ನೋ, ನವೆಂಬರ್ 12: ಪೋಷಕರ ಅವಲಂಬಿತರ ಕೋಟಾದಡಿ ಅವರ ವಿವಾಹಿತ ಹೆಣ್ಣುಮಕ್ಕಳಿಗೂ ಸರ್ಕಾರಿ ನೌಕರಿ ನೀಡುವ ಮಹತ್ವದ ನಿರ್ಧಾರವನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕೈಗೊಂಡಿದೆ.

ಸರ್ಕಾರಿ ಸೇವೆಯಲ್ಲಿ ಅವಧಿ ಇನ್ನೂ ಇದ್ದು ಸರ್ಕಾರಿ ನೌಕರಿಯಲ್ಲಿರುವ ಪೋಷಕರು ಸಾವಿಗೀಡಾದಾದರೆ, ಅವರ ವಿವಾಹಿತ ಹೆಣ್ಣುಮಕ್ಕಳು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಲು ಅರ್ಹರಾಗಿರುತ್ತಾರೆ ಎಂಬ ಪ್ರಸ್ತಾವನೆಗೆ ಉತ್ತರಪ್ರದೇಶ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

2024ರಲ್ಲಿ ಭಾಗ್ಯದ ಬಾಗಿಲು ತೆರೆಯಲು ಯುಪಿ ಗೆಲುವು ಅತ್ಯಗತ್ಯ: ಅಮಿತ್ ಶಾ 2024ರಲ್ಲಿ ಭಾಗ್ಯದ ಬಾಗಿಲು ತೆರೆಯಲು ಯುಪಿ ಗೆಲುವು ಅತ್ಯಗತ್ಯ: ಅಮಿತ್ ಶಾ

ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಹಿಳಾ ಪರವಾಗಿ ಪ್ರಚಾರ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಹಿಳೆಯರ ಪರವಾಗಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇದು ಚುನಾವಣೆಯಲ್ಲಿ ಮಹಿಳೆಯರ ಮತಗಳ ಮೇಲೆ ಕಣ್ಣಿಡಲಾಗಿದೆ ಎಂದು ಹೇಳಲಾಗುತ್ತಿದೆ.

Married Daughters Of Deceased Parents Are Eligible For Government Employment: Uttar Pradesh Govt

ಈವರೆಗೆ, ಮೃತ ಸರ್ಕಾರಿ ನೌಕರರ ಅವಲಂಬಿತ ಪತ್ನಿ, ವಿವಾಹಿತ/ ಅವಿವಾಹಿತ ಪುತ್ರ ಮತ್ತು ಅವಿವಾಹಿತ ಪುತ್ರಿಗೆ ಮಾತ್ರ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ನೀಡಲಾಗುತ್ತಿತ್ತು. ಆ ಸಾಲಿಗೆ ವಿವಾಹಿತ ಹೆಣ್ಣುಮಕ್ಕಳನ್ನು ಸೇರಿಸುವ ಮೂಲಕ "ಅವಲಂಬಿತ ಹೆಣ್ಣುಮಕ್ಕಳು" ವ್ಯಾಖ್ಯಾನವನ್ನು ಸಂಪುಟ ವಿಸ್ತರಿಸಿದೆ.

ಸರ್ಕಾರಿ ನೌಕರಿಯಲ್ಲಿರುವ ಪೋಷಕರು ಮೃತಪಟ್ಟರೆ ಅವರ ಮನೆಯಲ್ಲಿ ಬೇರೆಯವರು ನೌಕರಿಯನ್ನು ನಿರಾಕರಿಸಿದರೆ, ಅದೇ ಕುಟುಂಬದ ವಿವಾಹಿತೆ ನೌಕರಿ ಪಡೆಯಲು ಅರ್ಹರಾಗಿರುತ್ತಾಳೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಮರಣ ಹೊಂದಿದ ಸರ್ಕಾರಿ ನೌಕರರ ನಿಯಮ 2021ರಲ್ಲಿ 12ನೇ ತಿದ್ದುಪಡಿಯಾಗಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ.

ವಿವಾಹಿತ ಹೆಣ್ಣುಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಪೋಷಕರ ಹುದ್ದೆಗೆ ನೇಮಕ ಮಾಡುವ ನಿಯಮಗಳಲ್ಲಿ "ಕುಟುಂಬ" ಎಂಬ ವ್ಯಾಖ್ಯಾನದಿಂದ ಹೊರಗಿಟ್ಟಿರುವುದು ಅಸಂವಿಧಾನಿಕ. ಅಲ್ಲದೇ ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ ಅಭಿಪ್ರಾಯಪಟ್ಟಿತ್ತು.

Recommended Video

ಚಪ್ಪಾಳೆ ತಟ್ಟಿ ಪಾಕ್ ಗೆ ಬೆಂಬಲಿಸಿದ Sania Mirzaಗೆ ಭಾರತೀಯರು ಹೇಳಿದ್ದೇನು? | Oneindia Kannada

English summary
The Uttar Pradesh government has approved that married daughters of the deceased parents are eligible to get government employment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X