ಅತ್ತಿಗೆ ಜೊತೆಗೆ ಸಲುಗೆ; ಅಣ್ಣನ ಕೈಯಲ್ಲೇ ಹೆಣವಾದ ತಮ್ಮ!

ಲಕ್ನೋ, ಜುಲೈ.17: ಬಾಳುವುದು ಹೆಣ್ಣಿಂದ ಮನುಜ ಬೀಳುವುದು ಹೆಣ್ಣಿಂದ- ಕೃಷ್ಣ ಮೆಚ್ಚಿದ ರಾಧೆ ಸಿನಿಮಾದಲ್ಲಿ ಬರುವ ಈ ಹಾಡಿಗೂ ಉತ್ತರ ಪ್ರದೇಶದಲ್ಲಿ ನಡೆದ ಒಂದು ಘಟನೆಗೂ ಹೇಳಿ ಮಾಡಿಸಿದಂತೆ ಹೋಲಿಕೆ ಆಗುತ್ತದೆ.

Recommended Video

      Yeddyurappa Government Fail Again!! | Oneindia Kannada

      ಅಣ್ಣನ ಕೈಯಲ್ಲೇ ತಮ್ಮನ ನೆತ್ತರು ಹರಿದಿದೆ. ಅತ್ತಿಗೆ ಜೊತೆಗೆ ಮೈದುನ ಬಯಸಿದ ಸಲುಗೆ ಇಡೀ ಮನೆಯನ್ನೇ ಮಸಣ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಪಿಲಿಭಿತ್ ಜಿಲ್ಲೆಯ ಬಿಸಲ್ಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

      ಅತ್ತಿಗೆ ಜೊತೆಗೆ 20 ವರ್ಷದ ತನ್ನ ಸಹೋದರ ಆತ್ಮೀಯವಾಗಿ ಇರುವದನ್ನೇ ಅನುಮಾನಿಸಿದ 30 ವರ್ಷದ ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ. ಅಚ್ಚರಿ ಎಂದರೆ ಸ್ವತಃ ಅತ್ತಿಗೆಯೂ ಕೂಡಾ ಈ ಕೊಲೆಯಲ್ಲಿ ಶಾಮೀಲು ಆಗಿದ್ದಾರೆ.

      20 ವರ್ಷದ ಸಹೋದರ ಕುತ್ತಿಗೆ ಸೀಳಿದ ಅಣ್ಣ

      20 ವರ್ಷದ ಸಹೋದರ ಕುತ್ತಿಗೆ ಸೀಳಿದ ಅಣ್ಣ

      ಉತ್ತರ ಪ್ರದೇಶದ ಬಿಸಲ್ಪುರ್ ನಲ್ಲಿ ವಾಸವಿದ್ದ 20 ವರ್ಷದ ವೇದ್ ಪ್ರಕಾಶ್ ತನ್ನ ಅತ್ತಿಗೆ ಗ್ಯಾನ್ ದೇವಿ ಜೊತೆೆಗೆ ಸಲುಗೆಯಿಂದ ವರ್ತಿಸುತ್ತಿದ್ದನು. ಇದರಿಂದ ಅತ್ತಿಗೆಗೂ ಕೊಂಚ ಇರಿಸುಮುರಿಸು ಉಂಟಾಗುತ್ತಿದ್ದು, ಈ ಕುರಿತು ಪತಿಯಲ್ಲಿ ದೂರು ಹೇಳಿದ್ದಾಳೆ. ಈ ವಿಚಾರ ತಿಳಿದ ಓಂಪ್ರಕಾಶ್ ಸ್ವತಃ ತಮ್ಮನನ್ನೇ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

      ಅನುಮಾನ ಬಾರದಂತೆ ಮೃತದೇಹ ಎಸೆದ ದಂಪತಿ

      ಅನುಮಾನ ಬಾರದಂತೆ ಮೃತದೇಹ ಎಸೆದ ದಂಪತಿ

      ಮನೆಯಲ್ಲಿ ತಂದೆ ಇಲ್ಲದ ಸಮಯವನ್ನು ನೋಡಿಕೊಂಡು ವೇದ್ ಪ್ರಕಾಶ್ ನನ್ನು ಅಣ್ಣ ಓಂಪ್ರಕಾಶ್ ಮತ್ತು ಅತ್ತಿಗೆ ಗ್ಯಾನ್ ದೇವಿ ಸೇರಿಕೊಂಡು ಹತ್ಯೆ ಮಾಡಿದ್ದಾರೆ. ನಂತರದಲ್ಲಿ ಅನುಮಾನ ಬಾರದಿರಲಿ ಎಂದು ಮೃತದೇಹವನ್ನು ಪಕ್ಕದ ಮನೆಯ ಎದುರಿನಲ್ಲಿ ಎಸೆದು ಬಂದಿದ್ದಾರೆ.

      ಮಗ ಮತ್ತು ಸೊಸೆ ಮೇಲೆ ಅನುಮಾನಗೊಂಡ ತಂದೆ

      ಮಗ ಮತ್ತು ಸೊಸೆ ಮೇಲೆ ಅನುಮಾನಗೊಂಡ ತಂದೆ

      ವೇದ್ ಪ್ರಕಾಶ್ ಕೊಲೆ ಬಳಿಕ ಸ್ವತಃ ತಂದೆ ಬಾಬು ರಾಮ್ ಅವರಿಗೆ ಹಿರಿಯ ಪುತ್ರ ಓಂ ಪ್ರಕಾಶ್ ಮತ್ತು ಸೊಸೆ ಗ್ಯಾನ್ ದೇವಿ ಮೇಲೆ ಅನುಮಾನ ಮೂಡಿದೆ. ಈ ಹಿನ್ನೆಲೆ ತಂದೆಯೇ ಹಿರಿಯ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

      ಕೊಲೆಗೈದ ದಂಪತಿಯನ್ನು ಬಂಧಿಸಿದ ಪೊಲೀಸರು

      ಕೊಲೆಗೈದ ದಂಪತಿಯನ್ನು ಬಂಧಿಸಿದ ಪೊಲೀಸರು

      ಇನ್ನು, ಕೊಲೆಯಾದ ವೇದ್ ಪ್ರಕಾಶ್ ನೀಡಿದ ದೂರಿನ ತನಿಖೆ ಆರಂಭಿಸಿದ ಪೊಲೀಸರು ಓಂ ಪ್ರಕಾಶ್ ಮತ್ತು ಗ್ಯಾನ್ ದೇವಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 302ರ ಕೊಲೆ ಮತ್ತು 32ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+